ಆರೋಗ್ಯ ಭಾಗ್ಯವನ್ನು ನೀಡುವ ಖಾಸಗಿ ಆರೋಗ್ಯ ಕೇಂದ್ರಗಳು ಹಣದಾಸೆಯಿಂದ ದೂರವಿರಿ

ಚಳ್ಳಕೆರೆ

     ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕಡೆ ಹೆಚ್ಚು ಗಮನವನ್ನು ನೀಡಬೇಕಿದೆ. ಯಾವ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೋ ಅವನು ಸದಾ ಕ್ರಿಯಾಶೀಲನಾಗಿರುತ್ತಾನೆ. ಪ್ರತಿಯೊಬ್ಬರ ಬದುಕು ಸಹ ಅವರ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಸರ್ಕಾರ ಆರೋಗ್ಯ ಇಲಾಖೆ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆಯಾದರೂ ಕೆಲವೆಡೆ ಮಾತ್ರ ಖಾಸಗಿ ನರ್ಸಿಂಗ್ ಹೋಂಗಳು ಸಹ ಬಡ ಜನರ ಆರೋಗ್ಯದ ಮೇಲೆ ಕಾಳಜಿ ವಹಿಸಿತ್ತಿರುವುದು ಉತ್ತಮ ಬೆಳವಣಿಗೆ ಎಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ತಿಳಿಸಿದರು.

      ಅವರು, ಭಾನುವಾರ ಇಲ್ಲಿನ ಸುರಕ್ಷಾ ಪಾಲಿ ಕ್ಲಿನಿಕ್ ಮತ್ತು ಲೈಫೆಂಷಿಯಾ ಹ್ತೆಲ್ ಕೇರ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಕೀಲು ಮೂಳೆ ಸಾಂದ್ರತಾ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಶಿಬಿರಗಳು ಬಡ ಜನರ ಆರೋಗ್ಯದ ರಕ್ಷಾ ಕವಚಗಳಾಗಲಿ ಎಂದು ಶುಭ ಹಾರೈಸಿದರು.

      ಉಚಿತ ಕೀಲು, ಮೂಳೆ ಸಾಂದ್ರತಾ ಚಿಕಿತ್ಸಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಇಲ್ಲಿನ ಸಾರ್ವಜನಿಕರ ಆಸ್ಪತ್ರೆಗೆ ಹೆಚ್ಚಿನ ರೋಗಿಗಳು ಪ್ರತಿನಿತ್ಯ ನೆರೆಯ ಆಂದ್ರ ಪ್ರದೇಶದಿಂದಲೂ ಆಗಮಿಸುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಎಲ್ಲಾ ಸೌಲಭ್ಯಗಳ ಜೊತೆಗೆ ಉತ್ತಮ ವೈದ್ಯರ ತಂಡವೂ ಸಹ ನೇಮಿಸಲಾಗಿದೆ. ಆದರೂ ಸಹ ಕೆಲವು ಖಾಸಗಿ ಆಸ್ಪತ್ರೆಗಳು ಜನ ಸ್ನೇಹಿ ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸುತ್ತಿವೆ.

      ಸುರಕ್ಷಾ ಪಾಲಿ ಕ್ಲಿನಿಕ್ ನಿರಂತರವಾಗಿ ಪ್ರತಿವರ್ಷ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ನೂರಾರು ರೋಗಿಗಳ ಆರೋಗ್ಯವನ್ನು ಸಂರಕ್ಷಣೆ ಮಾಡುವಲ್ಲಿ ಸಫಲವಾಗಿವೆ. ಖಾಸಗಿ ಆಸ್ಪತ್ರೆಗಳು ಜನರಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಿಸಿ ಹೆಚ್ಚಿನ ಹಣದಾಸೆಯನ್ನು ಬಿಟ್ಟು ಕೇವಲ ನಿಗದಿತ ಶುಲ್ಕವನ್ನು ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದೆ. ಹಣದಾಸೆಯನ್ನು ಬದಿಗೊತ್ತಿ ರೋಗಿಗಳ ಗುಣಾತ್ಮಕ ಚಿಕಿತ್ಸೆಗೆ ಹೆಚ್ಚು ಗಮನ ನೀಡಬೇಕು ಎಂದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಸದಸ್ಯೆ ಆರ್.ಮಂಜುಳಾ ಮಾತನಾಡಿ, ತಾಲ್ಲೂಕಿನ ಬಡ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ತಮ್ಮ ಆರೋಗ್ಯ ಪರೀಕ್ಷೆಯಲ್ಲಿ ತೊಡಗಿಕೊಂಡಿದ್ಧಾರೆ. ಇಂತಹ ಶಿಬಿರಗಳ ಪ್ರಯೋಜನವನ್ನು ಹೆಚ್ಚು ಪಡೆಯುವಂತೆ ಮನವಿ ಮಾಡಿದರು.

       ಕೀಲು ಮೂಳೆ ತಜ್ಞ ಡಾ.ಎಚ್.ಮಂಜಪ್ಪ, ಲೈಫೆಂಷಿಯಾ ಹ್ತೆಲ್ ಕೇರ್‍ನ ತುಕರಾಮ್ ಮಾತನಾಡಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಈ ಶಿಬಿರ ನಡೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ದರಗಳು ಹೆಚ್ಚಿ ರೋಗಿಗಳು ಪ್ರತಿಯೊಂದು ಹಂತದಲ್ಲೂ ಹೆಚ್ಚು ಹಣ ಖರ್ಚು ಮಾಡುವ ಪರಿಸ್ಥಿತಿ ಉದ್ಭವವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಉಚಿತವಾಗಿ ಸ್ಯಾನಿಂಗ್ ನಡೆಸಿ ರೋಗಿಗಳಿಗೆ ಮಾರ್ಗದರ್ಶನ ನೀಡುತ್ತೇವೆ. ಇಲ್ಲಿ ಎಲ್ಲಾ ರೀತಿಯ ಉತ್ತಮ ಸಹಕಾರ ದೊರೆಯುತ್ತಿದೆ ಎಂದರು.

       ಶಿಬಿರದ ವ್ಯವಸ್ಥಾಪಕರಾದ ಬಿ.ಫರೀದ್‍ಖಾನ್ ಮಾತನಾಡಿ, ಇಂದಿನ ಶಿಬಿರದಲ್ಲಿ ಚಳ್ಳಕೆರೆ ನಗರವೂ ಸೇರಿದಂತೆ ವಿವಿಧೆಡೆಗಳಿಂದ 300ಕ್ಕೂ ಹೆಚ್ಚು ಜನರು ಆಗಮಿಸಿ ತಮ್ಮ ಮೂಳೆಗಳ ಸಾಂದ್ರತಾ ಪರೀಕ್ಷೆ ಮಾಡಿಕೊಂಡಿದ್ಧಾರೆ. ವೈದ್ಯರ ತಂಡ ಕೂಲಂಕುಷವಾಗಿ ಪರಿಶೀಲಿಸಿ ಚಿಕಿತ್ಸೆ ಹಾಗೂ ಮಾಹಿತಿ ನೀಡಿದ್ಧಾರೆ. ನಿರೀಕ್ಷೆಗೂ ಮೀರಿ ಈ ಶಿಬಿರ ಯಶಸ್ಸಿಯಾಗಿದೆ ಎಂದರು.

       ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಸದಸ್ಯ ಆರ್.ಪ್ರಸನ್ನಕುಮಾರ್, ನೇತಾಜಿ ಬಳಗದ ಅಧ್ಯಕ್ಷ ನೇತಾಜಿಪ್ರಸನ್ನ, ಟಿ.ಕೆ.ನಾಗೇಶ್‍ಬಾಬು, ಡಿವೈಎಸ್ಪಿ ಎಸ್.ರೋಷನ್ ಜಮೀರ್, ಮಾಜಿ ಪುರಸಭಾ ಅಧ್ಯಕ್ಷ ಕೆ.ಜೆ.ಅಶೋಕ್‍ಕುಮಾರ್, ಕಾಂಗ್ರೆಸ್ ಮುಖಂಡ ಪಾಲಯ್ಯ, ಹನುಮಂತಪ್ಪ, ಜಯವೀರಚಾರ್, ವೆಂಕಟೇಶ್‍ಚಾರ್, ಸರಸ್ವತಿಶ್ರೀನಿವಾಸ್‍ಚಾರ್ ಮುಂತಾದವರು ಭಾಗವಹಿಸಿದ್ದರು.
ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಪತ್ರಕರ್ತರ ಸಂಘದಿಂದ ವಿಮಶಾತ್ಮಕ ವರದಿಗಾಗಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಎನ್.ವೀರೇಶ್‍ರವರನ್ನು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ ಸನ್ಮಾನಿಸಿದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap