ಬಳ್ಳಾರಿ
ರಾಜ್ಯ ಸರ್ಕಾರ ಮಳೆ ಅಭಾವದಿಂದ ಕೇವಲ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದರೆ ಸಾಲದೂ. ಸಂಕಷ್ಟದಲ್ಲಿರುವ ರೈತರಿಗೆ ಪ್ರತೀ ಎಕರೆಗೆ 20 ಸಾವಿರ ರೂ ಪರಿಹಾರ ನೀಡಬೇಕೆಂದು ರೈತಸಂಘ ಒತ್ತಾಯಿಸಿದೆ. ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಬಿ.ಗೋಣಿ ಬಸ್ಸಪ್ಪ, ಬರಗಾಲದಲ್ಲಿರುವ ರೈತರು ತಾವು ಬಿತ್ತನೆ ಮಾಡಿದ ಬೀಜವು ದೊರಯೆದೆ ಬೆಳೆಗೆ ಸಾವಿರಾರೂ ರೂ ವೆಚ್ಚಮಾಡಿ ಸಾಲಗಾರರಾಗಿದ್ದಾರೆ. ಅದಕ್ಕಾಗಿ ಬರ ಪರಿಹಾರ ತಕ್ಷಣ ನೀಡಬೇಕೆಂದರು.
ಸಾಲಮನ್ನಾದ ವಿಷಯ ಮೈತ್ರಿಸರ್ಕಾರದಲ್ಲಿ ಇನ್ನೂ ಹಲವು ಗೊಂದಲಗಳಿಂದ ಕೂಡಿವೆ. ಅದಕ್ಕಾಗಿ ಮೈತ್ರಿಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಕ್ಷಣ ನಿರ್ಣಯವನ್ನು ಕೈಗೊಂಡು ಸಾಲಮನ್ನಾ ಮಾಡಬೇಕು. ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್ ಎಸ್.ಬಿ.ಐ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಬಾಕಿ ಇರುವ ರೈತರಿಗೆ ಸಾಲದ ಮೊತ್ತಕ್ಕೆ ಅರ್ಧ ಪಾವತಿಸಿದರೇ ಬಡ್ಡಿ ಸಮೇತ ಸಾಲಮನ್ನಾ ಮಾಡಿ ಸಾಲ ತಿರುವಳಿ ಪತ್ರ ನೀಡುತ್ತಿವೆ.
ಇದರ ಸದೂಪಯೋಗವನ್ನು ಎಲ್ಲಾ ರೈತರೂ ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಇದೇ ರೀತಿ ಇನ್ನುಳಿದ ಬ್ಯಾಂಕ್ಗಳಲ್ಲಿ ಇದೇ ಪದ್ದತಿಯನ್ನು ಹಲವಡಿಸಬೇಕೆಂದು ಕೋರಿದರು. ಹಂತಯೇ ಕೇಂದ್ರ ಸರ್ಕಾರ ಈಗಾಗಲೇ 17 ಬೆಳೆಗಳಿಗೆ ಬೆಂಬಲ ಬೆಲೆ ಸೂಚಿಸಿದ್ದು ಇಲ್ಲಿಯವರೆಗೆ ನಮ್ಮ ಜಿಲ್ಲೆಯಲ್ಲಿ ಚಾಲನೆ ಯಾಗಿಲ್ಲ.
