ಬೆಂಗಳೂರು:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-೨ ಉಡ್ಡಯನಕ್ಕೆ ಮುಹೂರ್ತ ನಿಗದಿಯಾಗಿದೆ. ಜುಲೈ15ರಂದು ಬೆಳಗಿನಜಾವ 2 ಗಂಟೆ 51 ನಿಮಿಷಕ್ಕೆ ಉಡ್ಡಯನ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಕೆ. ಸಿವನ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈಗ ಸ್ವಲ್ಪಹೊತ್ತಿಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,
ಸೆಪ್ಟೆಂಬರ್ ೬ ರಂದು ಚಂದ್ರಯಾನ-೨ ಯೋಜನೆಯ ಮೂರನೆಯ ಕೋಶಿಕೆಯಾದ, ರೋವರ್ ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ. ನಂತರ ರೋವರ್‌ನ ಬಾಗಿಲುಗಳು ತೆರೆದುಕೊಳ್ಳುತ್ತವೆ. ರೋವರ್ ನಿಧಾನವಾಗಿ ಚಂದ್ರನ ಮೇಲೆ ಇಳಿಯುತ್ತದೆ, ನಂತರ ಅತ್ಯಂತ ನಿಧಾನಗತಿಯಲ್ಲಿ ಚಂದ್ರನ ಮೇಲ್ಮೈ ಅಧ್ಯಯನ ನಡೆಸುತ್ತದೆ, ಚಂದ್ರ ಗ್ರಹದ ಮೇಲೆ ಏನಿದೆ ಎಂದು ಇನ್ನೂ ತಿಳಿಯದೇ ಇರುವ ಅಂಶಗಳು ಈ ಯೋಜನೆಯಿಂದ ಬೆಳಕಿಗೆ ಬರಲಿವೆ ಎಂದರು.
ಈ ಐತಿಹಾಸಿಕ ಯೋಜನೆಯ ಅಂತಿಮ ಹಂತದ ಸಿದ್ಧತೆಗಳು ಪ್ರಗತಿಯಲ್ಲಿವೆ, ಈ ಯೋಜನೆ ದೇಶದ ಬಾಹ್ಯಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಲಿದೆ ಎಂದು ಅವರು ತಿಳಿಸಿದರು.