ನಾಗರಿಕರು ಹಸಿಕಸ ಒಣಕಸ ವಿಂಗಡಿಸಿ ನೀಡಿ

ಪಾವಗಡ

     ಪಾವಗಡ ಪಟ್ಟಣದ 23 ವಾರ್ಡುಗಳಲ್ಲಿ ಕಸ ವಿಂಗಡಣೆಗೆ ಮನೆ ಮನೆಗೆ ತೆರಳಿ ಅರಿವನ್ನು ಮೂಡಿಸಲಾಗುತ್ತಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಜಿ. ನವೀನ್ ಚಂದ್ರ ತಿಳಿಸಿದರು.

      ಅವರು ಬುಧವಾರ ಪಟ್ಟಣದ 2 ನೇ ವಾರ್ಡ್ ಮಾರಮ್ಮ ದೇವಸ್ಥಾನದ ಬೀದಿಯಲ್ಲಿ ಪುರಸಭಾ ಕಾರ್ಯಾಲಯ, ರೋಟರಿ ಸಂಸ್ಥೆ, ಹೆಲ್ಪ್ ಸೊಸೈಟಿ, ನಮ್ಮಹಕ್ಕು ಸಂಘಟನೆ, ಬ್ರೈಟ್ ಫ್ಯೂಚರ್, ಚಿನ್ಮಯ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮನೆಮನೆಗಳಲ್ಲಿ ಕಸ ವಿಂಗಡಣೆಯ ಅರಿವನ್ನು ಮೂಡಿಸುವ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

      ರಾಷ್ಟ್ರಿಯ ಹಸಿರು ನ್ಯಾಯಮಂಡಳಿ ನಿರ್ದೇಶನದಂತೆ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಮೂಲದಲ್ಲಿಯೆ ಹಸಿಕಸ, ಒಣಕಸ ಮತ್ತು ಹಾನಿಕಾರಕ ಕಸವನ್ನು ಮನೆಯಲ್ಲಿಯೆ ವಿಂಗಡಣೆ ಮಾಡಿ ನಮಗೆ ನೀಡಿ. ನಮ್ಮ ಆಟೋ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಕಸವನ್ನು ಕೊಂಡೊಯ್ಯಲಾಗುವುದು.

       ಹಸಿಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿಸುತ್ತೇವೆ. ಮರುಬಳಕೆಗೆ ಬರುವಂತಹ ಪ್ಲಾಸ್ಟಿಕ್, ರಟ್ಟು, ಪೇಪರ್ ವಸ್ತುಗಳನ್ನು ಪೌರಕಾರ್ಮಿಕರು ಗುಜರಿಗೆ ಮಾರಾಟ ಮಾಡಿ, ಬಂದ ಹಣವನ್ನು ಅವರೆ ಉಪಯೋಗಿಸಿಕೊಂಡು ಆರ್ಥಿಕವಾಗಿ ಮುಂದುವರೆಯಲು ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನದ ನಂತರ ಅಂಗಡಿ, ಹೋಟೆಲ್, ಬೇಕರಿ, ಚಿಕನ್ ಸೆಂಟರ್ ಗಳಿಂದ ಕಮರ್ಷಿಯಲ್ ಕಸ ಸಂಗ್ರಹಿಸಲಾಗುವುದು ಎಂದರು.

       ರೋಟರಿ ಅಧ್ಯಕ್ಷ ಮಹಮದ್ ಇಮ್ರಾನ್, ಕಸವನ್ನು ಬೀದಿಗೆ ಎಸೆಯದೆ, ಪುರಸಭೆಯ ಈ ಕಸ ಸಂಗ್ರಹಣಾ ಕಾರ್ಯಕ್ಕೆ ಮನೆಗಳು, ಅಂಗಡಿ, ಬೇಕರಿ, ಹೋಟೆಲ್ ಮಾಲೀಕರು ಸಹಕರಿಸಿ ಕಸಮುಕ್ತ ಪಾವಗಡವನ್ನಾಗಿಸಬೇಕು ಎಂದರು.ರೋಟರಿ ಮಾಜಿ ಅಧ್ಯಕ್ಷ ವಿಶ್ವನಾಥ್, ಪ್ರಭಾಕರ್ ಗೊರ್ತಿನಾಗರಾಜ್, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಆರೋಗ್ಯ ನಿರೀಕ್ಷಕ ಷಂಷದ್, ಪುರಸಭಾ ಸದಸ್ಯೆ ಗೀತಾ ಹನುಮಂತ ರಾಯಪ್ಪ ಹಾಜರಿದ್ದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link