ಹಾವೇರಿ
ಮಕ್ಕಳು ರಜಾ ದಿನಗಳಲ್ಲಿ ಸಮಯ ವ್ಯರ್ಥಮಾಡದೇ ಶಿಬಿರದಲ್ಲಿ ಪಾಲ್ಗೊಂಡು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಹೇಳಿದರು.
ಗುರುವಾರ ನಾಗೇಂದ್ರನಮಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.8ರಲ್ಲಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಜರುಗಿದ ಬೇಸಿಗೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ವಯಕ್ತಿಕ ಸ್ವಚ್ಛತೆ ಹಾಗೂ ಪರಿಸರ ಕಾಳಜಿ ಬಗ್ಗೆ ಅರಿವು ಹೊಂದಬೇಕು. ಜೊತೆಗೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಅವರು ಮಾತನಾಡಿ, ಮಕ್ಕಳಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಆಶಾಕಿರಣ ಸಂಸ್ಥೆಯ ಮುತ್ತುರಾಜ ಮಾದರ, ಗೋವಿಂದಪ್ಪ ದೊಡ್ಡಮನಿ, ಪರಮೇಶ್ವರ ಬಡಿಗೇರ, ಉಮೇಶ ಮರೋಳ, ಸಿ.ಜಿ,ಬ್ಯಾಡಗಿ, ಶ್ರೀಮತಿ ವಾಣಿ, ಶ್ರೀಮತಿ ಕೋತಂಬರಿ, ಶ್ರೀಮತಿ ಬಳ್ಳಾರಿ, ಶ್ರೀಮತಿ ಸುಧಾಬಾಯಿ, ಎಸ್.ಎಂ.ಬಡಿಗೇರ, ಮುಖ್ಯೋಪಾಧ್ಯಯ ಅಶೋಕ ಹಾವನೂರ ಉಪಸ್ಥಿತರಿದ್ದರು. ಬಿ.ಆರ್.ಸಿ. ಸಿ.ಎಸ್.ಭಗವಂತಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಶಿವಣ್ಣ ಸ್ವಾಗತಿಸಿದರು.