ರಟ್ಟಿಹಳ್ಳಿ :
ತಾಲೂಕಿನ ಗಂಗಾಯಿಕೊಪ್ಪ ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದ್ದು, ಕಳೆದ ಹದಿನೈದು ದಿನಗಳ ಹಿಂದೆ ಗ್ರಾಮದ ಬಳಿ ಅರಣ್ಯ ಇಲಾಖೆಯಿಂದ ಬೋನನ್ನು ಇರಿಸಲಾಗಿತ್ತು.ಗ್ರಾಮದಲ್ಲಿನ ನಾಯಿ, ಮೇಕೆ ಮತ್ತು ಕುರಿಗಳನ್ನು ಚಿರತೆ ತಿಂದು ಹಾಕುತ್ತಿತ್ತು.ಕಳೆದ ಕೆಲವು ದಿನಗಳಿಂದ ಗ್ರಾಮದ ಬಳಿ ಓಡಾಡಿಕೊಂಡಿದ್ದು,ಎರಡು ವರ್ಷದ ಚಿರತೆಯಾಗಿದೆ.ಚಿರತೆ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ಕೊಂಚ ನಿಟ್ಟುಸಿರುಬಿಟ್ಟದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