ಸರಗಳ್ಳರ ಬಂಧನ

ಬೆಂಗಳೂರು

         ಅಪ್ರಾಪ್ತ ಬಾಲಕನನ್ನೊಳೊಗಂಡ ನಾಲ್ವರು ಕನ್ನಗಳ್ಳರ ಗ್ಯಾಂಗ್, ಮನೆಕಳವು ವಾಹನ ಕಳವು ಮತ್ತು ಸರಗಳವು ಮಾಡುತ್ತಿದ್ದ 10 ಮಂದಿಯನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿ 82 ಲಕ್ಷ 50 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ್ದಾರೆ.

ಕನ್ನಗಳ್ಳರ ಗ್ಯಾಂಗ್

          ಜಗದೀಶ್ ನಗರದ ಮಲ್ಲಿಕಾರ್ಜುನ್ ಅಲಿಯಾಸ್ ಪುಟ್ಟ (19), ಮುನಿಬಚ್ಚಪ್ಪ ಕಾಲೋನಿಯ ಕಿರಣ್ (18), ಹಲಸೂರಿನ ಗೌತಮ್ ಪುರದ ಬಾಲಾಜಿ (18), ಆನಂದಪುರದ ಮಣಿಮಾರನ್ (29) ಬಂಧಿತ ಆರೋಪಿಗಳಾಗಿದ್ದಾರೆ. ಗ್ಯಾಂಗ್‍ನಲ್ಲಿದ್ದ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಳ್ಳಲಾಗಿದೆ

           ಆರೋಪಿಗಳಿಂದ 661 ಗ್ರಾಂ ಚಿನ್ನ, 3 ಬೈಕ್‍ಗಳು ಸೇರಿ 19 ಲಕ್ಷ 83 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಮಲ್ಲಿಕಾರ್ಜುನ್, ಕಿರಣ್ ಹಾಗೂ ಬಾಲಾಜಿ ಅಪ್ರಾಪ್ತ ಬಾಲಕನೊಬ್ಬನ ಜತೆ ಸೇರಿ ಗ್ಯಾಂಗ್ ಕಟ್ಟಿಕೊಂಡು ಕನ್ನಗಳವು ಮಾಡುತ್ತಿದ್ದರು.

         ಈ ಗ್ಯಾಂಗ್‍ನಿಂದ 10 ಲಕ್ಷ ಮೌಲ್ಯದ 301 ಗ್ರಾಂ ಚಿನ್ನಾಭರಣ, 3 ಬೈಕ್‍ಗಳನ್ನು ವಶಪಡಿಸಿಕೊಂಡು ಜೆಬಿ ನಗರದ 4, ಹೆಚ್‍ಎಎಲ್, ಬೈಯ್ಯಪ್ಪನಹಳ್ಳಿ, ಕೆಆರ್‍ಪುರಂ ತಲಾ 1 ಸೇರಿ 7 ಕಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.ಮತ್ತೊಬ್ಬ ಆರೋಪಿ ಮಣಿಮಾರನ್‍ನಿಂದ 360 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಜೆಬಿ ನಗರ ಹಾಗೂ ಹೆಚ್‍ಎಎಲ್‍ನ ಓಲ್ಡ್ ಟೌನ್‍ಶಿಪ್‍ನಲ್ಲಿ ಕಳವು ಮಾಡಿದ್ದ 8 ಮನೆಗಳವು ಪ್ರಕರಣಗಳನ್ನು ಜೀವನ್‍ಭೀಮಾನಗರ ಪೊಲೀಸರು ಪತ್ತೆಹಚ್ಚಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಅವರು ಪತ್ರಿಕಾಗೋಷ್ಟಿಯಲ್ಲಿ ಬುಧವಾರ ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap