ಗುತ್ತಲ:
ಭಾರತ ದೇಶದಲ್ಲಿ 55ವರ್ಷ ಆಡಳಿತ ನಡೆಸಿರುವ ಕಾಂಗ್ರೇಸ್ ಸರಕಾರ ಯಾವುದೇ ಕೆಲಸ ಮಾಡದೇ ಈಗ ಮೋದಿಯುವರು ನವ ಭಾರತ ನಿರ್ಮಾಣ ಮಾಡಲು ಮುಂದಾಗಿರುವದರಿಂದ್ದ ಸಹಿಸಿಕೊಳ್ಳಲಾಗುತ್ತಿಲ್ಲಾ ಭಾರತವನ್ನು ಸದೃಡ ಮಾಡಲು ಮೋದಿಯವರಿಂದ ಮಾತ್ರ ಸಾಧ್ಯ ಎಂದು ಹಾವೇರಿ ಕ್ಷೇತ್ರದ ಬಿಜಿಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.
ಸಮೀಪದ ನೆಗಳೂರ ಗ್ರಾಮದಲ್ಲಿ ಲೋಕಸಭಾ ಚುನಾವಣಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೋದಿಯವರು ಭಾರತವನ್ನು ಮುನ್ನಡೆಸಲು ಒಬ್ಬ ಸಮರ್ಥ ನಾಯಕ ಸಿಕ್ಕಿರುವರು ಆದರೆ ಕಾಂಗ್ರೇಸ್ ಹಾಗೂ ಮೈತ್ರಿ ಪಕ್ಷಗಳಲ್ಲಿ ಸರಿಯಾದ ನಾಯಕ ಇಲ್ಲಾ, ನವ ಭಾರತ ನಿರ್ಮಾಣ ಮಾಡಲು 5ವರ್ಷ ಆಡಳಿತದಲ್ಲಿ ಉತ್ತಮವಾದ ತಳಪಾಯ ಹಾಕಿದ್ದಾರೆ ಮುಂದಿನ 5ವರ್ಷಗಳಲ್ಲಿ ಭವ್ಯವಾದ ಭಾರತವನ್ನು ನಿರ್ಮಾಣ ಮಾಡಲು ಅವಕಾಶ ನೀಡಬೇಕು. ರೈತರ ಮತ್ತು ಸೈನಿಕ ವಿಚಾರದಲ್ಲಿ ರಾಜಕಾರಣ ಮಾಡಬಾರದು, ಹಾವೇರಿ ಜಿಲ್ಲೆಗೆ ಫಸಲ್ ಭಿಮಾ ಯೋಜನೆಯಲ್ಲಿ 80ಕೋಟಿ ಹಣ ನೀಡಲಾಗಿದೆ ಎಂದರು
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ ಈ ಚುನಾವಣಿ ಭಾರತದ ಭವಿಷ್ಯದ ಚುನಾವಣಿಯಂದರೆ ತಪ್ಪಾಗಲಾರದು 21ಪಕ್ಷಗಳು ಒಂದಡೆ ಸೇರಿ ಯುದ್ದಕ್ಕೆ ಸನ್ನಧರಾದರೆ, ಮೋದಿಯವರು ಒಂದೂ ಕಡೆ ಯುದ್ದಕ್ಕೆ ತಯಾರಿ ನಡೆಸಿದ್ದಾರೆ. ಆದರಿಂದ್ದ ಮತದಾರರು ಬಿಜಿಪಿಗೇ ಮತದಾನ ಮಾಡುವ ಮುಂಖಾತರ 21ನೇ ಶತಮಾನವನ್ನು ಭಾರತೀಯರ ಶತಮಾನ ಎಂದು ತಿಳಿಯಬೇಕು.
ಶಾಸಕ ನೆಹರು ಓಲೆಕಾರ ಮಾತನಾಡಿ, ಕೇಂದ್ರ ಸರಕಾರಕರವು ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಿದೆ ತಮ್ಮ ತಮ್ಮ ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೆ ಜಿಪಿಎಸ್ ಮಾಡಲಾಗಿದೆ ಮತ್ತು ಉಜ್ಜಲ್ ಯೋಜನೆಡಿಯಲ್ಲಿ ಉಚಿತವಾಗಿ ಗ್ಯಾಸ್ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ, ಮಂಜುನಾಥ ಓಲೆಕಾರ, ಸಿದ್ದರಾಜ ಕಲಕೋಟಿ, ಮುತ್ತಯ್ಯ ಕಿತ್ತೂರಮಠ, ನಿಂಗಣ್ಣ ಮೈಲಾರ, ಸುರೇಶಗೌಡ ಬಿಷ್ಠನಗೌಡ್ರ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
