ಕೇಂದ್ರ ಸರ್ಕಾರ ಕಳೆದ ಐದು ವರ್ಷದಲ್ಲಿ ಯಾವುದೇ ಸಾಧನೆ ಮಾಡಿಲ್ಲ: ಕಪಿಲ್ ಸಿಬಲ್

ಬೆಂಗಳೂರು

      ಎಐಸಿಸಿಯಿಂದ ಬಿಡುಗಡೆಯಾದ ಚುನಾವಣಾ ಪ್ರಣಾಳಿಕೆಯನ್ನು ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಇಂದು ಬಿಡುಗಡೆ ಮಾಡಿದರು.

       ಕೆಪಿಸಿಸಿ ಕಚೇರಿಯಲ್ಲಿ ಪ್ರನಾಳಿಕೆ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ನ್ಯಾಯ ಇದರ ಮೇಲೆ ದೇಶ ಅಭಿವೃದ್ಧಿ ಕಾಣುತ್ತಿದೆ. ಕೇಂದ್ರ ಸರ್ಕಾರ ಕಳೆದ ಐದು ವರ್ಷದಲ್ಲಿ ಯಾವುದೇ ಸಾಧನೆ ಮಾಡಿಲ್ಲ. ಬಡವರು ಬಡವರಾಗಿ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಹಣ‌ಮಾಡಿಕೊಂಡವರು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ.

        ಬಡವರು ಕುಟುಂಬಕ್ಕೆ ಊಟ ಹಾಕಲು ಹೆಣಗಾಡುತ್ತಿದ್ದಾರೆ. ಶೇ. 70 ರಷ್ಟು ಮಂದಿ ಸರಾಸರಿ 10 ಸಾವಿರ ರೂ. ಮಾತ್ರ ಆದಾಯ ಹೊಂದಿದ್ದಾರೆ. ಮಾತಿನಿಂದ ಶಾಸನ ನಡೆಯುವುದಿಲ್ಲ. ಯುಪಿಎ ಸಾಕಷ್ಟು ಅಭಿವೃದ್ಧಿ ಮಾಡಿತ್ತು. ಆದರೆ ಈಗ ಐದು ವರ್ಷ ದೇಶ ಮುನ್ನಡೆಸಿದ ಮೋದಿ ಸರ್ಕಾರ ಎಲದಲವನ್ನೂ ಕೆಡಿಸಿದೆ ಎಂದರು.

        ನಾವು ನಮ್ಮ ಪ್ರನಾಳಿಕೆಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು 12 ನೇ ತರಗತಿಯವರೆಗೆ ವಿಸ್ತರಿಸುತ್ತೇವೆ. ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸುತ್ತಿದ್ದು, ಗುಣಮಟ್ಟದ ಶಿಕ್ಷಣ ಲಭಿಸಲಿದೆ. ಸಾಮಾಜಿಕ ನ್ಯಾಯಕ್ಕೆ ಬೆಂಬಲ ನೀಡುತ್ತೇವೆ. ಆರೋಗ್ಯದ ಬಗ್ಗೆ ಗಮನ ಹರಿಸಿದ್ದೇವೆ. ಉಚಿತ ಔಷಧ ನೀಡುವ ಕಾರ್ಯವನ್ನು ಕೆಲ ವರ್ಗದವರಿಗೆ ನೀಡಿದ್ದೇವೆ. ನಮ್ಮ ಬದ್ಧತೆ ಹೆಚ್ಚಿದೆ. ಇದರಿಂದಲೇ ಹೇಳಿದ್ದನ್ನೇ ಮಾಡುತ್ತೇವೆ ಎಂದು ಪ್ರನಾಳಿಕೆಯಲ್ಲಿ ತಿಳಿದ್ದೇವೆ ಎಂದರು.

ಮಹಿಳಾ ಮೀಸಲಾತಿ

        ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ ಅಧಿನದ ಇಲಾಖೆಗಳಲ್ಲಿ ಮಹಿಳೆಯರಿಗೆ ಶೇ.‌33 ರಷ್ಟು ಮೀಸಲಾತಿ ತರಲಿದ್ದೇವೆ. ದೇಶದ ಆರು ಕಡೆ ವಿಶೇಷ ನ್ಯಾಯಾಲಯ ಬೆಂಚ್ ಸ್ಥಾಪಿಸುತ್ತೇವೆ. ಜ್ಯುಡಿಷಿಯಲ್ ನೇಮಕ ವ್ಯವಸ್ಥೆ ಜಾರಿಗೆ ತರುತ್ತೇವೆ. ನ್ಯಾಯ ದೂರು ಸೇರಿದಂತೆ ವಿವಿಧ ಬಿಭಾಗ ತೆರೆಯುತ್ತೇವೆ. ಈಗಿರುವ ಸಮಸ್ಯೆ ನ್ಯಾಯಾಲಯದ ವಿಚಾರದಲ್ಲಿ ಆಗಲ್ಲ. ಆರು ಸ್ಥಳೀಯ ನ್ಯಾಯಾಲಯ ಸ್ಥಾಪಿಸುತ್ತೇವೆ. ಪ್ರತಿ ವಲಯದಲ್ಲಿ ನ್ಯಾಯಾಲಯ ಇರುವುದರಿಂದ ಜನರಿಗೆ ದಿಲ್ಲಿಗೆ ಬರುವ ಸಮಸ್ಯೆ ಇಲ್ಲ. ಗೃಹ ನಿರ್ಮಾಣ, ಜಿಎಸ್ಟಿ 2.0 ಮಾಡಲಿದ್ದೇವೆ. ಸರಳೀಕರಣ ತರುತ್ತೇವೆ. ಜಿಎಸ್ಟಿ ಕೌನ್ಸಿಲ್ ಗೆ ಬರುವ ಆದಾಯ ರಾಜ್ಯಕ್ಕೆ ಹಂಚುತ್ತೇವೆ. ಎನ್ಸಿಟಿಸಿ, ನ್ಯಾಕ್ ಬಲಗೊಳಿಸುತ್ತೇವೆ ಎಂದರು.

