ತಿಪಟೂರು : ಕಾಟಾಚಾರಕ್ಕೆ ಮಕ್ಕಳ ಗ್ರಾಮಸಭೆ ಆಯೋಜನೆ

 ಸಭೆಗೆ ಬಾರದ ತಾ.ಪಂ ಜಿಪಂ ಮತ್ತು ಗ್ರಾ ಪಂ ಸದಸ್ಯರು
ತಿಪಟೂರು :
ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ

       ಮಕ್ಕಳಿಗೆ ಪ್ರಚಾಪ್ರಭುತ್ವದ ಹಾದಿಯನ್ನು ತೋರಿಸಬೇಕಾದ ಜವಾಬದಾರಿಯನ್ನು ಹೊತಿರುವ ಗ್ರಾಮ ಪಂಚಾಯಿತಿಗಳು ಕೇವಲ ಮಾಡಬೇಕೆನ್ನುವ ಉದ್ದೇಶಕ್ಕಾಗಿಯೇ ಮಕ್ಕಳ ಗ್ರಾಮಸಭೆಗಳನ್ನು ಮಾಡುತ್ತಿರುವುದು ಕಮಡುಬರುತ್ತಿದೆ.
       ಸರ್ಕಾರಿ ಆದೇಶದಂತೆ ಮಕ್ಕಳ ಗ್ರಾಮಸಭೆ ಮಾಡುವುದು ಗ್ರಾಮ ಪಂಚಾಯಿತಿಯ ಕರ್ತವ್ಯ ಆದರೆ ಇದನ್ನು ಬೇಕೋ ಬೇಡವೋ ಎಂಬಂತೆ ಮಾಡುತ್ತಿರುವುದು ಗಾಂಧೀಜಿಯವರ ಸ್ಥಳಿಯ ಆಡಳಿತ ದಾರಿ ತಪ್ಪಿರುವುದಕ್ಕೆ ಒಂದು ಸ್ಪಷ್ಠ ನಿದರ್ಶನವಾಗಿದೆ. ಇನ್ನು ಸ್ಥಳೀಯರು ಹೇಳುವಂತೆ ಈ ಗ್ರಾಮ ಪಮಚಾಯಿತಿಯವರು ಸೂಕ್ತರೀತಿಯಲ್ಲಿ ಗ್ರಾಮಸಭೆಗಳನ್ನೇ ಮಾಡುವುದಿಲ್ಲ ಇನ್ನು ಮಕ್ಕಳ ಗ್ರಾಮಸಭೆ ಅವರಿಗೇತಕೆ ಅವರು ಗ್ರಾಮ ಪಂಚಾಯಿತಿ ಅನಿಧಾನಗಳು, ಈಸ್ವತ್ತನ್ನು ಮಾಡಿಕೊಂಡು ಹಣವನ್ನು ಮಾಡಿಕೊಳ್ಳುತ್ತಿದ್ದಾರೆಯೇ ಹೊತರು ಗ್ರಾಮದ ಅಭಿವೃದ್ಧಿ ಅವರಗೇ ಬೇಕಿಲ್ಲ ಅವರು ಸ್ವತಃ ಅಭಿವೃದ್ಧಿಯಾಗುವುದನ್ನು ನೋಡಿಕೊಳ್ಳುತ್ತಿದ್ದು ಕೆಲವು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಪಟ್ಟಣದ ಯಾವುದೋ ಒಂದು ಮೂಲೆಯಲ್ಲಿ ಕಛೇರಿಯನ್ನು ತೆರೆದು ಕಛೇರಿಗೆ ಬರುವುದನ್ನೇ ಮರೆತು ವಿಧವಾ ವೇತನ, ವೃದ್ಧಾಪ್ಯವೇತನ, ಅಂಗವಿಕ ವೇತನ ಮತ್ತು ಮುಖ್ಯವಾಗಿ ಮಕ್ಕಳಿಗಾಗಿ ಜಾತಿ, ಆದಾಯ, ವಾಸಸ್ಥಳ ದೃಢೀಕರಣ ಪತ್ರಕ್ಕಾಗಿ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.
      ಇದಕ್ಕೆ ಸೂಕ್ತ ಉದಾಹರಣೆಗಳೆಂದರೆ ಸೋಮವಾರ ನೆಲ್ಲಿಕೆರೆ, ಗುಡಿಗೊಂಡನಹಳ್ಳಿ, ಹೊನ್ನವಳ್ಳಿಯಲ್ಲಿ ನಡೆದ ಗ್ರಾಮಸಭೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲದೇ ಮಕ್ಕಳ ಗ್ರಾಮಸಭೆಗಳನ್ನು ನಡೆಸಿದ್ದಾರೆ. ಇದಕ್ಕೆ ಸ್ಪಷ್ಠವಾಗಿ ಹೇಳಬೇಕೆಂದರೆ ಗ್ರಾಮ ಪಂಚಾಯಿತಿಯವರು ಮಕ್ಕಳ ಗ್ರಾಮಸಭೆಯನ್ನು ಮಾಡಬೇಕೆನ್ನುವ ಉದ್ದೇಶದಿಂದಲ್ಲ ಮಕ್ಕಳು ಬರದೇ ಇದ್ದರೆ ಸಾಕೆಂದು ಕೊನೆಗಳಿಗೆಯಲ್ಲಿ ಕೆಲವು ಶಾಲೆಗಳಿಗೆ ಸುತ್ತೋಲೆಯನ್ನು ಕಳುಹಿಸದೆ ಕೇವಲ ಕರಪತ್ರವನ್ನು ಕೊಟ್ಟು ಹೋಗಿದ್ದಾರೆಂದು ಮೂಗತಿಹಳ್ಳಿ ಶಾಲಾ ಶಿಕ್ಷಕರು ತಿಳಿಸುತ್ತಾರೆ.
