ಎಸಿಬಿ ಯಿಂದ ಅಹವಾಲು ಸ್ವೀಕಾರ ..!!

ಬ್ಯಾಡಗಿ:
 
    ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೊಳ್ಳಲು ಭ್ರಷ್ಟಾಚಾರ ನಿಗ್ರಹದಳ ಪೋಲಿಸ್‍ರಿಗೆ ಸಾರ್ವಜನಿಕರ ಸಹಕಾರ ಅತೀ ಅವಶ್ಯವೆಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಪೋಲಿಸ್ ಆಧೀಕ್ಷಕ ಜಿ.ಎ.ಜಗದೀಶ ಹೇಳಿದರು.
 
     ಶುಕ್ರವಾರ ಅವರು ಸ್ಥಳೀಯ ತಾಲೂಕಾ ತಹಶೀಲದಾರರ ಕಾರ್ಯಾಲಯದ ಸಭಾಭವನದಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಪೋಲಿಸ್ ಠಾಣೆ ಹಾವೇರಿ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಸರ್ಕಾರಿ ಕಛೇರಿಗಳಲ್ಲಿ ನಿಮ್ಮ ಕೆಲಸವನ್ನು ಮಾಡಿಕೊಡುವಲ್ಲಿ ಅಧಿಕಾರಿ ಅಥವಾ ಸಿಬ್ಬಂದಿ ವರ್ಗದವರು ಲಂಚವನ್ನು ಪಡೆಯುವುದು ಹಾಗೂ ಬೇಡಿಕೆ ಇಡುವುದು ಮತ್ತು ಸಾರ್ವಜನಿಕರು ಲಂಚವನ್ನು ಕೊಡುವುದು ಅಪರಾಧವಾಗಿದೆ.
   
      ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ನ್ಯಾಯಯುತ ಸಂಪಾದನೆಗಿಂತ ಅಧಿಕ ಮತ್ತು ಅಕ್ರಮ ಆಸ್ತಿ ಹೊಂದಿದ್ದು ಕಂಡು ಬಂದಲ್ಲಿ ಸಾರ್ವಜನಿಕರು ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಪೋಲಿಸ್‍ರಿಗೆ ಲಿಖಿತವಾಗಿ ಮಾಹಿತಿ ನೀಡಿದಲ್ಲಿ ಅಂತಹ ಅಧಿಕಾರಿಗಳನ್ನು ಶಿಕ್ಷಕಿ ಸಮಾಜವನ್ನು ಸುಧಾರಿಸಲಾಗುವುದೆಂದರು. 
   
      ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವ ಜವಾಬ್ದಾರಿಯನ್ನು ಭ್ರಷ್ಟಾಚಾರ ನಿಗ್ರಹದಳ ಪೋಲಿಸ್‍ರು ಜಿಲ್ಲೆಯಲ್ಲಿ ಉತ್ತಮವಾಗಿ ಮಾಡುತ್ತಿದ್ದಾರೆ. ಸಮಾಜದಲ್ಲಿ ನೀವು ನೋಡಬಯಸುವ ಉತ್ತಮ ಸಮಾಜವನ್ನು ನಿರ್ಮಿಸಿ ಬದಲಾವಣೆಯನ್ನು ತರಲು ಭ್ರಷ್ಟಾಚಾರ ನಿಗ್ರಹದಳ ಪೋಲಿಸ್‍ರು ಶಕ್ತಿ ಮೀರಿ ಪ್ರಯತ್ನ ಮಾಡುತ್ತಲಿದ್ದಾರೆ. ಆದರೇ ಯಾವುದೇ ಕೆಲಸವನ್ನು ಮಾಡಬೇಕಾದಲ್ಲಿ ಸಾರ್ವಜನಿಕರ ಸಹಕಾರ ಇಲಾಖೆಯೊಂದಿಗೆ ಇದ್ದಲ್ಲಿ ಹೆಚ್ಚಿನ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವೆಂದರು.
 
      ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಪೋಲಿಸ್ ಉಪಅಧೀಕ್ಷಕ ಎಸ್.ಕೆ.ಪ್ರಹ್ಲಾದ ಮಾತನಾಡಿ ಪಾರದರ್ಶಕ ಆಡಳಿತವನ್ನು ಜಿಲ್ಲೆಯಲ್ಲಿ ತರಲು ಭ್ರಷ್ಟಾಚಾರ ನಿಗ್ರಹದಳ ಪೋಲಿಸ್ ಇಲಾಖೆ ಶ್ರಮಿಸುತ್ತಲಿದೆ. ಲಂಚಗುಳಿತನದ ನಿರ್ಮೂಲನೆಗೊಳ್ಳಲು ಜನತೆ ಇಲಾಖೆಯೊಂದಿಗೆ ಪ್ರಾಮಾಣಿಕವಾಗಿ ಕೈಜೋಡಿಸಬೇಕಿದೆ.
 
        ಸಾರ್ವಜನಿಕರು ಸರ್ಕಾರಿ ಕಛೇರಿಗಳಲ್ಲಿ ತಮ್ಮ ಯಾವದೇ ದಾಖಲೆಗಳನ್ನು ಪಡೆಯುವಲ್ಲಿ ಅಧಿಕಾರಿಗಳು ಬೇಕಂತಲೇ ತಮಗೆ ಕೊಡಬೇಕಾಗಿರುವ ದಾಖಲೆಗಳನ್ನು ತಡವಾಗಿ ನೀಡುವುದು ಇಲ್ಲವೇ ನಿಮ್ಮಿಂದ ಏನಾದರೂ ಹಣವನ್ನು ಬಯಸುವಂತ ಕಾರ್ಯಗಳು ನಡಯುತ್ತಿದ್ದರೇ ಇಲ್ಲವೇ ಮಧ್ಯವರ್ಥಿಗಳ ಮೂಲಕ ನಿಮ್ಮಿಂದ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಲ್ಲಿ ತಕ್ಷಣವೇ ನಮ್ಮ ಇಲಾಖೆಯನ್ನು ಸಂಪರ್ಕಿಸಿ ಲಿಖಿತ ರೂಪದಲ್ಲಿ ಮಾಹಿತಿ ನೀಡಿದಲ್ಲಿ ನಿಮ್ಮ ಕೆಲಸವನ್ನು ಯಾವುದೇ ಹಣ ಕೊಡದೇ ತತಕ್ಷಣವೇ ನಿಮ್ಮ ಕೆಲಸವನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.
        ಪ್ರತಿ ತಿಂಗಳಿಗೊಮ್ಮ ಜಿಲ್ಲೆಯ ಎಲ್ಲಾ ತಾಲೂಕಾ ಕೇಂದ್ರಗಳಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಪೋಲಿಸ್‍ರು ಅವ್ಹಾಲು ಸ್ವೀಕರಿಸಲು ಸಭೆಗಳನ್ನು ಮಾಡುತ್ತಲಿದ್ದೇವೆ. ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದು, ಇಲ್ಲವೇ ಪ್ರತಿ ನಿತ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಪೋಲಿಸ್ ಕಛೇರಿಯು ಹಾವೇರಿಯಲ್ಲಿದ್ದು ಜನರು ಅಲ್ಲಿಯೂ ಕೂಡಾ ತಮ್ಮ ಅರ್ಜಿಯನ್ನು ಸಲ್ಲಿಸಿ ಭ್ರಷ್ಟಾಚಾರ ಮುಖ್ತ ಸಮಾಜ ನಿರ್ಮಿಸಲು ನಮ್ಮೊಂದಿಗೆ ಸೇರುವಂತೆ ಕರೆ ನೀಡಿದರು.
   
      ಈ ಸಂದರ್ಭದಲ್ಲಿ ತಹಶೀಲದಾರ ಕೆ.ಗುರುಬಸವರಾಜ, ಸಿಪಿಐ ಬಿ.ಭಾಗ್ಯವತಿ, ಪಿಎಸ್‍ಐಗಳಾದ ಮಾಲತೇಶ, ಬಸವರಾಜ, ತಾ.ಪಂ.ಇಓ ಪರಶುರಾಮ ಪುಜಾರ, ನಿವೃತ್ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ ಸೇರಿದಂತೆ ಇನ್ನಿತರರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link