ಚಂದ್ರಶೇಖರ ಕಂಬಾರರು ಬಹುಮುಖದ ಪ್ರತಿಭೆ

ಸಿರಿಗೇರಿ

        ಚಂದ್ರಶೇಖರ ಕಂಬಾರರು ಬಹುಮುಖದ ಪ್ರತಿಭೆ. ಅವರು “ಚಕೋರಿ” ಎಂಬ ಮಹಾಕಾವ್ಯ ರಚಿಸಿ ರಾಷ್ಟ್ರದ ಗಮನ ಸೆಳೆದರು. ಎಂದು ಕನ್ನಡ ಭಾಷಾ ಶಿಕ್ಷಕ ಹಾಗೂ ಉಪನ್ಯಾಸಕ ರವಿ ಆರ್. ತಿಳಿಸಿದರು. ಅವರು ಸಿರಿಗೇರಿ ಗ್ರಾಮದ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲೆಗೊಬ್ಬ ಸಾಹಿತಿ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಡಾ.ಚಂದ್ರ ಶೇಖರ್ ಕಂಬಾರರ ಸಾಹಿತ್ಯ ಕುರಿತು ಶುಕ್ರವಾರ ಉಪನ್ಯಾಸ ನೀಡಿ ಮಾತನಾಡಿದರು.

       ಕಂಬಾರರವರ ಅಚ್ಚುಮೆಚ್ಚಿನ ನೆಲ ಧಾರವಾಡ. ಇವರು ಮೂಲತ ಜನಿಸಿದ್ದು ಘೋಡಗೇರಿ ಎಂಬ ಕುಗ್ರಾಮದಲ್ಲಿ. ಪ್ರಾರಂಭದಲ್ಲಿ ನಾನಾ ಬಗೆಯ ನಾಟಕ ಪ್ರದರ್ಶನಗಳ ಮೂಲಕ ಬೆಳಕಿಗೆ ಬಂದ ಕಂಬಾರರವರು ತದ ನಂತರ ಸಾಹಿತ್ಯದ ಕಡೆ ಒಲವು ತೋರಿಸಿದರು. ಈ ಮೂಲಕ ಕನ್ನಡದ ಆಡು ಭಾಷೆಯ ನೆಲೆಗಟ್ಟಿನಲ್ಲಿ ಅಂಗಿ ಮೇಲಂಗಿ, ಕವನ ಸಂಕಲನ, ಜೋಕುಮಾರಸ್ವಾಮಿ, ಕರಿಮಾಯಿ, ಅಣ್ಣತಂಗಿ, ಅರಮನೆ, ಶಿಖರ ಸೂರ್ಯ ಸೇರಿದಂತೆ ಸುಮಾರು ಹತ್ತಾರು ಕಾದಂಬರಿ ನಾಟಕಗಳನ್ನು ರಚಿಸಿ ಪ್ರೇಕ್ಷಕರ ಮನಗೆದ್ದರು.

      ಆ ನಂತರ ಇದರಲ್ಲಿ ಪ್ರಮುಖವಾಗಿ “ಜೋಕುಮಾರ ಸ್ವಾಮಿ”ಕಾದಂಬರಿಯ ಬರವಣಿಗೆ ಸಾಮಾಜಿಕ ತಳಹದಿಯಲ್ಲಿ ಬದುಕುತ್ತಿರುವ ಜನರಿಗೆ ನೆರಳಾಯಿತು. ಇದರಲ್ಲಿ ಪ್ರಮುಖ ಅಂಶವೆಂದರೆ ಪಾಳೆಗಾರಿಕೆ, ಬಂಡವಾಳಶಾಹಿ ಪದ್ದತಿ ಬಗ್ಗೆ ಓರೆಕೋರೆಗಳನ್ನು ಬಹಿರಂಗವಾಗಿ ಸಾರಿದ್ದಲ್ಲದೆ ಬಂಡವಾಳಶಾಹಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

      ಆದರೂ ಸಹ “ಕಾಡು ಕುದುರೆ” ಎಂಬ ಸಿನಿಮಾ ಮೂಲಕ ತಮ್ಮ ಬರವಣಿಗೆಯ ಸಾಹಿತ್ಯವನ್ನು ಜಗತ್ತಿಗೆ ಸಾರಿದರು. ಅಲ್ಲದೆ ಸಂಗ್ಯಾಬಾಳ್ಯ, ಮತಾಂತರ, ಹರಕೆಯ ಕುರಿ, ಬೋಳೆ ಶಂಕರ, ತಿರುಕನ ಕನಸು, ನಾಯಿಕತೆ ಸೇರಿದಂತೆ ಸುಮಾರು ಇಪ್ಪತೈದಕ್ಕೂ ಅಧಿಕ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ನಾಟಕಗಳನ್ನು ರೂಪಿಸಿ ಜನಮನ ಗೆದ್ದರು. ಧಾರವಾಡದಲ್ಲಿ ಡಿ 7,8,9 ಮೂರುದಿನ ನಡೆಯುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳೆನಕ್ಕೆ ಅಧ್ಯಕ್ಷರನ್ನಾಗಿ ಚಂದ್ರಶೇಖರ ಕಂಬಾರರನ್ನು ಅಯ್ಕೆ ಮಾಡಲಾಗಿದೆ ಎಂದರು.

       ತದ ನಂತರ ವಿವೇಕಾನಂದ ಪ್ರೌಢ ಶಾಲೆಯ ಎನ್.ಪಂಪಾಪತಿ ಮಾತನಾಡಿ ಕಂಬಾರÀರು ಜ್ಞಾನ ಭಂಡಾರದ ಸಂಕೇತ. ದತ್ತಿ ಉಪನ್ಯಾಸ ಹಾಗೂ ಸಾಹಿತ್ಯದ ಬಗ್ಗೆ ಪ್ರತಿ ಹೋಬಳಿಯಲ್ಲಿ ವಿಧ್ಯಾರ್ಥಿ ಹಾಗೂ ನಾಗರಿಕರಿಗೆ ಜ್ಞಾನಕೋಶ ನೀಡುತ್ತಿರುವ ನಾಗರಾಜ ಸ್ವಾಮಿಯವರ ಶ್ರಮ ಶ್ಲಾಘನೀಯ  ಎಂದರು.

      ಆ ನಂತರ ಕಸಾಪ ಕರೂರು ಹೋಬಳಿ ಘಟಕದ ಅಧ್ಯಕ್ಷ ವಿರುಪಾಕ್ಷಿಗೌಡ ಇಂದಿನ ವಿಧ್ಯಾರ್ಥಿ ಹಾಗೂ ಜನ ಸಮುದಾಯ ಸಾಹಿತ್ಯದ ವಿಚಾರ ಎಂದರೆ ಮೂಗು ಮುರಿಯುವುದು ವಿಷಾದದ ಸಂಗತಿ. ಸಾಹಿತ್ಯದ ಪರಿಕಲ್ಪನೆ ಇಲ್ಲದಿದ್ದರೆ ಇತಿಹಾಸ ತಿಳಿಯುವುದು ಕಷ್ಟವೆಂದರು.
ತದ ನಂತರ ವಾಗೀಶ್, ಗ್ರಾಪಂ ಉಪಾಧ್ಯಕ್ಷ ಗೋಡೆ ಸಂಪತ್ ಕುಮಾರ್ ಹಾಗೂ ಎಪಿಎಂಸಿ ಸದಸ್ಯ ಹಾಗಲೂರು ಮಲ್ಲನಗೌಡ ಮಾತನಾಡಿದರು.

      ಕಸಾಪ ಸಿರುಗುಪ್ಪ ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ ಅಧ್ಯಕ್ಷತೆವಹಿಸಿದ್ದರು. ಸಂಘದ ಸದಸ್ಯ ಶಿವರಾಂ ಪ್ರಾಸ್ತಾವಿಕವಾಗಿ ಮಾತನಾಡಿದರು.

      ಸಭೆಯಲ್ಲಿ ಜಿಪಂ ಸದಸ್ಯೆ ಎಸ್.ಎಂ. ರತ್ನಮ್ಮ ಅಡಿವೆಯ್ಯಸ್ವಾಮಿ, ಉದ್ಘಾಟನೆ ಗ್ರಾಪಂ ಅಧ್ಯಕ್ಷೆ ಕೊಳ್ಳಿ ದ್ಯಾವಮ್ಮ ಪವಾಡಿನಾಯ್ಕ, ಬಾಲಕಿಯರ ಶಾಲಾ ಮು,ಗುರು ಪರ್ವೇಜ್ ಅಹಮ್ಮದ್, ಲೇಖಕ ಎನ್.ಕುಮಾರ್ ಸಿರಿಗೇರಿ. ಸಿ.ಎಂ.ಕಿಶೋರ್ ಕುಮಾರ್, ಬಿ.ಮಂಜು, ವಿ.ನಾಗರಾಜ್, ಖಾಜಾಪೀರ, ವಿ.ಹನುಮೇಶ, ಲಕ್ಷ್ಮಣ ಹೆಚ್.ಭಂಡಾರಿ, ಕೆ.ಎಂ.ದೇವರಾಜ್ ಸೇರಿದಂತೆ ನೂರಾರು ಜನ ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು. ಇದೇ ವೇಳೆ ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ ಹಾಗೂ ಉಪನ್ಯಾಸಕರಾದ ರವಿ ಆರ್.ರವರಿಗೆ ಗ್ರಾಮದ ಸಮಾಜ ವಿಜ್ಞಾನ ವಿಚಾರ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಕೃಷ್ಣಮೂರ್ತಿ ನಿರೂಪಿಸಿ, ದೊಡ್ಡಬಸಪ್ಪ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link