        ಇನ್ನು ನೆಲ್ಲಿಕೆರೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 6 ಶಾಲೆಗಳು ಬರುತ್ತವೆ ಅದರಲ್ಲಿ ನೆಲ್ಲಿಕೆರೆ ಪ್ರೌಢಶಾಲೆಯಿಂದ 22, ನೆಲ್ಲಿಕೆರೆ ಹೆಚ್.ಪಿ.ಎಸ್ 22, ಬುರುಡೇಘಟ್ಟ 59 ಮಕ್ಕಳಲ್ಲಿ 6 ಮಕ್ಕಳು, ಮೂಗತಿಹಳ್ಳಿ 1, ವಿದ್ಯಾರ್ಥಿಗಳು ಹಾಜರಾದರೆ ಇನ್ನು ಕರೀಕೆರೆ, ಹೊಸೂರು ಶಾಲೆಗೆ ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ರಜೆ ನೀಡಿದ್ದರು.
       ಇದರ ಬಗ್ಗೆ ನೆಲ್ಲಿಕೆರೆ ಪಿ.ಡಿ.ಓ ಭಾಗ್ಯಲಕ್ಷ್ಮಿರನ್ನು ವಿಚಾರಿಸಿದಾಗ ನಾವು ವಾರದಹಿಂದೆಯೇ ಸುತ್ತೋಲೆ ಕಳುಹಿಸಿದ್ದೆವು ಆದರೂ ಬಂದಿಲ್ಲ ನಾವೇ ಹೋಗಿ ಕರೆದುಕೊಂಡು ಬರಲಾಗುತ್ತದೆಯೇ ಎಂದು ಬೇಜವಾಬ್ದಾರಿ ಉತ್ತರವನ್ನು ಕೊಡುತ್ತಾರೆ.ಜಿ.ಹೆಚ್.ಪಿ.ಎಸ್ ಬುರುಡೇಘಟ್ಟದ ಶಿಕ್ಷಕರು ಹೇಳುವಂತೆ ನಮ್ಮ ಶಾಲೆಯಲ್ಲಿ 59 ವಿದ್ಯಾರ್ಥಿಗಳಿದ್ದು ಅವರಲ್ಲಿ ನಾನು 6 ಮಕ್ಕಳನ್ನು ಗ್ರಾಮಸಭೆಗೆ ಕರೆದುಕೊಂಡು ಬಂದಿದ್ದೇನೆ ಎಲ್ಲರನ್ನು ಆಟೋದಲ್ಲಿ ಕರೆದುಕೊಂಡು ಬರಲಾಗುತ್ತದೆಯೇ ಎಂದು ತಿಳಿಸಿದರು.
      ಮಕ್ಕಳ ಗ್ರಾಮಸಭೆ ಬಿಟ್ಟು ಮಕ್ಕಳ ದಿನಾಚರಣೆ ಮಾಡಿದರು : ಮಕ್ಕಳ ಗ್ರಾಮಸಭೆಯನ್ನು ಮಾಡಿ ಮಕ್ಕಳ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸಲಿ ಎಂದು ಸರ್ಕಾರ ಆದೇಶಮಾಡಿದ್ದರೆ ನೆಲ್ಲಿಕೆರೆಯಲ್ಲಿ ಅಂಗನವಾಡಿ ಮಕ್ಕಳನ್ನು ಕರೆಸಿ ಮಕ್ಕಳ ದಿನಾಚರಣೆಮಾಡಿದರು ಇನ್ನು ಶಿಕ್ಷಕರು ಮಾತ್ರ ಹಾಜರಾಗಿ ಮೊಬೈಲ್ ನಲ್ಲಿ ಸೆಲ್ಫಿತೆಗೆದುಕೊಳ್ಳುವುದರಲ್ಲಿ ಕಾಲಕಳೆದು ಹೋದರು. ಶಾಲಾ ಆವರಣದಲ್ಲಿ ಸಾಕಷ್ಟು ಜಾಗವಿದ್ದರು ನಡುರಸ್ತೆಯಲ್ಲಿ, ಸುಡುಬಿಸಿಲಿನಲ್ಲಿ ಷಾಮಿಯಾನ ಹಾಕಿ ಆಯೋಜಿಸುವ ಅಗತ್ಯವೇನಿತ್ತು.
     ಗ್ರಾಮಸಭೆಗೆ ಎಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗುವುದು ಬೇಡ, ಸ್ಥಳಿಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಎಂದು ತಿಳಿಸಿದ್ದೇವೆ.
      ಇನ್ನೂ ಹೊನ್ನವಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯು ಗ್ರಾಮ ಪಂಚಾಯಿತಿಗೆ ಹಾಗೂ ಪೋಲಿಸ್ ಠಾಣೆಗೆ ಹತ್ತಿರವಿದ್ದರೂ ಸಹ ನಮ್ಮ ಶಾಲೆಯ ಒಳಗಡೆ ಬಂದು ಮಧ್ಯಪಾನ ಮಾಡಿ ಅಲ್ಲಿಯೇ ಬಾಟಲಿಗಳು ಕೆಟ್ಟ ವಸ್ತುಗಳು ಬಿಟ್ಟು ಹೋಗುತ್ತಾರೆ ಇದರಿಂದ ನಮಗೆ ಮುಕ್ತಿ ಕೊಡಿ ಎಂದು ಹೊನ್ನವಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯು ತನ್ನ ಆಳಲು ತೊಡಿಕೊಂಡರು. 
     ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಅಯೋಜನೆ ಮಾಡಲಾಗಿದ್ದ ಹೊನ್ನವಳ್ಳಿ ಗ್ರಾಮ ಪಂಚಾಯಿತಿಯ “ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಮಾತಾನಾಡಿದರು. 
400ಜನ ವಿದ್ಯಾರ್ಥಿಗಳಿಗೆ 120ಲೀಟರ್ ನೀರು ಸಾಕೆ:
     ನಮ್ಮ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದೇವೆ ಆದರೆ ನಮಗೆ ಕೇವಲ ಆರು ಕ್ಯಾನ್ ಮಾತ್ರ ನೀರನ್ನು ಕುಡಿಯಲು ಒದಗಿಸುತ್ತಿದ್ದಾರೆ ಎಂದು ಪ್ರಥಮ ಪಿ.ಯು.ಸಿಯ ಮನು ಸಭೆಗೆ ತಿಳಿಸಿ ನಮಗೆ ಪ್ರತಿ ವರ್ಷ ಇದೇ ರೀತಿ ಸಮಸ್ಯೆಗಳನ್ನು ಕೇಳುತ್ತಾ ಹೋಗುತ್ತಿರಿ ಆದರೆ ಬಗೆಹರಿಸುವ ಪ್ರಯತ್ನವನ್ನು ತಾವುಗಳು ಯಾರು ಮಾಡುತ್ತಿಲ್ಲ ಎಂದು ತಿಳಿಸಿದರು.
    ಹೂಲಿಹಳ್ಳಿಗೆ ಹೋಗಲು ಬಸ್ ವ್ಯವಸ್ಥೆ ಸರಿಯಾಗಿ ಇಲ್ಲ, ಹೊನ್ನವಳ್ಳಿ ಗ್ರಾಮದಲ್ಲಿ ಗ್ರಂಥಾಲಯವಿದ್ದು ಅಲ್ಲಿ ಜೂಜಾಟ, ಮಧ್ಯಪಾನ ಮಾಡುವುದರಿಂದ ನಮಗೆ ಗ್ರಂಥಾಲಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಚೌಡೇನಹಳ್ಳಿ ಹಾಗೂ ಗ್ಯಾರಘಟ್ಟದಿಂದ ಬರುವ ವಿಧ್ಯಾರ್ಥಿಗಳು ಪ್ರತಿನಿತ್ಯ ಗುಂಡಿಯಿರುವ ರಸ್ತೆಗಳನ್ನು ದಾಟಿಕೊಂಡು ಬರುತ್ತಿದ್ದೇವೆ ಇದರಿಂದ ನಮಗೆ ಮುಕ್ತಿಯನ್ನು ನೀಡಿ ಎಂದು ತಿಳಿಸಿದರು.
     ಮಕ್ಕಳ ಗ್ರಾಮ ಸಭೆಯ ಆಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜ್ಞಾನ ಜ್ಯೋತಿ ಆರ್ಥಿಕಾ ಸಾಕ್ಷರತಾ ಕೇಂದ್ರದ ಸಮಾಲೋಚಕರು ರೇಖಾ, ಸಿಎಮ್‍ಸಿಯ ಸಂಚಾಲಕ ಪ್ರಶಾಂತ್‍ಕರೀಕೆರೆ, ಮಾಜಿ ಅಧ್ಯಕ್ಷ ಪುರುಷೋತ್ತಮ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಲತಾ, ಮಹಿಳಾ ಮಕ್ಕಳ ಇಲಾಖೆ ಮಂಜುಳಾದೇವಿ, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಶುಪಾಲರಾದ ಶಿವಕುಮಾರ್ 8 ಕ್ಕೂ ಹೆಚ್ಚು ಶಾಲೆಯ ಮುಖ್ಯೋಪಾಧ್ಯಯರು, ಗ್ರಾ ಪಂ ಸಿಬ್ಬಂದಿಯವರು ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap