ಮೂವರ ಮೇಲೆ ಚಿರತೆ ದಾಳಿ

ಹೊಸದುರ್ಗ:

      ತಾಲ್ಲೂಕಿನ ಶ್ರೀರಾಂಪುರ ಹೋ ಕುರುಬರಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಮೂವರ ಮೇಲೆ ದಾಳಿ ಮಾಡಿ ಗಾಯ ಗೊಳಿಸಿದ ಘಟನೆ ಬುಧವಾರ ನಡೆದಿದೆ.

       ದಿನೇಶ್ ಎಂಬುವವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ಮಂಚಿಗೆಯಲಿ ಅವಿದು ಕೊಂಡಿರುವುನ್ನು ಕಂಡು ದಿನೇಶ್ ಗಾಬರಿಗೊಂಡು ಓಡಿ ಹೋಗಿ ಜನರನ್ನ ಕೂಗಿ ಕೊಂಡಾಗ ಚಿರತೆ ಆತನನ್ನು ಹಿಂಬಾಲಿಸಿ ಬಂದು ಅವನ ಮೇಲೆ ದಾಳಿ ಮಾಡಲು ಬಂದಾಗ ಚಿರತೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಚಿರತೆ ಆತನ ಮೈಮೇಲೆ ಎರಗಿ ಗಾಯಗೊಳಿಸಿದೆ.

       ನಂತರ ಪಕ್ಕದ ಹೊಲದ ದೇವೀರಮ್ಮ ಎಂಬ ವೃದ್ದೆಯ ಮೇಲೆ ಎರಗಿ ಕೈ ಮತ್ತು ತೊಡೆಯ ಭಾಗಕ್ಕೆ ಬಲವಾಗಿ ಕಚ್ಚಿ ಗಾಯಗೊಳಿಸಿದ್ದರೆ, ಚಿರತೆ ಇರುವುದನ್ನ ಖಚಿತ ಪಡಿಸಿಕೊಳ್ಳುವ ಸಲುವಾಗಿ ಬಂದಿದ್ದ ಗ್ರಾಮದ ಯುವಕ ಅನಿಲ್ ಎಂಬಾತನ ಮೇಲೂ ಎರಗಿದ ಚಿರತೆ ಆತನ ಕಾಲನ್ನು ಗಾಯಗೊಳಿಸಿದೆ. ಗಾಯಗೊಂಡಿರುವ ಈ ಮೂವರೂ ಕೂಡ ಶ್ರೀರಾಂಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಮಧ್ಯಾಹ್ನ ಸುಮಾರು 1 ಗಂಟೆಯಾದರೂ ಸಹ ತಾಲ್ಲೂಕಿನ ಅರಣ್ಯ ಇಲಾಖೆಯವರು ಯಾವುದೇ ಕಾರ್ಯಚರಣೆ ನಡೆಸದೆ ವಿಳಂಭ ಮಾಡಿದ್ದರಿಂದ ನೆರೆದಿದ್ದ ಜನರು ಒಂದು ಹಂತದಲ್ಲಿ ತಾಳ್ಮೆಯನ್ನ ಕಳೆದುಕೊಂಡು ಅಕ್ರೋಶಕ್ಕೆ ಒಳಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಡೆಯಿತು.

     ಚಿರತೆ ಮಾವಿನ ಮರದಲ್ಲಿರುವುದನ್ನು ಕಂಡು ಇದನ್ನೆ ಬೆನ್ನತ್ತಿದ್ದ ಜನರು ಮಾವಿನ ಮರಕ್ಕೆ ಕಲ್ಲುಗಳಿಂದ ಒಡೆದು ಚಿರತೆಯನ್ನು ಕೆಳಗಿಳಿಯುವಂತೆ ಮಾಡಿದರು. ಮಾವಿನ ಮರದಿಂದ ಜಿಗಿದ ಚಿರತೆ ಮತ್ತೆ ಜನರಿದ್ದ ಕಡೆ ಓಡಲು ಯತ್ನಿಸಿದಾಗ ಚಿರತೆಯನ್ನ ಬಲೆಗೆ ಬೀಳಿಸಿ ದೊಣ್ಣೆಗಳಿಂದ ಹೊಡೆದರು. ಮೊದಲೇ ಗಾಬರಿ ಹಾಗೂ ಆಯಾಸದಿಂದ ಬಳಲಿದ್ದ ಚಿರತೆ ಮೂರ್ಛೆ ಹೋಯಿತು. ಮೂರ್ಛೆ ಹೋದ ಚಿರತೆಯನ್ನು ಚಿಕಿತ್ಸೆಗಾಗಿ ಅರಣ್ಯಾಧಿಕಾರಿಗಳು ಚಿತ್ರದುರ್ಗದಲ್ಲಿರುವ ಆಡುಮಲ್ಲೇಶ್ವರ ವನ್ಯ ಧಾಮಕ್ಕೆ ತೆಗೆದುಕೊಂಡು ಹೋದರು.

      ಕಾರ್ಯಚರಣೆಯ ನೆತೃತ್ವವನ್ನ ಎ.ಸಿ.ಎಫ್.ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ ಯೋಗೇಶ್, ಶ್ರೀರಾಂಪುರ ಪಿಎಸ್‍ಐ ಜಿ.ಎನ್.ವಿಶ್ವನಾಥ್, ಸಿಬ್ಬಂಧಿಯವರಾದ ರಾಘವೇಂದ್ರ ಮುಂತಾದವರು ಕಾರ್ಯಚರಣೆಯಲ್ಲಿ ಸಾಥ್ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link