ಇದು ಬರೀ ಘೋಷಣೆಯಾಗಬಾರದು. ಎಲ್ಲಾ ತಾಲೂಕಿನಲ್ಲಿ ಖರೀದಿಕೇಂದ್ರಗಳನ್ನು ತೆರೆಯಬೇಕು ಎಂದರು. ಹಾಗಯೇ ಸಂಡೂರಿನಲ್ಲಿ ಇಲ್ಲಿಯವರೆಗೆ ಎ.ಪಿ.ಎಂ.ಸಿ (ಕೃಷಿ ಉತ್ಪನ್ನ ಮಾರುಕಟ್ಟೆ) ಮಾರ್ಕೆಟ್ನ್ನು ಆರಂಭಿಸಬೇಕು ಮತ್ತು ಸ್ವಾಮಿನಾಥನ್ ವರಧಿಯನ್ನು ಜಾರಿಗೆ ತರಬೇಕೆಂದು ಪ್ರತಿಭಟನೆ ನಡೆಸಿದರೇ ಪೋಲಿಸರು ಬಲಪ್ರಯೋಗಿಸಿ ಹೊರಹಾಕಲು ಮುಂದಾದ ಕ್ರಮ ಖಂಡಿಸಿದರು.
ಮತ್ತೆ ಈ ಹೋರಾಟಕ್ಕೆ ಚಾಲನೆ ನೀಡಲು ನ.28ರಿಂದ ಎರಡು ದಿನಗಳ ಕಾಲ ಪಾದಯಾತ್ರೆ ನಡೆಸಿ ನ.30ರಂದು ಸಂಸತ್ ಮುತ್ತಿಗೆ ಹಾಕಲಿದ್ದೇವೆ ಎಂದರು. ಈ ತಿಂಗಳಲ್ಲಿ ನಡೆಯುವ ಚುನಾವಣೆಗೆ ಯಾರಿಗೆ ಮತ ನೀಡಬೇಕೆಂದು ಕೇಳಿದ ಪ್ರಶ್ನೆಗೆ ಇಬ್ಬರೂ ಅಂತವರೇ ಅದಕ್ಕಾಗಿ ರಾಜ್ಯಾಧ್ಯಕ್ಷರು ಯಾರಿಗೆ ಮತ ಹಾಕಿ ಎನ್ನುತ್ತಾರೋ ಅವರಿಗೆ ನಮ್ಮ ರೈತಸಂಘ ಮತ ನೀಡಲಿದ್ದೇವೆ ಎಂದು ಉತ್ತರಿಸಿದರು.
ಕೃಷಿ ಇಲಾಖೆಯಲ್ಲಿ ಯಾವೊಬ್ಬ ಅಧಿಕಾರಿಗಳು ರೈತರಿಗೆ ಸಹಕಾರಿಯಾಗಿತ್ತಿಲ್ಲ. ಮೆಕ್ಕೆ ಜೋಳಕ್ಕೆ ಹುಳ ತಗಲಿರುವುದರಿಂದ ಮೆಕ್ಕೆಜೋಳದ ತೆನೆ ಸಮೇತ ಕೃಷಿ ಇಲಾಖೆಗೆ ಬೇಟಿ ನೀಡಿದಾಗ ಬರೀ ಹಾರಿಕೆ ಉತ್ತರವನ್ನು ನೀಡಿ ಕಳುಹಿಸುತ್ತಿದ್ದಾರೆ ಅದಕ್ಕಾಗಿ ಇಷ್ಟರಲ್ಲೇ ಜಿಲ್ಲೆಯ ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಪಾಠ ಕಲಿಸಲಿದ್ದೇವೆ ಎಂದರು. ಈ ಸುದ್ದಿಗೋಷ್ಟಿಯಲ್ಲಿ ಎಂ ಈಶ್ವರಪ್ಪ, ಜಿ.ನಾಗರಾಜ, ಯರಿಸ್ವಾಮಿ, ಉಜ್ಜಿನಯ್ಯ, ವೀರುಪಾಕ್ಷಿ, ದೊಡ್ಡಯ್ಯ, ಗಂಗಾ ದಾರವಾಡ್ಕರ್, ಜೆ.ನಾಗರಾಜ, ಮಾರೆಣ್ಣ, ಹೊನ್ನುರಸಾಬ್, ರಾಮಪ್ಪ ಸೇರಿದಂತೆ ಹಲವಾರು ರೈತರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








