ಕುರುಕ್ಷೇತ್ರ ಯುದ್ಧದ ಫಲಿತಾಂಶ ಮತ್ತು ರಷ್ಯಾ – ಉಕ್ರೇನ್ ಯುದ್ಧದ ಪರಿಣಾಮ

ರಷ್ಯಾ – ಉಕ್ರೇನ್:

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ನಡೆದು ಎಲ್ಲವೂ ಮುಕ್ತಾಯವಾಗಿ ಸೋಲು-ಗೆಲುವು ನಿರ್ಧಾರವಾದ ನಂತರ ವಿಜಯ ಸಾಧಿಸಿದ ಪಾಂಡವರು ಆ ಗೆದ್ದ ಸಂಭ್ರಮ ಅನುಭವಿಸುವುದಕ್ಕೆ ಆಗುವುದಿಲ್ಲ. ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡು ಅನುಭವಿಸುವುದಾದರೂ ಏನನ್ನು?

ಬಹುಶಃ ರಷ್ಯಾ-ಉಕ್ರೇನ್ ಸಮರದ ಸಮಯದಲ್ಲಿ ಇದು ನೆನಪಾಗುತ್ತಿದೆ. ಈಗಿನ ತೀವ್ರ ದಾಳಿಯನ್ನು ನೋಡುತ್ತಿದ್ದರೆ ಅದೇ ರೀತಿಯ ಫಲಿತಾಂಶ ಬರಬಹುದು. ಯುದ್ಧ ಮತ್ತು ಯುದ್ದದ ಅನಾಹುತ – ಸಾವುಗಳು ಸಹ ಸಹಜವಾಗುತ್ತಾ ಸಾಗುತ್ತಿವೆ.

ನವೀನ್ ಎಂಬ ನಮ್ಮ ಕನ್ನಡದ ಹುಡುಗ ಈ ಯುದ್ದದಿಂದ ಮಡಿದಾಗ ಇಡೀ ರಾಜ್ಯ ಒಂದು ರೀತಿಯ ಶೋಕ ವ್ಯಕ್ತಪಡಿಸಿತು. ಆದರೆ ಉಕ್ರೇನಿನಲ್ಲಿ ಅಪಾರ ಸಂಖ್ಯೆಯ ಜನರು ಮತ್ತು ಎರಡೂ ಕಡೆಯ ಸೈನಿಕರು ಸಾಯುತ್ತಿರುವಾಗ ನಾವು ಅಸಹಾಯಕರಾಗಿದ್ದೇವೆ. ವಿಶ್ವದಲ್ಲಿ ಸುಮಾರು 750 ಕೋಟಿ ಜನರಿದ್ದೇವೆ. ಮಾನವ ಜನಾಂಗದ ಅಳಿವು ಉಳಿವಿನ ಸವಾಲು ಎದುರಾಗಿರುವಾಗ ಪ್ರತಿಕ್ರಿಯೆ ಮಾತ್ರ ತುಂಬಾ ನಿರಾಶಾದಾಯಕ.

ರಾಜ್ಯಾದ್ಯಂತ ಇಂದು `SSLC’ 2ನೇ ದಿನದ ಪರೀಕ್ಷೆ : ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ತೆರಳಿದ ವಿದ್ಯಾರ್ಥಿನಿಯರು!

ಪುಟಿನ್ ಎಂಬ ವ್ಯಕ್ತಿ ಮನಸ್ಸು ಮಾಡಿದರೆ ಈ ಯುದ್ಧ ನಿಲ್ಲುತ್ತದೆ. ಝಲೆನ್ಸ್ಕಿ ಎಂಬ ವ್ಯಕ್ತಿ ಮನಸ್ಸು ಮಾಡಿದರೆ ಯುದ್ಧ ನಿಲ್ಲುತ್ತದೆ. ಬೈಡನ್ ಎಂಬ ವ್ಯಕ್ತಿ ಮನಸ್ಸು ಮಾಡಿದರೆ ಯುದ್ಧ ನಿಲ್ಲುತ್ತದೆ. ಆದರೆ ಇವರು ಯುದ್ಧ ನಿಲ್ಲಿಸುವ ಮನಸ್ಸು ಮಾಡುತ್ತಿಲ್ಲ. ವಿಶ್ವದ ವಿನಾಶ ಬಯಸುವ ಕಿರಾತಕರು ಇವರು.

ಒಂದು ತಿಂಗಳಿಗಿಂತ ಹೆಚ್ಚು ಬಂದೂಕು ಬಾಂಬು ಮಿಸೈಲುಗಳ ನಡುವೆ ಆ ಮಾನವ ಜೀವಗಳು ಹೇಗೆ ಒದ್ದಾಡುತ್ತಿವೆಯೊ? ವಿಶ್ವಸಂಸ್ಥೆಯ ಅಧ್ಯಕ್ಷ ಒಬ್ಬ ಹಿರಿಯ ರಾಜಕಾರಣಿ. ಅತ್ಯಂತ ಬಲಿಷ್ಠ ರಕ್ಷಣಾ ವ್ಯವಸ್ಥೆಯಲ್ಲಿ ಇರುತ್ತಾನೆ. ಸಾಕಷ್ಟು ಸಂಬಳವೂ ಸಿಗಬಹುದು. ಆತ ಇಂತಹ ಸಂದರ್ಭದಲ್ಲಿ ಕನಿಷ್ಠ ತುಂಬಾ ಚಟುವಟಿಕೆಯಿಂದ ಇದ್ದು, ರಷ್ಯಾ ಉಕ್ರೇನ್ ಅಮೆರಿಕ ನ್ಯಾಟೋ ರಾಷ್ಟ್ರಗಳ ಮಧ್ಯೆ ಓಡಾಡುತ್ತಾ ಏನನ್ನಾದರೂ ಮಾಡುವ ಪ್ರಯತ್ನ ಮಾಡಬೇಕಿತ್ತು.

ರಾಜ್ಯದಲ್ಲಿ ಏಪ್ರಿಲ್ 1 ರಿಂದ 12-14 ವರ್ಷದ ಮಕ್ಕಳಿಗೆ ಶಾಲೆಯಲ್ಲೇ ಲಸಿಕೆ

ಮಾಡುತ್ತಿದ್ದಾರೇನೋ ನಮಗೆ ಮಾಧ್ಯಮಗಳಲ್ಲಿ ಆ ರೀತಿಯ ಸುದ್ದಿ ಸಿಗುತ್ತಿಲ್ಲ. ಅದೇ ರೀತಿ ವ್ಯಾಟಿಕನ್ ದೇಶದ ಪೆÇೀಪ್ ಸಹ ಈ ನಿಟ್ಟಿನಲ್ಲಿ ಕೇವಲ ಹೇಳಿಕೆ ಕೊಡುವುದು ಬಿಟ್ಟು ನೇರವಾಗಿ ಎಲ್ಲಾ ದೇಶಗಳ ಮಧ್ಯೆ ಒಂದು ಸಂಪರ್ಕ ಸಾಧಿಸಿ ಕನಿಷ್ಠ ಕದನ ವಿರಾಮ ಘೋಷಿಸುವ ಒತ್ತಾಡವನ್ನಾದರೂ ಮಾಡಬಹುದಿತ್ತೇ ಎಂದು ಮನಸ್ಸು ಹೇಳುತ್ತಿದೆ.

ನಾವೆಲ್ಲ ಸಾಮಾನ್ಯ ಜನರು. ನಮಗೆ ಆ ಶಕ್ತಿ ಇರುವುದಿಲ್ಲ. ಆದರೆ ಅಷ್ಟೊಂದು ಪ್ರಭಾವಿ ವ್ಯಕ್ತಿಗಳು ಶಾಂತಿ ಸಮಯದಲ್ಲಿ ಈ ಭೂಮಿಯ ಫಲವತ್ತತೆಯನ್ನು, ಮಾನವ ಸಂಪನ್ಮೂಲಗಳನ್ನು ತಮ್ಮ ಸುಖಕ್ಕೆ ಬಳಸಿಕೊಳ್ಳುವ ಈ ಪ್ರಭಾವಿಗಳು ಬಿಕ್ಕಟ್ಟಿನ ಸಂದರ್ಭದಲ್ಲಿ ಜೀವದ ಹಂಗು ತೊರೆದು ಒಂದಷ್ಟು ದೊಡ್ಡ ಮಟ್ಟದ ಪ್ರಯತ್ನ ಪಡಬಹುದಲ್ಲವೆ? ಅಂತಾರಾಷ್ಟ್ರೀಯ ಸಂಬಂಧಗಳು ತುಂಬಾ ಜಟಿಲವಾಗಿರುತ್ತವೆ ಎಂಬುದು ನಿಜ.

ಅದು ಸರಳವಲ್ಲ. ಆದರೆ ಪುಟಿನ್ ಬೈಡನ್ ಝಲೆನ್ಸ್ಕಿ ಮುಂತಾದವರ ಮಾತುಗಳನ್ನು ಕೇಳುತ್ತಿದ್ದರೆ ಅವರು ಸಹ ಮನುಷ್ಯ ಭಾವನೆಗಳು, ಅರಿಷಡ್ವರ್ಗಗಳ ಬಂಧಿಗಳು ಎನಿಸುತ್ತದೆ. ಅಂತಹ ಮನೋಭಾವದ ವ್ಯಕ್ತಿಗಳನ್ನು ಒಂದು ಒಪ್ಪಂದದೊಳಗೆ ಸಿಲುಕಿಸುವ ಸಾಧ್ಯತೆ ಇದೆ. ಆ ಕೆಲಸವನ್ನು ವಿಶ್ವಸಂಸ್ಥೆಯ ಅಧ್ಯಕ್ಷ ಅಥವಾ ಪೋಪ್ ಮಾಡಬಹುದು.

 ರಾಜ್ಯದಲ್ಲಿ ‘ಡಿಸಿಸಿ ಬ್ಯಾಂಕ್’ಗಳು ಬಂದ್.? DCC Bank

ಯಾವುದೇ ಆರೋಗ್ಯವಂತ ಮನುಷ್ಯನಿಗೆ ಧೈರ್ಯ, ಮಹತ್ವಾಕಾಂಕ್ಷೆ, ಹಠ, ದ್ವೇಷ, ಅಹಂಕಾರ, ಭಂಡತನ ಮುಂತಾದ ಗುಣಗಳ ಜೊತೆಗೆ ಭಯ, ಆತಂಕ, ಒಂದಷ್ಟು ಕರುಣೆ, ಪ್ರೀತಿ ಇತ್ಯಾದಿಗಳು ಸಹ ಇರುತ್ತವೆ. ಕೆಲವು ಸಂದರ್ಭಗಳಲ್ಲಿ ಕೆಲವು ಗುಣಗಳು ಮೇಲುಗೈ ಪಡೆಯುತ್ತವೆ.

ಇದೀಗ ಯುದ್ಧ ಆರಂಭವಾಗಿ ಸುಮಾರು 40 ದಿನಗಳ ಸಮೀಪ ಬರುತ್ತಿದೆ. ಎರಡೂ ಕಡೆಯ ಮನಸ್ಸುಗಳಲ್ಲಿ ಯುದ್ಧ ನಿಂತರೆ ಉತ್ತಮ ಎಂಬ ಅಭಿಪ್ರಾಯ ಮೂಡಿರಬಹುದು. ಆದರೆ ಅದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ಒಬ್ಬ ಪ್ರಾಮಾಣಿP,À ಬುದ್ದಿವಂತ ವ್ಯಕ್ತಿ ಒಂದು ಹೊಂದಾಣಿಕೆ ಮಾಡಿಸುವ ಸಾಧ್ಯತೆ ಇದೆ. ಆ ಕೆಲಸವನ್ನು ಯಾರು ಮಾಡುತ್ತಾರೆ ಎಂಬುದೇ ಒಂದು ಮುಖ್ಯ ಪ್ರಶ್ನೆ.

ಏಕೋ ಏನೋ ಆಧುನಿಕ ಕಾಲದಲ್ಲಿ ಮನುಷ್ಯ ಹೆಚ್ಚು ಸ್ವಾರ್ಥಯಾಗಿದ್ದಾನೆ. ಇನ್ನೊಬ್ಬನ ನೋವಿನಲ್ಲೂ, ಸಾವಿನಲ್ಲೂ ತನ್ನ ಲಾಭದ ಪಾಲನ್ನು ಬಯಸುತ್ತಿದ್ದಾನೆ. ಯುದ್ದದಿಂದ ತನಗೆ ಸಿಗುವ ಲಾಭದ ಪಾಲೆಷ್ಟು ಎಂದು ಅಮೇರಿಕಾ, ಚೀನಾ, ರಷ್ಯಾ ಮುಂತಾದ ದೇಶಗಳ ನಾಯಕರು ಯೋಚಿಸುತ್ತಿದ್ದಾರೆ.

 ಹಲಾಲ್ ಮಾಂಸ ನಿಷೇಧ ವಿವಾದ: ಸೋಷಿಯಲ್ ಮೀಡಿಯಾದಲ್ಲಿ ಪ್ರಚೋಜನಕಾರಿ ಪೋಸ್ಟ್, ಹೇಳಿಕೆ ಕೊಟ್ಟರೇ ಕ್ರಮ – ಗೃಹ ಸಚಿವರ ಖಡಕ್ ಎಚ್ಚರಿಕೆ

ಇದು ಪ್ರಕೃತಿಗೆ ಮನುಷ್ಯ ಮಾಡುತ್ತಿರುವ ದ್ರೋಹ. ಗಾಳಿ ನೀರು ಬೆಳಕು ಭೂಮಿ ಎಂದೂ ತನ್ನ ಲಾಭದ ಬಗ್ಗೆ ಯೋಚಿಸಿಲ್ಲ. ಆದರೆ ಮನುಷ್ಯ ಮಾತ್ರ ವಿನಾಶದಲ್ಲೂ ತನ್ನ ಲಾಭ ಬಯಸತೊಡಗಿದರೆ ಮೂರನೇ ಮಹಾಯುದ್ಧ ಮತ್ತು ಊಹಿಸಲಸಾಧ್ಯ ದುರಂತಗಳ ಭಯದಲ್ಲಿ ನಾವು ನೀವು. ಅದಕ್ಕಾಗಿಯೇ ಶಾಂತಿಗಾಗಿ ನಾವುಗಳು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುವ ಅವಶ್ಯಕತೆ ಇದೆ. ಇಲ್ಲದಿದ್ದರೆ ನಾವೇ ನಮ್ಮ ಕಷ್ಟಗಳಿಗೆ ನೇರ ಹೊಣೆಯಾಗುತ್ತೇವೆ.

ವಿವೇಕಾನಂದ ಹೆಚ್.ಕೆ.
98440 13068

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap