ಪಾವಗಡ;-
ಕಾರು ಪಲ್ಟಿಯಾಗಿ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ತುಮಕೂರು ರಸ್ತೆಯ ಮಾರ್ಗದ ಕಣೀವೇನಹಳ್ಳಿ ಗೇಟ್ ಬಳಿ ಬುದುವಾರ ಬೆಳಗಿನ ಜಾವ ಜರುಗಿದೆ.
ತಾಲ್ಲೂಕಿನ ಬಳಸಮುದ್ರ ಗ್ರಾಮದ ಸೂರಮ್ಮ ಮತ್ತು ಪಾತಣ್ಣ ದಂಪತಿಯ ಪುತ್ರ ಶಿವ 22 ವರ್ಷ ಎಂದು ಗುರ್ತಿಸಲಾಗಿದ್ದು, ತಿರುಮಣಿ ಬಳಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕ ನ ಸಿಬ್ಬಂದಿ ಬಾಡಿಗೆ ವಾಹನಕ್ಕೆ ಚಾಲಕ ನಾಗಿದ್ದ ಶಿವ ಮಂಗಳವಾರ ರಾತ್ರಿ ಸಿಬ್ಬಂದಿಯನ್ನು ಬೆಂಗಳೂರಿಗೆ ಕರೆದೊಯ್ದು, ಮರಳಿ ವಾಪಸ್ ಬರುತ್ತಿರುವಾಗ ನಿದ್ದೆ ಮಂಪರಿನಲ್ಲಿದ್ದಾಗ ಈ ಅವಗಡ ಜರುಗಿದೆ ಎನ್ನಲಾಗಿದೆ, ಸ್ಥಳಕ್ಕೆ ಪಾವಗಡ ಪೋಲಿಸ್ ಠಾಣಾ ಸಿ.ಪಿ.ಐ. ವೆಂಕಟೇಶ್ ಬೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








