ಚಕೋರ-201 ಕಾರ್ಯಕ್ರಮ

ಹಾನಗಲ್ಲ :

        ಭ್ರಾತೃತ್ವ ಭಾವೈಕ್ಯತೆ ಸಾರುವ ಸಾಹಿತ್ಯ ಸಮಾಜದಲ್ಲಿ ಹರಿದಾಡುವ ಅಗತ್ಯವಿದ್ದು, ಸೃಜನಶೀಲ ಸಾಹಿತಿಗಳನ್ನು ಗೌರವಿಸಿ ಪುರಸ್ಕರಿಸುವುದರಲ್ಲಿಯೇ ಸುಖವಿದೆ ಎಂದು ದಕ್ಷಿಣ ಭಾರತ ದೂರದರ್ಶನ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ, ಮಾಧ್ಯಮ ಸಲಹೆಗಾರ ನಾಡೋಜ ಡಾ. ಮಹೇಶ ಜೋಶಿ ಕರೆ ನೀಡಿದರು.

        ಗುರುವಾರ ಹಾನಗಲ್ಲಿನ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಚಕೋರ-201 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಕಷ್ಟದಲ್ಲಿ ಮಾತ್ರ ಸೈನಿಕ ಹಾಗೂ ದೇವರನ್ನು ನೆನೆಯುತ್ತೇವೆ. ಆದರೆ ನಮ್ಮ ಒಳಿತಿಗಾಗಿ ಸೇವೆ ಸಲ್ಲಿಸಿದವರನ್ನು ಸದಾ ಕಾಲಕ್ಕೂ ಸ್ಮರಿಸುವ ಕಾಲ ಬರಬೇಕು. ಸಾಹಿತ್ಯದ ಬರವಣಿಗೆ ಎಲ್ಲರಿಂದಲೂ ಸಾಧ್ಯವಿಲ್ಲ. ಅಂತಃಕರಣದ ಬರವಣಿಗೆ ಹಾಗೂ ಸಮಾಜವನ್ನು ತಿದ್ದುವ ಸಾಹಿತ್ಯಕ್ಕೆ ಮಾನ್ಯತೆ ಸಿಗಬೇಕು. ತನ್ನನ್ನು ತಾನು ತಿದ್ದಿಕೊಳ್ಳಲು ಮನುಷ್ಯ ಮುಂದಾಗಬೇಕು. ಅಂತಹ ಸಾಹಿತ್ಯದ ಓದು ಬೇಕು ಎಂದರು.

       ಭಾರತದಲ್ಲಿ ಶೇಕಡಾ 92 ರಷ್ಟು ಜನ ಒಂದಲ್ಲ ಒಂದು ರೀತಿ ಲಂಚ ಕೊಡುವ ಪ್ರಸಂಗಗಳು ಸೃಷ್ಠಿಯಾಗಿವೆ. ಪ್ರಾಮಾಣಿಕತೆಯ ಬಗೆಗೆ ಮಾತನಾಡುವಾಗ ಇಂತಹ ವಿಚಾರಗಳೂ ಮುಜುಗರ ತರುತ್ತವೆ. ಹಸಿದವನಿಗೆ ಊಟ ಬೇಕಾಗಿದೆ. ಸೂರಿಲ್ಲದವರಿಗೆ ಸೂರು ದೊರೆಯಬೇಕಾಗಿದೆ. ಜೀವನದ ವಾಸ್ತವತೆಯನ್ನು ಅರಿಯುವಂತಹ ಸಾಹಿತ್ಯ ರಚನೆಯಾಗಬೇಕುಇ ಎಂದರು.

      ಅಧ್ಯಕ್ಷತೆವಹಿಸಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಸಾಹಿತ್ಯ ಕ್ಷೇತ್ರದ ರಾಜಕಾರಣ ಕೊನೆಗೊಳ್ಳಬೇಕು. ಮಾಲ್ಯಯುತ ಸಾಹಿತ್ಯ ಸಾಹಿತಿಗಳನ್ನು ಗೌರವಿಸಬೇಕು. ಕವಿಯ ಸಂವೇದನೆಗಳು ಇಡೀ ಸಮಾಜದ ಸಂವೇದನೆಗಳೇ ಆಗಿರುತ್ತವೆ. ಸಾಮಾಜಿಕ ಅವ್ಯವಸ್ಥಗೆ ಸಾಹಿತಿ ಪರಿತಪಿಸುವಂತಾಗಬಾರದು. ಕನ್ನಡತನಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟವರ ಬದಲಾಗಿ ಶೋಕಿ ಸಾಹಿತಿಗಳದ್ದೇ ದರಬಾರು ನಡೆಯಬಾರದು.

     ಸಾಹಿತಿ ಡಾ.ವಿಶ್ವನಾಥ ಬೋಂದಾಡೆ ಕನ್ನಡ ಸಾಹಿತ್ಯ ಸಂಗೀತ ಕ್ಷೇತ್ರಕ್ಕೆ ಹಾನಗಲ್ಲ ತಾಲೂಕಿನ ಕೊಡುಗೆ ಕುರಿತು ಮಾತನಾಡಿ, ಹಾನಗಲ್ಲು ಸಾಹಿತ್ಯ ಸಾಂಸ್ಕøತಿಕ ಕ್ಷೆತ್ರದಲ್ಲಿಯೂ ವಿರಾಟ ರೂಪದಲ್ಲಿ ಬೆಳೆದಿದೆ. ಇಲ್ಲಿನ ವಾಸ್ತು ಶಿಲ್ಪ, ಧಾರ್ಮಿಕ ಕೇಂದ್ರಗಳು, ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಅಪಾರವಾದವುಗಳು ಎಂದರು.

      ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಮಂಜುನಾಥ ಮಾತನಾಡಿದರು. ಜನತಾ ಶಿಕ್ಷಣ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಎ.ಎಸ್.ಬಳ್ಳಾರಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಅಶೋಕ ಹಳ್ಳಿಯವರ, ಬಿ.ಎಂ.ಹರಪ್ಪನಹಳ್ಳಿ, ಸಂಯುಕ್ತ ಪದವಿಪೂರ್ವ ಕಾಲೇಜ್ ಪ್ರಾಚಾರ್ಯ ಅನಿತಾ ಹೊಸಮನಿ, ಸೌಭಾಗ್ಯಲಕ್ಷ್ಮೀ ಬೇತೂರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶ್ರೀಲಕ್ಷ್ಮೀ ಪಾಟೀಲ, ಕೀರ್ತನಾ ಪೂಜಾರ ಪ್ರಾರ್ಥಿಸಿದರು. ಪ್ರೊ.ವೀರೇಶ ಹಿತ್ತಲಮನಿ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಬಿದರಗಡ್ಡೆ ಸ್ವಾಗತಿಸಿದರು. ಡಾ.ಪ್ರಕಾಶ ಹೊಳೇರ ಕಾರ್ಯಕ್ರಮ ನಿರೂಪಿಸಿದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link