ತುಮಕೂರು ಜಿಲ್ಲೆಯಲ್ಲಿನ ಸಹಕಾರ ಚಳುವಳಿಯ ಪಕ್ಷಿ ನೋಟ..!

ತುಮಕೂರು
        ಜಿಲ್ಲೆಯು 10 ಕಂದಾಯ ತಾಲ್ಲೂಕುಗಳನ್ನು ಹೊಂದಿರುತ್ತದೆ. ಜಿಲ್ಲೆಯ ಜನಸಂಖ್ಯೆ ಸುಮಾರು 2678980 ಇರುತ್ತದೆ. ಜಿಲ್ಲೆಯಲ್ಲಿ 3 ಕಂದಾಯ ಉಪ ವಿಭಾಗಗಳು ಇದ್ದು, ಸಹಕಾರ ಇಲಾಖೆಯ ಆಡಳಿತವು ತುಮಕೂರು, ತಿಪಟೂರು, ಮಧುಗಿರಿ ಉಪ ವಿಭಾಗಗಳನ್ನು ಒಳಗೊಂಡು ಉಪ ವಿಭಾಗ ಮಟ್ಟದಲ್ಲಿ ಸಹಾಯಕ ನಿಬಂಧಕರುಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಒಬ್ಬರು ಉಪ ನಿಬಂಧಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಹಕಾರಿ ಚಳುವಳಿಯ ಹಿನ್ನೆಲೆ:
       ಜಿಲ್ಲೆಯಲ್ಲಿ ಸಹಕಾರ ಚಳುವಳಿ ಸಹಕಾರ ಕಾಯಿದೆ 1904 ಜಾರಿಗೆ ಬಂದಾಗಿನಿಂದ ಪ್ರಾರಂಭವಾಗಿರುತ್ತದೆ. ಶಿರಾ ಪಟ್ಟಣದಲ್ಲಿ 1906 ರಲ್ಲಿ ಪ್ರಥಮ ಕೃಷಿಯೇತರ ಪತ್ತಿನ ಸಹಕಾರ ಸಂಘ ಸ್ಥಾಪನೆಗೊಂಡು ತದನಂತರ ಶಿರಾ ಟೌನ್ ಕೋ-ಆಪರೇಟೀವ್ ಆಗಿ ಪರಿವರ್ತನೆಗೊಂಡು ಅತ್ಯಂತ ಹಿರಿಯ ಸಹಕಾರ ಸಂಘವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುತ್ತದೆ.
ತುಮಕೂರು ಜಿಲ್ಲೆಯಲ್ಲಿ ವಿವಿಧ ಸಹಕಾರ ಸಂಘಗಳ ವಿವರ
      ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಜಿಲ್ಲಾ ಸಹಕಾರ ಯೂನಿಯನ್, ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟೀವ್ ಲಿ. ಎಂಬ ಬಹುರಾಜ್ಯ ಮಟ್ಟದ ಒಂದು ಸಹಕಾರಿ, ಜಿಲ್ಲೆಯಲ್ಲಿ ಒಟ್ಟು 12 ಪಟ್ಟಣ ಸಹಕಾರ ಬ್ಯಾಂಕುಗಳು, 171 ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹತ್ತು ತಾಲ್ಲೂಕುಗಳಲ್ಲಿ ತಲಾ ಒಂದರಂತೆ ಪಿಕಾರ್ಡ್ ಬ್ಯಾಂಕ್ ಮತ್ತು ಟಿಎಪಿಸಿಎಂಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಜಿಲ್ಲೆಯಲ್ಲಿ 234 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಜಿಲ್ಲೆಯಲ್ಲಿ ಒಟ್ಟಾರೆ 2195 ವಿವಿಧ ವರ್ಗದ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಈ ಪೈಕಿ ಒಟ್ಟು 1937 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿರುತ್ತವೆ.
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಿನ್ನೆಲೆ ಮತ್ತು ಸಾಧನೆಗಳು
       ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಣಕಾಸು ಪೂರೈಸಲು 1955 ರಲ್ಲಿ ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಎಂ.ಎ.ಎಸ್.ರಾಜನ್ ಅವರ ಅಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿರುತ್ತದೆ. ಆಗಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಉಪಾಧ್ಯಕ್ಷರಾಗಿ ದಿನಾಂಕ: 21.9.1955 ರಿಂದ 1.9.1959ರವರೆಗೆ ಕಾರ್ಯನಿರ್ವಹಿಸಿ ದಿನಾಂಕ: 1.9.1959 ರ ನಂತರ ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯು ಅಧಿಕಾರ ಸ್ವೀಕರಿಸಿರುತ್ತದೆ.ಬ್ಯಾಂಕಿನ ಪ್ರಥಮ ಚುನಾಯಿತ ಅಧ್ಯಕ್ಷರಾಗಿ ಮಾಜಿ ಶಾಸಕ ಶಿರಾ ತಾಲ್ಲೂಕಿನ ಬರಗೂರಿನ ದಿವಂಗತ ಬಿ.ಎನ್.ರಾಮೇಗೌಡರವರು ಸೇವೆ ಸಲ್ಲಿಸಿರುತ್ತಾರೆ.
      ತುಮಕೂರು ಜಿಲ್ಲೆಯಲ್ಲಿ ಮುಖ್ಯವಾಗಿ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಮನ್ನಾ ನೀಡುವ ಬ್ಯಾಂಕ್ ಆಗಿ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇಂದು 64 ವರ್ಷಗಳ ಸ್ಮರಣೀಯ ಸೇವೆಗಳನ್ನು ಪೂರೈಸಿರುತ್ತದೆ.ಸಹಕಾರಿ ಕ್ಷೇತ್ರದ ನೇತಾರರಾಗಿರುವ ಸಹಕಾರಿ ರತ್ನ ಪುರಸ್ಕøತರಾದ ಹಾಗೂ ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಮತ್ತು ಮಧುಗಿರಿ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣನವರ ನೇತೃತ್ವದಲ್ಲಿ ದೃಢ ಮತ್ತು ಧೀರ ಹೆಜ್ಜೆಗಳ ಸಾಧನೆಗಳಿಂದ ಮುನ್ನಡೆಯುತ್ತಿದೆ.
      ರಾಷ್ಟ್ರದಲ್ಲಿಯೇ ಪ್ರಪ್ರಥಮವೆನಿಸಿದ ಮೃತ ರೈತ ಸದಸ್ಯರ ಕೃಷಿ ಸಾಲ ಮನ್ನಾ ಯೋಜನೆ ಶೀರ್ಷಿಕೆಯೊಂದಿಗೆ ಪ್ರತಿ ಮೃತ ಸದಸ್ಯರಿಗೆ ರೂ.1.00 ಲಕ್ಷದ ಮಿತಿಗೆ ಒಳಪಟ್ಟು ಸಾಲ ತೀರುವಳಿ ಪ್ರಮಾಣ ಪತ್ರ ನೀಡುವ ಮೂಲಕ ದಾಖಲೆಯನ್ನು ನಿರ್ಮಿಸಿದೆ. ಸದರಿ ಯೋಜನೆಯಡಿಯಲ್ಲಿ 5317 ಮೃತ ರೈತರಿಗೆ ರೂ.15.50 ಕೋಟಿ ಸಾಲ ಮನ್ನಾ ಮಾಡಲಾಗಿದೆ.
      ಕರ್ನಾಟಕ ರಾಜ್ಯ ಸರ್ಕಾರದಿಂದ ಅಲ್ಪಾವಧಿ ಕೃಷಿ ಸಾಲ ರೂ.50000/ಗಳವರೆಗಿನ ಸಾಲವನ್ನು ಮನ್ನಾ ಯೋಜನೆಯಲ್ಲಿ ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 109888 ರೈತ ಸದಸ್ಯರುಗಳು ರೂ.33170.32 ಲಕ್ಷಗಳ ಸಾಲಮನ್ನಾ ಸೌಲಭ್ಯ ಪಡೆದಿರುತ್ತಾರೆ.
     ತದನಂತರ ರಾಜ್ಯ ಸರ್ಕಾರವು ಅಲ್ಪಾವಧಿ ಕೃಷಿ ಸಾಲ ಒಂದು ಕುಟುಂಬಕ್ಕೆ ರೂ.100000ಗಳ ಮಿತಿಗೆ ಒಳಪಟ್ಟು ಜಾರಿಗೊಳಿಸಿದ ಸಾಲಮನ್ನಾ ಯೋಜನೆಯನ್ವಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 121735 ರೈತ ಸದಸ್ಯರುಗಳು ರೂ.44112.29 ಲಕ್ಷಗಳ ಸಾಲ ಮನ್ನಾ ಸೌಲಭ್ಯ ಪಡೆದಿರುತ್ತಾರೆ.
     2011-12 ಮತ್ತು 2016-17ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಬರಗಾಲ ಉಂಟಾಗಿದ್ದ ಹಿನ್ನೆಲೆಯಲ್ಲಿ ತುಮಕೂರು ಡಿಸಿಸಿ ಬ್ಯಾಂಕಿನ ವತಿಯಿಂದ ಗೋಶಾಲೆಗಳಿಗೆ ರಾಸುಗಳನ್ನು ಕರೆತಂದಿದ್ದ ರೈತರುಗಳಿಗೆ ಉಚಿತ ಬಿಸಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಇಂತಹ ಅಪರೂಪದ ಜನೋಪಯೋಗಿ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮವು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮವಾಗಿದ್ದು, ಜನ ಮನ್ನಣೆಗಳಿಸಿದೆ.
      ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ವ್ಯಾಪಾರಾಭಿವೃದ್ಧಿ ಯೋಜನೆಗೆ ಒಳಪಟ್ಟಿದ್ದು, ಜಿಲ್ಲಾ ಬ್ಯಾಂಕಿನಿಂದ ರೈತಾಪಿ ಜನ ವಾಸಿಸುವ ಸ್ಥಳದಲ್ಲಿಯೇ ಆರ್ಥಿಕ ಸೌಲಭ್ಯವನ್ನು ಒದಗಿಸುವಂತೆ ಮಾಡಲು ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಆರ್ಥಿಕ ನೆರವನ್ನು ನೀಡಿ ರೈತ ಸಮುದಾಯಗಳಿಗೆ ಸಹಕಾರಿಯಾಗಿರುತ್ತದೆ.
     ತುಮಕೂರು ಡಿಸಿಸಿ ಬ್ಯಾಂಕ್‍ನಲ್ಲಿ ರಾಜ್ಯ ಸರ್ಕಾರದ ಮತ್ತೊಂದು ಜನಪರ ಯೋಜನೆಯಾದ ಕಾಯಕ ಯೋಜನೆಯಡಿಯಲ್ಲಿ 5 ಗುಂಪಿಗೆ ರೂ.25.00 ಲಕ್ಷ ಮೊತ್ತದ ಸಾಲವನ್ನು ನೀಡಲಾಗಿರುತ್ತದೆ. ಸದರಿ ರೂ. 5.00 ಲಕ್ಷವರೆಗಿನ ಸಾಲಕ್ಕೆ ಶೂನ್ಯ ಬಡ್ಡಿ ಮತ್ತು ರೂ. 5 ರಿಂದ 10 ಲಕ್ಷಗಳವರೆಗಿನ ಸಾಲಕ್ಕೆ ಶೇ.4 ಬಡ್ಡಿ ಅನ್ವಯವಾಗುತ್ತದೆ.
      ತುಮಕೂರು ಡಿಸಿಸಿ ಬ್ಯಾಂಕ್ 31.03.2019ಕ್ಕೆ ಒಟ್ಟು 2316 ಎಸ್.ಹೆಚ್.ಜಿ. ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ರೂ.7055.29 ಕೋಟಿ ಮೊತ್ತದ ಸಾಲವನ್ನು ನೀಡಲಾಗಿರುತ್ತದೆ.ತುಮಕೂರು ಡಿಸಿಸಿ ಬ್ಯಾಂಕ್‍ನಲ್ಲಿ ದಿ: 31.10.2019 ರ ಅಂತ್ಯಕ್ಕೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ 47380 ಪ್ರಕರಣಗಳಲ್ಲಿ ರೂ.190.39 ಕೋಟಿ ಹಾಗೂ ಶೇ.3ರ ಬಡ್ಡಿ ದರದಲ್ಲಿ ಮಧ್ಯವಾವಧಿ ಸಾಲ 1051 ಪ್ರಕರಣಗಳಲ್ಲಿ ರೂ.55.30 ಕೋಟಿ ನೀಡಲಾಗಿರುತ್ತದೆ.
      ಜಿಲ್ಲೆಯಲ್ಲಿ ರೈತರ ಸಂಖ್ಯೆ 4,14,428 ಇದ್ದು, ಸಹಕಾರ ಬ್ಯಾಂಕ್ / ಸಂಘಗಳಿಂದ 1,31,000 ಜನ ರೈತ ಸದಸ್ಯರು ಕೃಷಿ ಸಾಲ ಪಡೆದಿದ್ದು, ಉಳಿದ 2,83,428 ಜನ ರೈತ ಸದಸ್ಯರು ವಾಣಿಜ್ಯ ಮತ್ತು ಇತರೆ ಮೂಲಗಳಿಂದ ಸಾಲ ಪಡೆದಿರುತ್ತಾರೆ.
