ಸ್ಪರ್ದಾತ್ಮಕ ಶಿಕ್ಷಣ ಇಂದಿನ ಅನಿವಾರ್ಯ;ಚಂದ್ರಪ್ಪ

ಚಿತ್ರದುರ್ಗ;

         ಇದು ತಾಂತ್ರಿಕ ಜಗತ್ತು. ಇಂದಿನ ಸ್ಪರ್ದಾತ್ಮಕ ಸಂದರ್ಭಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ಕೊಡಬೇಕಾದ ಅನಿವಾರ್ಯತೆ ಇದೆ ಎಂದು ದೇವರಾಜ್ ಅರಸು ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯೂ ಆಗಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ಅಭಿಪ್ರಾಯ ಪಟ್ಟರು

           ನಗರದ ದೇವರಾಜ್ ಅರಸ್ ವಿದ್ಯಾಸಂಸ್ಥೆಯ ಎಸ್.ಎಲ್.ವಿ ಪದವಿಪೂರ್ವ ಕಾಲೇಜು ಹಾಗೂ ಇಂಡಿಯನ್ ಇಂಟರ್‍ನ್ಯಾಷನಲ್ ಸಿ.ಬಿ.ಎಸ್.ಇ ಶಾಲೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಲಾಗಿದ್ದ “ರೆಸ್ಪೆಕ್ಟ್ ಟ್ಯಾಲೆಂಟ್–2018” ಪ್ರತಿಭಾನ್ವೇಷಣಾ ಪರೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು

           ಇಂದಿನ ಆಧುನಿಕ ಸಮಾಜದಲ್ಲಿ ಸ್ಪರ್ಧಾತ್ಮಕವಾದ ಶಿಕ್ಷಣವು ಪ್ರಮುಖವಾಗಿದ್ದು, ಇದರಿಂದ ಭವಿಷ್ಯದ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಶಿಕ್ಷಣದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಬೇಕು. ಭವಿಷ್ಯದ ದೃಷ್ಠಿಯನ್ನಿಟ್ಟುಕೊಂಡು ನಮ್ಮ ಶಿಕ್ಷಣ ಇಲಾಖೆ ಹೊಸ ಹೊಸ ಪಠ್ಯವನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು
ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕವಾಗಿ ಬೆಳೆಯಬೇಕು. ಆದ್ದರಿಂದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯು ನೀಡುತ್ತಿರುವ ಗುಣಮಟ್ಟದ ಶಿಕ್ಷಣದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಚಿತ್ರದುರ್ಗದಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುತ್ತಿದೆ. ಮಕ್ಕಳಿಗೆ ಕಲಿಕೆಗೆ ಅನುಕೂಲವಾಗುವಂತೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದ್ದು, ಯಾವುದೇ ಸಂಸ್ಥೆಯಲ್ಲಿ ಸಿಗದ ಸೌಲಬ್ಯಗಳನ್ನು ತಮ್ಮ ಸಂಸ್ಥೆ ಕಲ್ಪಿಸಿಕೊಟ್ಟಿದೆ ಎಂದು ಚಂದ್ರಪ್ಪ ಹೇಳಿದರು

          ಬರುವ ಶೈಕ್ಷಣಿಕ ವರ್ಷದಿಂದ ಸಂಸ್ಥೆ ಇನ್ನು ಕೆಲವು ವಿಶೇಷ ಸೌಲಬ್ಯಗಳನ್ನು ನೀಡಲು ಯೋಚಿಸುತ್ತಿದೆ. ಮಕ್ಕಳಿಗೆ ಇಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ನೆರವು ನೀಡಲಾಗುತ್ತಿದೆ ಎಂದರು

          ಎಸ್.ಎಲ್.ವಿ.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಎ.ಕೊಟ್ರೇಶ್ ಮಾತನಾಡಿ, ಎಸ್.ಎಸ್.ಎಲ್.ಸಿಯ ನಂತರ ವಿದ್ಯಾರ್ಥಿಗಳು ಪಿ.ಯು.ಸಿ ಹಂತದಲ್ಲಿ ನಿಶ್ಚಿತ ಗುರಿ ಹಾಗೂ ಬದ್ಧತೆಯೊಂದಿಗೆ ವಿದ್ಯಾಭ್ಯಾಸ ನಡೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಲಿಕೆಯ ಹಂತದಲ್ಲಿ ಕಾಲಾಹರಣ ಮಾಡಕೂಡದು. ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯವಾಗುತ್ತದೆ.

         ಈ ನಿಟ್ಟಿನಲ್ಲಿ ಮಕ್ಕಳು ಮುನ್ನಡೆಯಬೇಕು ಎಂದು ಸಲಹೆ ನೀಡಿದರು ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಚಾರ್ಯ ಕೊಟ್ರೇಶ್, ಆಡಳಿತ ಮಂಡಳಿಯ ರಘುಚಂದನ್, ಚಂದ್ರಕಲಾ ಇನ್ನಿತರರು ಉಪಸ್ಥಿತರಿದ್ದರು. ಪ್ರೊ.ಅನಂತರಾಮು.ಬಿ.ಸಿ.ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಭೈರಸಿದ್ಧಪ್ಪನವರು ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಸುಮಾರು 3650 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link