ಆರ್ಥಿಕ ಕುಸಿತ

        ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಿದೆ. ಸಾಮಾಜಿಕ ನ್ಯಾಯದ ಬದಲು ಅನ್ಯಾಯ ಎಸಗಲಾಗಿದೆ. ಮೋದಿ ಸರ್ಕಾರ ನಡೆದುಕೊಂಡ ರೀತಿಯಿಂದ ಆರ್ಥಿಕ ಕುಸಿತ ಉಂಟಾಗಿದೆ. ನೋಟ್ ಬ್ಯಾನ್ ನಿಂದ ಸಾಮಾನ್ಯ ಜನರ ಜೀವನಕ್ಕೆ ಹೊಡೆತ ಬಿದ್ದಿದೆ. ಕೇಂದ್ರ ಸರ್ಕಾರದ ಕಳೆದ 5ವರ್ಷದಲ್ಲಿ ಸಾಮಾಜಿಕ ನ್ಯಾಯ ಯಾರಿಗೂ ಸಿಕ್ಕಿಲ್ಲ. ಬದಲಾಗಿ ಸಾಮಾಜಿಕ ಅನ್ಯಾಯ ಆಗಿದೆ. ನೋಟು ಅಮಾನ್ಯಕರಣದಿಂದ ಬಡ ಜನರ ಜೀವನ ಹಾಳಾಗಿದೆ. ಮೋದಿ ಈ ತೀರ್ಮಾನದಲ್ಲಿ ಆರ್ಥಿಕ ಪರಿಸ್ಥಿತಿ ಕುಗ್ಗಿದೆ ಎಂದರು.

      ನಮ್ಮಪ್ರಣಾಳಿಕೆಯಿಂದ ದೇಶವನ್ನು ಬದಲಾವಣೆ ಮಾಡೊಕೆ ಆಗುತ್ತದೆ. ಹಾಗಾಗೀ 72ಸಾವಿರ ರೂ ಬಡವರಿಗೆ ನೀಡುವ ತೀರ್ಮಾನ ಮಾಡಿದ್ದು. ಸ್ವಾಮಿನಾಥನ್ ವರದಿಯನ್ನು ನಾವು ಜಾರಿ ಮಾಡ್ತೇವೆ. ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡುತ್ತೇವೆ . ಪ್ರಣಾಳಿಕೆಯನ್ನು ನಾವು ಕೊಟ್ಟ ಭರವಸೆಯನ್ನು ಖಂಡಿತ ಈಡೇರಿಡುತ್ತೇವೆ. ಒಂದು ವರ್ಷದಲ್ಲಿ 4ಲಕ್ಷ ಉದ್ಯೋಗ ಅವಕಾಶ ಕಲ್ಪಿಸುತ್ತೇವೆ. ಇದು ಬರಿ ಬಾಯಿ ಮಾತಲ್ಲ ಮಾಡಿ ತೋರಿಸುತ್ತೇವೆ ಒಂದೇ ವರ್ಷದಲ್ಲಿ ಎಂದರು.

ಸರ್ಜಿಕಲ್ ಸ್ಟ್ರೈಕ್

       ದೇಶಕ್ಕೆ ಅಗತ್ಯವಿರುವ ಸರ್ಜಿಕಲ್ ಸ್ಟ್ರೈಕ್ ಮಾಡಿ, ಉದ್ಯೋಗ ಸೃಷ್ಟಿಗೆ ಹೋರಾಡಿ. ಈ ದೇಶದ ಜನರಿಗೆ ಕೆಲಸ ಮಾಡಿ. ನೀವು ಪಾಕಿಸ್ತಾನದ ಮೇಲೆ ಕಿಡಿಕಾರುವುದೇಕೆ. ಸರ್ಜಿಕಲ್ ಸ್ಟ್ರೈಕ್ ಮಾಡುವುದಾದರೆ ಬಡತನ, ಉದ್ಯೋಗ ಸೃಷ್ಡಿಗೆ ಮಾಡಬಹುದಿತ್ತಿ. ಬುಲೆಟ್ ರೈಲಿಗೆ ಒಂದು ಲಕ್ಷ ಕೋಟಿ ವ್ಯಯಿಸುವ ಅಗತ್ಯವಿತ್ತೇ. ಸಾಮಾನ್ಯರಿಗೆ ಅವಕಾಶ ಕೊಡಬಹುದಿತ್ತು ಎಂದು ಕಿಡಿಕಾರಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap