ಬಾಗಲಕೋಟೆ :
ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಬಾಗಲಕೋಟೆಯ ಸಿಆರ್ ಪಿಎಫ್ ಯೋಧ ಬಿಹಾರದಲ್ಲಿ ನಿಧನರಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯ ಸಿಆರ್ ಪಿಎಫ್ ಯೋಧ ಗಿರಿಯಪ್ಪ ಕಿರಸೂರ (29) ನಿಧನರಾದ ಯೋಧ.ಗಿರಿಯಪ್ಪ ಬಿಹಾರದಲ್ಲಿ ಬೆಟಾಲಿಯನ್ 224 ನಲ್ಲಿ ಇದ್ದರು. ಪಾಟ್ನಾದಲ್ಲಿ ವಿಐಪಿಗಳಿಗೆ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಆಕಸ್ಮಿಕವಾಗಿ ಗುಂಡು ತಗುಲಿ ನಿಧನರಾಗಿದ್ದಾರೆ. 2012 ರಲ್ಲಿ ಸಿಆರ್ ಪಿಎಫ್ ನಲ್ಲಿ ಕಾನ್ ಸ್ಟೇಬಲ್ ಆಗಿ ನೇಮಕಗೊಂಡಿದ್ದರು.
ಕಳೆದ ವರ್ಷ ಏಪ್ರಿಲ್‍ನಲ್ಲಿ ಗಿರಿಯಪ್ಪ ಅವರಿಗೆ ವಿವಾಹವಾಗಿತ್ತು ಎನ್ನಲಾಗಿದೆ.
ಅಲ್ಲದೆ ಕಳೆದ ತಿಂಗಳಷ್ಟೇ ಯೋಧ ಗಿರಿಯಪ್ಪ ಸ್ವಗ್ರಾಮ ಕಮತಗಿಗೆ ಬಂದು ಹೋಗಿದ್ದರು. ಈಗ ಅವರ ಸಾವಿನ ಸುದ್ಧಿ ಕೇಳಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