ಗುಬ್ಬಿ:
ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಕುಳಿತುಕೊಳ್ಳಲು ಚೇರ್ ಮತ್ತು ನೆರಳಿಗೆ ಶಾಮಿಯಾನವನ್ನು ಪಟ್ಟಣದ ಹೊಟೇಲ್ ಮಾಲೀಕರ ಸಂಘದ ವತಿಯಿಂದ ಆಸ್ಪತ್ರೆಗೆ ನೀಡಿದರು.
ತಪಾಸಣೆಗೆ ತೆರಳುವ ರೋಗಿಗಳು ಸಾಲಾಗಿ ಹೋಗಲು ಶಾಮಿಯಾನದ ಆವರಣದಲ್ಲಿ ಬ್ಯಾರಿಕೇಡ್ ವ್ಯವಸ್ಥೆಯನ್ನು ಗುಬ್ಬಿ ಹಿತರಕ್ಷಣಾ ಸಮಿತಿ ವತಿಯಿಂದ ಮಾಡಲಾಯಿತು. ಬಿಸಲಿನ ತಾಪ ಹೆಚ್ಚಾಗುತ್ತಿದ್ದು ರೋಗಿಗಳು ಬಿಸಿಲಿನಲ್ಲಿಯೆ ಸರತಿಯ ಸಾಲಿನಲ್ಲಿ ನಿಂತು ತಪಾಸಣೆ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಆದ್ದರಿಂದ ಇದನ್ನು ಮನಗಂಡ ಹೊಟೇಲ್ ಮಾಲೀಕರ ಸಂಘದವರು ಚೇರ್ ಮತ್ತು ಶಾಮಿಯಾನವನ್ನು ಆಸ್ಪತ್ರೆಗೆ ನೀಡಿರುವುದಾಗಿ ಸಂಘದ ಅಧ್ಯಕ್ಷ ಕಾಂತರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಹೊಟೇಲ್ ಮಾಲೀಕರ ಸಂಘದ ಸದಸ್ಯರಾದ ಮಂಜುನಾಥ್, ವೀರಣ್ಣ, ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಹೆಚ್.ಡಿ.ಯಲ್ಲಪ್ಪ, ಕಾರ್ಯದರ್ಶಿ ಸಲೀಂಪಾಷಾ, ಸಿ.ಆರ್.ಶಂಕರ್‍ಕುಮಾರ್, ಕೆ.ಆರ್.ಅಶೋಕ್‍ಕುಮಾರ್, ಡಾ.ಬಿಂದುಮಾಧವ್, ಡಾ.ದಿವಾಕರ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
