ಅಕ್ಟೋಬರ್ ತಿಂಗಳಲ್ಲಿ 119.48 ಎಂ.ಎಂ. ಮಳೆ
ತಿಪಟೂರು :

ಸತತ ಬರಗಾಲದಿಂದ ಒಂದು ಕಡೆ ಬೆಳೆಇಲ್ಲದೆ ಕಂಗಾಲಾಗಿದ್ದ ರೈರಿಗೆ ಈ ಬಾರಿಯ ಮಳೆ ಉತ್ತಮವಾಗಿ ಬಂದು ಉತ್ತಮ ಫಸಲಿನ ಕನಸು ಕಾಣುತ್ತಿದ್ದರು ಆದರೆ ಈಗ ಸುರಿಯುತ್ತಿರುವ ಚಿತ್ತಾಮಳೆಗೆ ರಾಗಿ ಚಿತ್ತಾದಂತೆ ಕುಸಿದು ಬಿದ್ದು ಫಸಲು ಕೈಸೇರುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಅನ್ನದಾತನಿದ್ದಾರೆ.
ಕಳೆದ ವಾರದ ಹಿಂದೆ ಇನ್ನೇನು ಫಸಲು ಬಂದಿದೆ ದನಕರುಗಳಿಗೆ ಮೇವಾಗುತ್ತದೆ ಮತ್ತು ರಾಗಿಯೂ ಚೆನ್ನಾಗಿ ಇಳುವರಿ ಬರುತ್ತದೆ ಎಂದು ಕನಸುಕಾಣುತ್ತಿದ್ದ ಅನ್ನದಾತನ ಕನಸು ಕೇವಲ ಮರಿಚಿಕೆಯಾಗುವಂತೆ ಕಾಣುತ್ತಿದೆ. ಶುಕ್ರವಾರದಿಂದ ಬಿಡದೆ ಸುರಿಯುತ್ತಿರುವ ಚಿತ್ತಾ ಮಳೆಯು ರಾಗಿ ಪೈಸಿನ ಜೊತಗೆ ಅನ್ನಾದನಿಗೂ ಚಿತ್ತಾದಂತೆ ಕಾಣುತ್ತಿದ್ದು ರಾಗಿ ಪೈರು ನೆಲಹಿಡಿದಿದೆ.
ಕೃಷಿ ಇಲಾಖೆಯ ವರದಿಯ ಪ್ರಕಾರ ತಾಲ್ಲೂಕಿನಲ್ಲಿ ಸೋಮವಾರ ತಿಪಟೂರು 94 ಎಂ.ಎಂ, ಗ್ಯಾರಘಟ್ಟ 88.9ಮಳೆಯಾಗಿದ್ದು, ಅಕ್ಟೋಬರ್ 16 ರಿಂದ 22ರವರೆಗೆ ಹೋಬಳಿವಾರು ಮಳೆ ಪ್ರಮಾಣ ಕಸಬಾ 207 ಎಂ.ಎಂ, ಹೊನ್ನವಳ್ಳಿ 234 ಎಂ.ಎಂ, ಕಿಬ್ಬನಹಳ್ಳಿ 161 ಎಂ.ಎಂ ಮತ್ತು ನೊಣವಿನಕೆರೆ 156 ಎಂ.ಎಂ ಮಳೆಯಾಗಿದ್ದು ಇದು ಅಕ್ಟೋಬರ್ ತಿಂಗಳ ವಾಡಿಕೆ ಮಳೆಗಿಂತ ಹೆಚ್ಚಾಗಿದೆ ಎಂದು ತಿಳಿಸಿದೆ
ಕಿಬ್ಬನಹಳ್ಳಿ ರೈತ ಮನು ಅವರು ಹೇಳುವಂತೆ ನಾವು ಉತ್ತಮ ಇಳುವರಿಯ ಕನಸುಕಾಣುತ್ತಿದ್ದ ನಮಗೆ ಈ ಮಳೆ ಬಂದು ಹಾಳುಮಾಡಿದ್ದು ಕೈಗೆ ಬಂದ ಫಸಲು ಬಾಯಿಗೆ ಬರದಂತಾಗಿದೆ ಎಂದರು.
