ತೋರಣಗಲ್ಲು
ಜೆ.ಎಸ್.ಡಬ್ಲ್ಯೂ ಸ್ಟೀಲ್ ಮತ್ತು ಕಾರ್ಖಾನೆ ಇಲಾಖೆ ಬಳ್ಳಾರಿ, ಇವರ ಸಹಯೋಗದಲ್ಲಿ ರಾಸಾಯನಿಕ ದುರಂತ ತಡೆಗಟ್ಟುವಿಕೆಯ ದಿನವನ್ನು ಜೆ.ಎಸ್.ಡಬ್ಲ್ಯೂ ಸ್ಟೀಲ್ ವಿಜಯನಗರ ವಕ್ರ್ಸನಲ್ಲಿ ಆಚರಿಸಿದರು. ಭೋಪಾಲ ಅನಿಲ ದುರಂತದಿಂದ ಬಲಿಯಾದವರ ಗೌರವಾರ್ಪಣೆ ಮತ್ತು ಆ ಘಟನೆಯಿಂದ ಪಾಠ ತಿಳಿದುಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ.
ಸುರಕ್ಷಿತ ಅನಿಲ ನಿಭಾಯಿಸುವ ಅಭ್ಯಾಸಗಳು, ಮತ್ತು ಸುರಕ್ಷಿತ ವ್ಯವಸ್ಥೆಗಳ ಪಾಲನೆ ಮಾಡುವ ವಿಧಾನವನ್ನು ಮೆರವಣಿಗೆ ಮತ್ತು ಸ್ಕಿಟ್‍ಗಳ ಮೂಲಕ ಗುರುವಾರ ಪ್ರದರ್ಶಿಸಲಾಯಿತು. ಹಾಗೂ ಆನ್-ಸೈಟ್ ಎಮರ್ಜೆನ್ಸಿ ಡ್ರಿಲ್ ನಡೆಸಲಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಡಾ. ರಾಮಪ್ರಸಾತ ಮನೋಹರ, ಕಾರ್ಖಾನೆಗಳ ಜಂಟಿ ನಿರ್ದೇಶಕ ಡಿ.ಸಿ. ಜಗದೀಶ್, ಜೆ.ಎಸ್.ಡಬ್ಲ್ಯೂ ಸ್ಟೀಲ್ ವಿಜಯನಗರ ವಕ್ರ್ಸನ ಅಧ್ಯಕ್ಷರು ರಾಜಶೇಖರ ಪಟ್ಟನಶೆಟ್ಟಿ ಹಾಗೂ ಜೆ.ಎಸ್.ಡಬ್ಲ್ಯೂ ಅಧಿಕಾರಿವೃಂದ, ಬಳ್ಳಾರಿ ಡಿಸ್ಟ್ರಿಕ್ ಕ್ರೈಸಿಸ್ ಮ್ಯಾನೆಜ್‍ಮೆಂಟ್ ಸದಸ್ಯರು ಉಪಸ್ತಿತರಿದ್ದರು.
ಮೋಕ್ ಡ್ರಿಲ್ನಲ್ಲಿ ಕೊರೆಕ್ಸ ಗ್ಯಾಸ್ ಹೋಲ್ಡ್‍ರನಿಂದ ಗ್ಯಾಸ್ ಲೀಕೆಜ್‍ನ್ನು ಈ ಸಂಧರ್ಭದಲ್ಲಿ ಚಿತ್ರಿಸಿದರು. ಹತ್ತಿರದ ಕೈಗಾರಿಕೆಗಳು ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ತಂಡ ಭಾಗವಹಿಸಿದ್ದವು. ಅಗ್ನಿಶಾಮಕ ಪ್ರಕ್ರಿಯೆ ಹಾಗೂ ನಿಯಂತ್ರಣ ಕ್ರಮಗಳು, ಸ್ಥಾಳಾತಂರಿಸುವಿಕೆ ಹಾಗೂ ಪ್ರಥಮ ಚಿಕಿತ್ಸೆಯ ವಿಧಾನವನ್ನು ಜೆ.ಎಸ್.ಡಬ್ಲ್ಯೂ ಸ್ಟೀಲ್ ವಿಜಯನಗರ ತಂಡವು ಪ್ರದರ್ಶಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಮಪ್ರಸಾತ ಮನೋಹರ, ತುರ್ತುಸ್ಥಿತಿಗಳನ್ನು ತಗ್ಗಿಸುವಲ್ಲಿ ಜೆ.ಎಸ್.ಡಬ್ಲ್ಯೂ ಸ್ಟೀಲ್ ಅಳವಡಿಸಿಕೊಂಡಿರುವ ಸಾಮಥ್ರ್ಯ ಹಾಗೂ ವಿಧಾನವನ್ನು ಶ್ಲಾಘಿಸಿದರು. ತುರ್ತುಪರಿಸ್ಥಿತಿಯ ಪ್ರಾಮುಖ್ಯತೆ ಮತ್ತು ನಿರಂತರವಾದ ಸುಧಾರಣೆಗೆ ಅವರು ಒತ್ತಾಯಿಸಿದರು. ರಾಸಾಯನಿಕ ತುರ್ತುಸ್ಥಿತಿಗಳನ್ನು ತಡೆಗಟ್ಟುವುದು, ನಿಯಂತ್ರಿಸುವುದು ಹಾಗೂ ತಡೆಗಟ್ಟುವ ಅವಶ್ಯಕತೆಗಳನ್ನು ವಿವರಿಸಿದರು.
ಜೆ.ಎಸ್.ಡಬ್ಲ್ಯೂ. ಸ್ಟೀಲ್ ಬಗ್ಗೆ: ಯು.ಎಸ್ $12 ಬಿಲಿಯನ್‍ನ ಜೆ.ಎಸ್.ಡಬ್ಲ್ಯೂ ಸವೂಹವು ಸ್ಟೀಲ್, ಎನರ್ಜಿ, ಇನ್ಫ್ರಾಸ್ಟ್ರಕ್ಚರ್, ವೆಂಚರ್ಸ್ ಹಾಗೂ ಸ್ಪೋಟ್ಸ್ ಒಳಗೊಂಡಿದೆ. ಜೆ.ಎಸ್.ಡಬ್ಲ್ಯೂ. ಸ್ಟೀಲ್ ಭಾರತದಲ್ಲಿ 18 ಎಮ್.ಟಿ.ಪಿ.ಎ ಉಕ್ಕು ತಯಾರಿಕ ಸಾಮಥ್ರ್ಯ ಹೊಂದಿರುವ ಉಕ್ಕು ಸ್ಥಾವರವಾಗಿದೆ. ಕರ್ನಾಟಕದ ವಿಜಯನಗರದಲ್ಲಿರುವ ಜೆ.ಎಸ್.ಡಬ್ಲ್ಯೂ. ಸ್ಟೀಲ್ ಸ್ಥಾವರವು 12 ಎಮ್.ಟಿ.ಪಿ.ಎ ಸಾಮಥ್ರ್ಯ ಹೊಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