ಹಂಪಿಯಲ್ಲಿ ವೀರಯೋಧ ಎಚ್.ಗುರು ಅವರ ಚಿತಾಭಸ್ಮ ವಿಸರ್ಜನೆ.

ಹೊಸಪೇಟೆ :

      ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಬಲಿಯಾದ ಮಂಡ್ಯದ ವೀರಯೋಧ ಎಚ್.ಗುರು ಅವರ ಚಿತಾಭಸ್ಮವನ್ನು ಹಂಪಿಯ ತುಂಗಭದ್ರಾ ನದಿಯಲ್ಲಿ ಮಂಗಳವಾರ ಸಮಾನ ಮನಸ್ಕರ ವೇದಿಕೆಯು ವಿಸರ್ಜಿಸಿತು.ನಗರದ ಎಪಿಎಂಸಿ ಯಾರ್ಡ್‍ನಿಂದ ಪ್ರಾರಂಭವಾದ ಮೆರವಣಿಗೆಯು ಸಹಸ್ರಾರು ಜನರೊಂದಿಗೆ ವಾಲ್ಮೀಕಿ ಸರ್ಕಲ್, ರಾಮಾ ಟಾಕೀಸ್, ಜುಮ್ಮ ಮಸೀದಿ, ಗಾಂಧಿ ಚೌಕ, ಬಸ್ ನಿಲ್ದಾಣ, ರೋಟರಿ ಸರ್ಕಲ್, ಹಂಪಿ ರಸ್ತೆ ಮಾರ್ಗವಾಗಿ ಅದ್ದೂರಿಯಾಗಿ ಹೊರಟಿತು.

       ಬಳಿಕ ಅಲ್ಲಿಂದ ಅನಂತಶಯನಗುಡಿ, ಕೊಂಡನಾಯಕನಹಳ್ಳಿ, ಮಲಪನಗುಡಿ, ಗಾಳೆಮ್ಮನಗುಡಿ, ಕಡ್ಡಿರಾಂಪುರ, ಮಾರ್ಗವಾಗಿ ಹಂಪಿಯ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.ವೀರಯೋಧನ ಚಿತಾಭಸ್ಮಕ್ಕೆ ನಮಿಸಲು ದಾರಿಯುದ್ದಕ್ಕೂ ಶಾಲಾ ಮಕ್ಕಳು, ಊರಿನ ಗಣ್ಯರು, ಸಾರ್ವಜನಿಕರು ಹೂವಿನಹಾರ ಹಾಕಿ ನಮಿಸಿದರು. ಸುಮಾರು 8 ಗಂಟೆಗಳ ಕಾಲ ಮೆರವಣಿಗೆ ನಡೆದು ಸುಮಾರು 20 ಕಿ.ಮಿ.ಸಂಚರಿಸಿತು. ಪಕ್ಷ ಭೇದ ಮರೆತು ಎಲ್ಲರೂ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link