ಮಕ್ಕಳ ದಿನಾಚರಣೆ

ಹಾವೇರಿ :

      ತಾಲೂಕಿನ ಕೋಳೂರ ಸರ್ಕಾರಿ ಕನ್ನಡ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ಯ ಪುಟ್ಟ-ಪುಟಾಣಿಗಳಿಂದ ಏರ್ಪಡಸಿದ ಚಿತ್ರಕಲೆ,ಪ್ರಬಂದ ಸ್ಪರ್ಧೆ ಕಾರ್ಯಕ್ರಮ ಜರುಗಿದವು. ಮಕ್ಕಳ ದಿನಾಚರಣೆಯ ನೇತೃತ್ವ ಶಾಲೆಯ ಮಕ್ಕಳೆ ವಹಿಸಿದ್ದು, ಅಧ್ಯಕ್ಷತೆಯನ್ನು ವಹಿಸಿದ ಪುಟಾಣಿ ನಾಗರತ್ನ ಹೊಸಪೇಟೆ ಮಾತನಾಡಿದಳು.

        ಚಿತ್ರಕಲಾ ಸ್ಪರ್ಧೆಯಲ್ಲಿ ಪುಟಾಣಿಗಳಾದ ನವೀನ ಸವಣೂರು ಪ್ರಥಮ, ಕಾವ್ಯಾ, ಮೇಲ್ಮುರಿ ದ್ವಿತೀಯ, ಸೌಜನ್ಯ ಬಡಿಗೇರ ತೃತೀಯ ನೆಹರೂರವರ ಕುರಿತು ಕನ್ನಡ ಪ್ರಬಂಧ ಸ್ಪರ್ದೆಯಲ್ಲಿ ವಿನಾಯಕ ಇಚ್ಚಂಗಿ ಪ್ರಥಮ,ರಕ್ಷಿತಾ ಮಂಟಗಣಿ ದ್ವೀತಿಯ, ತೈಬಾ ಅಗಸರ ತೃತೀಯ ಇಂಗ್ಲೀಷ ಪ್ರಬಂಧ ಸ್ಪರ್ದೆಯಲ್ಲಿ ನಾಗರತ್ನಾ ಹೊಸಪೇಟೆ ಪ್ರಥಮ, ಅಕ್ಷತಾ ಬಾರ್ಕಿ ದ್ವೀತಿಯ, ಅನುಪಮಾ ಕಾಮಣಿ ತೃತೀಯ, ಸ್ಥಾನ ಪಡೆದು ಬಹುಮಾನ ಪಡೆದುಕೊಂಡರು.

       ಮುಖ್ಯ ಅತಿಥಿಗಳಾಗಿ ಪುಟಾಣಿಗಳಾದ ಮಹ್ಮದ ಅಜಮ ದೇವಗಿರಿ, ಸುದರ್ಶನ ಹೊಳಗಿ,ತೈಬಾ ಅಗಸರ, ರಕ್ಷಿತಾ ಮಂಟಗಣಿ, ಭಾಗ್ಯಲಕ್ಷ್ಮೀ ಬಜ್ಜಿ, ಸೌಜನ್ಯ ಬಡಿಗೇರ. ಪ್ರಾರ್ಥನೆಯನ್ನು ಪುಟಾಣಿ ಐಶ್ವರ್ಯ ಹಾದಿಮನಿ, ಸ್ವಾಗತವನ್ನು ಪ್ರಧಾನ ಗುರುಗಳಾದ ಎಮ್‍ಎಸ್ ಯತ್ತಿನಹಳ್ಳಿ ನಡೆಸಿಕೊಟ್ಟರು, ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಹರೀಶ ಕೆಳಗೇರಿ ವಂದನಾರ್ಪಣೆ ಕಲ್ಪನಾ ಹಾಳಮನಿ ಮಾಡಿದರು ಈ ರೀತಿಯಾಗಿ ಕೋಳೂರು ಶಾಲೆಯಲ್ಲಿ ಪುಟ್ಟ ಪುಟಾಣಿಗಳೇ ಎಲ್ಲಾ ಕಾರ್ಯಕ್ರಮ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link