ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಸಿಎಂ..!!

ಬೆಂಗಳೂರು :

     ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚಿಸುವುದಾಗಿ ಸದನದಲ್ಲಿ ತಿಳಿಸಿದ್ದಾರೆ.

     ನಾನೇನೂ ಶಾಶ್ವತವಾಗಿ ಅಧಿಕಾರದಲ್ಲಿರಬೇಕು ಎಂದು ಬಯಸಿಲ್ಲ.ಹೀಗಾಗಿ ಸ್ವಪ್ರೇರಣೆಯಿಂದ ವಿಶ್ವಾಸಮತ ಯಾಚಿಸಲು ಬಯಸಿದ್ದೇನೆ ಎಂದ ಸಿಎಂ ತಿಳಿಸಿದ್ದಾರೆ.

     “ಸದ್ಯ ನಡೆಯುತ್ತಿರುವ ವಿವಿಧ ಬೆಳವಣಿಗೆಗಳ ನಡುವೆ ವಿಶ್ವಾಸಮತ ಯಾಚನೆ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ ಮತ್ತು ವಿಶ್ವಾಸ ಮತ ಸಾಬೀತು ಮಾಡಲು ತಮಗೆ ಸಮಯ ಕೊಡಿ ಎಂದು ಸ್ಪೀಕರ್‌ ಅವರನ್ನು ಕೋರಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

     16 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮ್ಮ ರಾಜೀನಾಮೆಯನ್ನು ಸಲ್ಲಿಸುವುದರೊಂದಿಗೆ ಕರ್ನಾಟಕ ರಾಜ್ಯ ಸರ್ಕಾರ ಿಕ್ಕಟಿಗೆ ಸಿಲುಕಿದ್ದು ಶುಕ್ರವಾರ ವಿಧಾನಸಭೆ ಅಧಿವೇಶನ ಪ್ರಾರಂಭವಾದಾಗ ರಾಜೀನಾಮೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಬಾಕಿ ಇದೆ. ಈ ಪ್ರಕರಣವನ್ನು ಇಂದು ಅಪೆಕ್ಸ್ ನ್ಯಾಯಾಲಯ ವಿಚಾರಣೆ ನಡೆಸಿ ಮಂಗಳವಾರಕ್ಕೆ ಮುಂದೂಡಿದೆ ೆಂದು ಹೇಳಿದಾಗ ಮುಖ್ಯಮಂತ್ರಿಗಳು ತಾನು ವಿಶ್ವಾಸಮತ ಯಾಚಿಸುವುದಾಗಿ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap