ಮಾರುಹೊಳೆ ಬಳಿ ಚಿರತೆ ಸೆರೆ..!

ಹುಳಿಯಾರು
       ಹೋಬಳಿ ವ್ಯಾಪ್ತಿಯ ಮಾರುಹೊಳೆ ಗ್ರಾಮದ ಬಳಿ ಅರಣ್ಯ ಇಲಾಖೆಯವರು  ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ .ಬುಕ್ಕಾಪಟ್ಟಣ ಅರಣ್ಯ ಪ್ರದೇಶಕ್ಕೆ ಸೇರಿದ ಮಾರುಹೊಳೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಚಿರತೆಯೊಂದು ಭಯ ಮೂಡಿಸಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು.
      ಗ್ರಾಮದ ಸುತ್ತ ಬೋರನಕಣಿವೆ ಜಲಾಶಯದ ಹಿನ್ನೀರಿನ ಆವರಣ ಇರುವುದರಿಂದ ಸಹಜವಾಗಿಯೇ ಚಿರತೆ ಆಗಾಗ ಕಾಣಿಸಿಕೊಂಡು ಮರೆಯಾಗುತ್ತಿತ್ತು. ಹಲವು ಬಾರಿ ರೈತರ ದನ, ಕುರಿ, ಮೇಕೆಗಳನ್ನು ಹೊತ್ತೊಯ್ದಿತ್ತು. ಹಾಗಾಗಿ ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶದಂತೆ ಬೋನು ಇಡಲಾಗಿತ್ತು. ಬೇಟೆ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ. ಸುಮಾರು ಮೂರು ವರ್ಷದ ಗಂಡು ಚಿರತೆಯನ್ನು ತಿಪಟೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಜಿ.ರವಿ ಅವರ ಮಾರ್ಗದರ್ಶನದಂತೆ ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಯಿತು ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಎಚ್.ಮಲ್ಲಿಕಾರ್ಜುನಪ್ಪ ತಿಳಿಸಿದರು.
      ಬುಕ್ಕಾಪಟ್ಟಣ ವಲಯ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಟಿ.ಕಿರಣ್, ಸಿದ್ದಲಿಂಗಮೂರ್ತಿ, ಅರಣ್ಯ ರಕ್ಷಕರಾದ ದಿಲೀಪ್‍ಕುಮಾರ್, ಆರ್.ಶೇಖರ್, ಅರಣ್ಯ ವೀಕ್ಷಕ ಸುರೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link