ಉತ್ತಮ ಬದುಕನ್ನು ಕಟ್ಟಿಕೊಳ್ಳಲು ರೌಡಿ ಪಟ್ಟಿಯಿಂದ ಹೊರ ಬನ್ನಿ : ಡಿವೈಎಸ್ಪಿ

ಚಳ್ಳಕೆರೆ

     ಸಮಾಜದಲ್ಲಿ ಅಶಾಂತಿ ಮೂಡಿಸುವ, ಶಾಂತಿ ಭಂಗತರುವ, ಸಮಾಜದಲ್ಲಿ ಭಯವನ್ನುಟ್ಟಿಸುವ ರೌಡಿಸಂ ಚಟುವಟಿಕೆಗಳಿಗೆ ವಿದಾಯ ಹೇಳಬೇಕಿದೆ. ರೌಡಿ ಪಟ್ಟವನ್ನು ಹೊತ್ತ ವ್ಯಕ್ತಿ ಸಮಾಜದಲ್ಲಿ ಎಲ್ಲಾ ರೀತಿಯ ಅವಮಾನಗಳಿಗೆ ಒಳಗಾಗುತ್ತಾನೆ. ಅವನು ಎಂದಿಗೂ ಬದುಕಿನಲ್ಲಿ ಗೌರವವಾಗಿ ಬದುಕಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರೂ ರೌಡಿ ಚಟುವಟಿಕೆಗಳಿಗೆ ವಿದಾಯ ಹೇಳಿ ಸಮಾಜದಲ್ಲಿ ಗೌರವ, ಘನತೆಯಿಂದ ಬಾಳಲು ನಿರ್ಧರಿಸುವಂತೆ ಉಪವಿಭಾಗದ ಡಿವೈಎಸ್ಪಿ ಎಸ್.ರೋಷನ್ ಜಮೀರ್ ರೌಡಿಗಳಿಗೆ ಕಿವಿ ಮಾತು ಹೇಳಿದರು.

    ಅವರು, ಶನಿವಾರ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಉಪವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿರುವ ಕಳೆದ ಕೆಲವು ವರ್ಷಗಳಿಂದ ರೌಡಿಸಂ ಚಟುವಟಿಕೆಗಳಲ್ಲಿ ನಿರತರಾದವನ್ನು ಠಾಣೆಗೆ ಕರೆಸಿ ಗೌರಿ ಗಣೇಶ ಹಬ್ಬ ಹಾಗೂ ಮೊಹರಂ ಆಚರಣೆ ಹಿನ್ನೆಲ್ಲೆಯಲ್ಲಿ ರೌಡಿಗಳಿಗೆ ತಮ್ಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಸೂಚನೆ ನೀಡಿದರು. ರಾಜ್ಯ ಸರ್ಕಾರ ನಿಮ್ಮ ನಡತೆಗಳನ್ನು ಪರಿಶೀಲನೆ ನಡೆಸಿ ನೀವು ಉತ್ತಮ ವ್ಯಕ್ತಿತ್ವ ಹೊಂದಿದಲ್ಲಿ ನಿಮ್ಮನ್ನು ರೌಡಿಗಳ ಪಟ್ಟಿಯಿಂದ ತೆಗೆದು ಹಾಕಲು ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡುತ್ತೇನೆ. ನೀವು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳ ಬೇಕೆಂಬುದು  ಪೊಲೀಸ್ ಇಲಾಖೆಯ ಸದುದ್ದೇಶವೆಂದರು.ವೃತ್ತ ನಿರೀಕ್ಷಕ ಈ.ಆನಂದ, ಪಿಎಸ್‍ಐಗಳಾದ ನೂರ್ ಅಹಮ್ಮದ್, ಎನ್.ಗುಡ್ಡಪ್ಪ, ಕೆ.ಸತೀಶ್‍ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link