ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ

ಹಾನಗಲ್ಲ :

        ಧರ್ಮ ಸಂಸ್ಕಾರಗಳಿಲ್ಲದೆ ನಾಗರೀಕತೆಯ ಹೆಸರಿನಲ್ಲಿ ಅನಾಗರಿಕತೆ ತಾಂಡವವಾಡುತ್ತಿದ್ದು, ಈಗಲಾದರೂ ಎಚ್ಚತ್ತುಕೊಳ್ಳದಿದ್ದರೆ ಮೃಗೀಯ ಸಮಾಜದ ದುರಂತಕ್ಕೆ ತುತ್ತಾಗಬೇಕಾಗುತ್ತದೆ ಎಂದು ಅಕ್ಕಿಆಲೂರಿನ ಮುತ್ತಿನಕಂತಮಠದ ಚಂದ್ರಶೇಖರ ಶಿವಾಚಾರ್ಯರು ಎಚ್ಚರಿಸಿದರು.

           ರವಿವಾರ ಹಾನಗಲ್ಲಿನ ಗುರುಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿ ನೂತನ ವರ್ಷ – 2019 ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ವೀರಶೈವ-ಲಿಂಗಾಯತ ಧವರ್ವನ್ನು ಒಡೆಯಲು ಹೋದವರು ಸರಿಯಾದ ಪೆಟ್ಟು ತಿಂದಿದ್ದಾರೆ.

         ಚುನವಣೆ ಮೂಲಕ ಅವರು ಪಾಠ ಕಲಿತಿದ್ದಾರೆ. ಕರ್ನಾಟಕದಲ್ಲಿ ಯಾವು ಸರಕಾರಿ ಇರಬೇಕು ಎಂಬುದನ್ನು ನಿರ್ಣಯಿಸುವ ಶಕ್ತಿ ಇರುವ ವೀರಶೈವ ಲಿಂಗಾಯತರು ಪಂಡಗಡಗಳಾಗಿ ವಿಭಾಗಗೊಂಡು, ಅಸಂಘಟನೆ ಕಾರಣವಾಗಿ ಅಲ್ಪ ಸಂಖ್ಯಾತರಾಗಿ ದೌರ್ಬಲ್ಯಕ್ಕೊಳಗಾಗಿದ್ದಾರೆ .

          ಕರ್ನಾಟಕದ ಸರಕಾರ ಉತ್ತರ ಕರ್ನಾಟಕವನ್ನು ಉದ್ದೇಶಪೂರ್ವಕವಾಗಿ ಅಭಿವೃದ್ಧಿಯಿಂದ ದೂರ ಸರಿಸುತ್ತಿದೆ. ಉತ್ತರ ಕರ್ನಾಟಕದಲ್ಲಿರುವ ಲಿಂಗಾಯತರನ್ನು ಕಡೆಗಣಿಸುತ್ತಿದೆ. ಈಗ ವೀರಶೈವ ಲಿಂಗಾಯತರು ಜಾಗೃತವಾಗಿ ಸಮಾಜವನ್ನು ಕಟ್ಟುವ ಕೆಲಸಕ್ಕೆ ಆದ್ಯತೆ ನೀಡಬೇಕಾಗಿದೆ. 86 ಒಳಪಂಗಡಗಳು ಒಂದೇ ಸೂರಿನಡಿ ಸಂಘಟಿತರಾಗಿ ಕರ್ನಾಟದಲ್ಲಿ ಸರಕಾರಗಳಿಗೂ ತಮ್ಮ ಶಕ್ತಿ ತೋರಬೇಕಾಗಿದೆ. ಇದರೊಂದಿಗೆ ನಮ್ಮ ಆಚರಣೆಗಳನ್ನು ಬಿಡದಿರಿ. ಒಳ್ಳೆಯ ಸಂಸ್ಕಾರ ಎಲ್ಲರನ್ನೂ ಒಳ್ಳೆಯವರನ್ನಾಗಿ ಮಾಡುತ್ತದೆ ಎಂದರು.

          ಆಶಯ ನುಡಿ ನುಡಿದ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ, ಒಳ ಪಂಗಡಗಳ ಸಂಘಟನೆಯ ಬಗೆಗೆ ಭಿನ್ನಾಭಿಪ್ರಾಯ ಬೇಡ. ವೀರಶೈವ ಲಿಂಗಾಯತ ಧರ್ಮದ ಪ್ರಶ್ನೆ ಬಂದಾಗ ಒಂದಾಗೋಣ. ನಮ್ಮ ಒಳ ಪಂಗಡಗಳ ಅತೃಪ್ತಿ ಅಸಮಾಧಾನಗಳ ದುರುಪಯೋಗ ಪರರು ಪಡೆಯುತ್ತಿದ್ದಾರೆ ಎಂಬ ಎಚ್ಚರಿಕೆ ನಮಗೆ ಬೇಕಾಗಿದೆ. ನಮ್ಮೊಳಗೆ ಇರುವ ಕೆಲ ದುಷ್ಟ ಹಿತಾಸಕ್ತಿಗಳು ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುತ್ತಿರುವುದನ್ನು ಖಂಡಿಸಬೇಕಾಗಿದೆ. ಅಂಥಹವರಿಂದ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.

           ಅಧ್ಯಕ್ಷತೆವಹಿಸಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಕರಿಯಣ್ಣನವರ, ವೀರಶೈವ ಲಿಂಗಾಯತ ನೌಕರರ ಸಂಘಟನೆಗೆ ಒಳ್ಳೆಯ ಬೆಂಬಲ ದೊರೆತಿದೆ. ನೌಕರೇತರ ಬಂಧುಗಳು ಪ್ರೋತ್ಸಾಹಿಸಿದ್ದಾರೆ. ಒಳ ಪಂಗಡಗಳ ಅತಿಯಾದ ಪ್ರತಿಕ್ರಿಯೆಗಳು ಗೌಣವಾಗಿ ವೀರಶೈವ ಲಿಂಗಾಯತದಡಿ ನಮ್ಮನ್ನು ಗುರುತಿಸಿಕೊಂಡು ಸಂಘಟಿತರಾಗೋಣ. ನಮ್ಮ ಸಂಘಟನೆ ನಮ್ಮ ರಕ್ಷಣೆಗಾಗಿಯೇ ಹೊರತು ಯಾರದೋ ವಿರೋಧಕ್ಕಲ್ಲ ಎಂದರು.

           ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶೇಕಣ್ಣ ಮಹಾರಾಜಪೇಟ, ತಾಪಂ ಸದಸ್ಯರಾದ ಬಸವರಾಜ ಬೂದಿಹಾಳ, ಶಂಕ್ರಣ್ಣ ಪ್ಯಾಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವೇರಿ, ಪುರಸಭೆ ಸದಸ್ಯರಾದ ವೀಣಾ ರಾಜೇಶ ಗುಡಿ, ನಾಗಪ್ಪ ಸವದತ್ತಿ, ವಿರುಪಾಕ್ಷಪ್ಪ ಕಡಬಗೇರಿ, ಇಷ್ಟಲಿಂಗ ಸಾಲವಟಗಿ, ಅಜ್ಜಪ್ಪ ಅರಳೇಶ್ವರ, ಎಸ್.ಎಂ.ಕೋತಂಬರಿ, ರಾಜೇಶ ಗುಡಿ, ಶಿಗ್ಗಾಂವ ತಾಲೂಕು ಘಟಕದ ಅಧ್ಯಕ್ಷ ಎಂ.ಬಿ.ಹಳೇಮನಿ, ತಾಲೂಕು ಘಟಕದ ಗೌರವಾಧ್ಯಕ್ಷರಾದ ನಿರಂಜನ ಗುಡಿ, ಎನ್.ಎಂ.ಪಾಟೀಲ, ರಾಕೇಶ ಜಿಗಳಿ, ಎಸ್.ವಿ.ಅಗಸನಹಳ್ಳಿ, ಜೆ.ಆರ್.ಗೂಳಿ, ಎಂ.ಬಿ.ವಡೇರ, ಎಸ್.ವಿ.ಹೊಸಮನಿ, ಎಸ್.ವಿ.ಮಠದ, ಸಿದ್ದು ಗೌರಣ್ಣನವರ, ಸಂತೋಷ ದೊಡ್ಡಮನಿ ಅತಿಥಿಗಳಾಗಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link