ಹಾನಗಲ್ಲ :
ಲೋಕಸಭೆ ಚುನಾವಣೆ ವ್ಯವಸ್ಥಿತವಾಗಿ ನಡೆಯಲು ಕೈಗೊಳ್ಳಬೇಕಾದ ಕ್ರಮಗಳನ್ನು ಖುದ್ದಾಗಿ ಆಯಾ ಭಾಗದ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಜವಾಬ್ದಾರಿಯಿಂದ ನಿರ್ವಹಿಸಿ ಚುನಾವಣೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ರಾಜ್ಯ ಚುನಾವಣಾ ಸಾಮಾನ್ಯ ವೀಕ್ಷಕ ಅಖ್ತರ್ ರಿಯಾಜ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಶನಿವಾರ ಹಾನಗಲ್ಲಗೆ ಭೇಟಿ ನೀಡಿ ಹಿರೇಕೆರೂರ ಮತ್ತು ಹಾನಗಲ್ಲ ತಾಲೂಕಗಳ ಚುನಾವಣಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಅವರು, ಪ್ರತಿಯೊಂದು ಮತಗಟ್ಟೆಗಳೂ ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ ಸುವ್ಯವಸ್ಥಿತ ರೀತಿಯಲಿದ್ದು, ಮತದಾರ ಸ್ನೇಹಿ ವಾತಾವರಣ ಇರುವಂತೆ ಕ್ರಮವಹಿಸಲು ಹಾಗೂ ಎಲ್ಲಾ ಹಂತದ ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರದೇ ಜವಾಬ್ದಾರಿಯಿಂದ ವರ್ತಿಸಬೇಕು. ಮುಂದಾಗಬಹುದಾದ ಅಹಿತಕರ ಘಟನೆಗಳನ್ನು ತಡೆಯಬೇಕು ಎಂದು ಸೂಚಿಸಿದರು.
ಹಾನಗಲ್ಲ ಹಾಗೂ ಹಿರೇಕೇರೂರ ತಾಲೂಕುಗಳ ಮತಗಟ್ಟೆಗಳ ಸ್ಥಿತಿಗತಿ, ಸಖಿ, ಮಾದರಿ ಮತ್ತು ಭೀತಿ ಪೀಡಿತ ಪ್ರದೇಶದ ಮತಟ್ಟೆಗಳ ಕುರಿತು ಮಾಹಿತಿ ಪಡೆದರು. ಅಂಥ ಮತಗಟ್ಟೆಗಳಲ್ಲಿ ಅವಶ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಾನಗಲ್ಲ ತಾಲೂಕ ಸಹಾಯಕ ಚುನಾವಣಾಧಿಕಾರಿ ಮಂಜುನಾಥ ಬಣಕಾರ, ತಹಶೀಲ್ದಾರ ಎಂ.ಗಂಗಪ್ಪ, ಹಿರೇಕೆರೂರ ತಾಲೂಕ ಸಹಾಯಕ ಚುನಾವಣಾಧಿಕಾರಿ ವಿನೋದಕುಮಾರ ಹೆಗ್ಗಳಿಕೆ, ತಹಶೀಲ್ದಾರ ಆರ್.ಎಚ್.ಭಾಗವಾನ್, ಜಗದೀಶ ಬಳಿಗಾರ, ಎರಡೂ ತಾಲೂಕುಗಳ ಎಲ್ಲಾ ಸೆಕ್ಟರ್ ಅಧಿಕಾರಿಗಳು, ಅಬ್ಕಾರಿ ನಿರೀಕ್ಷಕರು, ಆರಕ್ಷಕ ನಿರೀಕ್ಷಕರು, ಎಫ್.ಎಸ್.ಟಿ., ಎಸ್.ಎಸ್.ಟಿ., ವಿ.ಎಸ್.ಟಿ. ತಂಡದ ನಾಯಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
