ದಾವಣಗೆರೆ:
ಇಲ್ಲಿನ ಎಸ್.ಎಂ. ಬಡಾವಣೆಯ ದಕ್ಷಿಣ ವಲಯದ ವ್ಯಾಪ್ತಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ಯಾನ್‍ಫಿನ್ ಹೋಮ್ಸ್ ಸಂಸ್ಥೆಯಿಂದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
6 ಲಕ್ಷ ರೂ. ಮೌಲ್ಯದ 40 ಡೆಸ್ಕ್‍ಗಳು, ನಲಿ-ಕಲಿ ಮಕ್ಕಳಿಗಾಗಿ 18 ರೌಂಡ್ ಟೇಬಲ್‍ಗಳು, 90 ಕುರ್ಚಿಗಳು ಹಾಗೂ 120 ಲೀಟರ್ ಸಾಮಥ್ರ್ಯದ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಅನ್ನು ದಾನವಾಗಿ ನೀಡಿದ್ದಾರೆ.ದಾನ ನೀಡಿರುವ ಸಂಸ್ಥೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಉಮಾದೇವಿ, ಶಾಲೆಯ ಮುಖ್ಯ ಶಿಕ್ಷಕ ಶಂಕರಮೂರ್ತಿ, ಎಸ್‍ಡಿಎಂಸಿ ಸದಸ್ಯರು ಹಾಗೂ ಶಾಲೆಯ ಸಿಬ್ಬಂದಿ ವರ್ಗ ಅಭಿನಂದಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