     RCEP- (Regional Comprehensive Economic Partnership) ಅನ್ನು ವಿರೋಧಿಸಿದ ಬಗ್ಗೆ.ಇತ್ತೀಚೆಗೆ ಕೇಂದ್ರ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮತ್ತು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಂತೆ ಜಿಲ್ಲೆಯ ಸಹಕಾರಿಗಳು ಆಗ್ರಹಿಸಿರುತ್ತಾರೆ.
    ಸದರಿ ಒಪ್ಪಂದದಿಂದ ಸಹಕಾರಿ ಹೈನುಗಾರಿಕೆ ಉತ್ಪನ್ನಗಳು (ನಂದಿನಿ ಹಾಲಿನ ಉತ್ಪನ್ನಗಳು) ಹಾಗೂ ಕೃಷಿ ಉತ್ಪನ್ನಗಳು (ಮುಖ್ಯವಾಗಿ ಅಡಿಕೆ ಬೆಳೆ) ಬೆಲೆ ಕುಸಿಯುವ ಸಂಭವ ಇರುವುದರಿಂದ ರೈತ ಸಹಕಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಭೀತಿಯಿಂದ ಸದರಿ ಒಪ್ಪಂದಕ್ಕೆ ಸಹಿ ಹಾಕದಂತೆ ಪ್ರತಿಭಟಿಸಿರುತ್ತಾರೆ.
     ತುಮಕೂರು ಜಿಲ್ಲೆಯಲ್ಲಿ ಸುಮಾರು 4,14,428 ರೈತರಿದ್ದು, ಈ ಪೈಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ/ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖಾಂತರ 1,31,000 ರೈತರು ಕೃಷಿ ಸಾಲ ಪಡೆದಿರುತ್ತಾರೆ. ಉಳಿದ ರೈತರಲ್ಲಿ ಜಿಲ್ಲೆಯ ವಾಣಿಜ್ಯ ಬ್ಯಾಂಕುಗಳಿಂದ 2,09,604 ರೈತರು ಕೃಷಿ ಸಾಲ ಪಡೆದಿರುತ್ತಾರೆ. ಈಲ್ಲೆಯಲ್ಲಿ ಇದುವರೆಗೂ ಕೃಷಿ ಸಾಲ ಪಡೆಯದೇ ಇರುವ 73,824 ರೈತರ ಪೈಕಿ ಆರ್‍ಟಿಸಿ (ಪಹಣಿ) ಹೊಂದಿರುವ ಎಲ್ಲಾ ಅರ್ಹ ರೈತರಿಗೆ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಕೃಷಿ ಸಾಲ ನೀಡುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡು ಕಾರ್ಯಗತಗೊಳಿಸಲು ಶ್ರಮಿಸುತ್ತಿದೆ.
ಪ್ರಕೃತಿ ವಿಪತ್ತು ನಿಧಿಗೆ ಸಹಾಯ ಹಸ್ತ
     ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ 2019-20ನೇ ಸಾಲಿನಲ್ಲಿ ಉತ್ತರ ಕರ್ನಾಟಕದ ನೆರೆಯ ಸಂತ್ರಸ್ಥರಿಗೆ ಬ್ಯಾಂಕಿನಿಂದ ಮುಖ್ಯಮಂತ್ರಿಗಳ ಪ್ರಕೃತಿ ವಿಪತ್ತು ಪರಿಹಾರ ನಿಧಿಗೆ ರೂ.25.00 ಲಕ್ಷಗಳನ್ನು ಬ್ಯಾಂಕಿನ ವತಿಯಿಂದ ನೀಡಲಾಗಿದೆ.ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಲ್ಲಿ ದಿನಾಂಕ: 31.03.2019ರ ಅಂತ್ಯಕ್ಕೆ ಒಟ್ಟು ರೂ.8417.10 ಲಕ್ಷ ಷೇರು ಬಂಡವಾಳ ಹೊಂದಿದ್ದು, ರೂ.97430.00 ಲಕ್ಷ ಠೇವಣಿಯನ್ನು ಹೊಂದಿ, ಇದರ ದುಡಿಯುವ ಬಂಡವಾಳ ರೂ.143945.00 ಲಕ್ಷಗಳಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap