ಬಳ್ಳಾರಿ
ಜಿಲ್ಲಾ ಗೃಹರಕ್ಷಕದಳದ ಸಂಸ್ಥೆಯಲ್ಲಿ ಸುಮಾರು 25 ವರ್ಷಗಳಿಂದ ನಿಷ್ಕಾಮ ಸೇವೆ ಸಲ್ಲಿಸುತ್ತಾ ಉತ್ತಮ ಸಾಧನೆ ಮಾಡಿ ಮತ್ತು ವೃತ್ತಿಯಲ್ಲಿ ಕರ್ನಾಟಕ ವಿದ್ಯತ್‍ಚಕ್ತಿ ಸರಬರಾಜು ಕಂಪನಿಯಲ್ಲಿ ಸರ್ಕಾರಿ ನೌಕರಾಗಿ ಸೇವೆಸಲ್ಲಿಸುತ್ತಿರುವ ಜೆ.ಸುರೇಶ್ ಅವರಿಗೆ ಕರ್ನಾಟಕ ರಾಜ್ಯ ಗೃಹರಕ್ಷಕ ಮತ್ತು ಪೌರ ರಕ್ಷಣಾ ನಿರ್ದೇಶನಾಲಯದ ವತಿಯಿಂದ ನವದೆಹಲಿಯ ರಾಜ್ ಭವನ್‍ದಲ್ಲಿ ಇತ್ತಿಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರಾದ ರಾಜ್ ನಾಥ ಸಿಂಗ್ ಅವರು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪ್ರದಾನ ಮಾಡಿದ್ದಾರೆ.
ಶ್ರೀಯುತರಿಗೆ ಪ್ರಶಸ್ತಿ ಪ್ರದಾನ ಲಭಿಸಿರುವುದಕ್ಕೆ ಕರ್ನಾಟಕದ ಆರಕ್ಷಕ ಮಹಾ ನಿರ್ದೇಶಕರು ಹಾಗೂ ಗೃಹರಕ್ಷಕದಳದ ಮಹಾ ಸಮಾದೇಷ್ಟರಾದ ಎಂ.ಎನ್.ರೆಡ್ಡಿ ಅವರು ಹೃತ್ಪೂರ್ವಕವಾಗಿ ಅಭಿನಂದಿಸಿರುತ್ತಾರೆ ಹಾಗೂ ಬಳ್ಳಾರಿ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಎಂ.ಎ.ಷಕೀಬ್, ಬೋಧಕರಾದ, ಹೆಚ್.ತಿಪ್ಪೇಸ್ವಾಮಿ, ಕಛೇರಿ ಸಿಬ್ಬಂದಿಗಳಾದ ಬಿ.ಎನ್.ಗೋಪಿನಾಥ, ಹಾಗೂ ಬಳ್ಳಾರಿ ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳು ಹಾಗೂ ಸಮಸ್ತ ಗೃಹರಕ್ಷಕರು ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
