ಜಲಮಂಡಲಿ ವಿರುದ್ದ ದೂರು ದಾಖಲು

ಬೆಂಗಳೂರು

              ಆರ್ ಆರ್ ನಗರ ರಾಜ ಕಾಲುವೆ ದುರಂತ ಪ್ರಕರಣ ಸಂಬಂಧಿಸಿದಂತೆ ಮಣ್ಣಿನಲ್ಲಿ ಹೂತು ಹೋಗಿ ಮೃತಪಟ್ಟ ಮಡಿವಾಳಪ್ಪ ಪತ್ನಿ, ಆರ್ ಆರ್ ನಗರ ಠಾಣೆಯಲ್ಲಿ ಅಧಿಕಾರಿಗಳ ಮೇಲೆ ದೂರು ದಾಖಲು ಮಾಡಿದ್ದಾರೆ.

           ಅಧಿಕಾರಿ ನಿತ್ಯಾನಂದ ಕುಮಾರ್, ದಿಲೀಪ್, ಸ್ನೇಹಾ, ನವನೀತ್, ಹಾಗೂ ಗುತ್ತಿಗೆದಾರರು ಕೆಬಾಬುರಾಜ್, ನವೀನ್ ಮೆಲೆ ಸುರಕ್ಷತಾ ಕ್ರಮ ಅನುಸರಿಸದ ಹಿನ್ನಲೆ ಐಪಿಸಿ ಸೆಕ್ಷೆನ್ 34. 304 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ.

               ರಾಜರಾಜೇಶ್ವರಿ ನಗರದ ಮೀನಾಕ್ಷಿ ಕಲ್ಯಾಣ ಮಂಟಪ ರಸ್ತೆ ಬಳಿ ಸ್ಯಾನಿಟರಿ ಪೈಪ್ಗಳನ್ನ ಬಳಸಲು, ಕಾಲುವೆ ಕಾಮಗಾರಿಯನ್ನ ಜೆಸಿಬಿ ಹಾಗೂ ಹಿಟಾಚಿ ಮೂಲಕ ಮಡಿವಾಳಪ್ಪ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಾಲುವೆಯ ಗೋಡೆ ಕುಸಿದು ಮಡಿವಾಳಪ್ಪ ಮೇಲೆ ಬಿದ್ದು ಮಣ್ಣಿನಡಿ ಸಿಲುಕಿಕೊಂಡಿದ್ರು. ಕಾರ್ಮಿಕರಿಗೆ ಸುರಕ್ಷಾ ಕವಚ, ಹೆಲ್ಮೆಟ್, ಸೇಫ್ಟಿ ಬೆಲ್ಟ್ ಅಳವಡಿಸದೆ ಕೆಲಸ ಮಾಡುವಂತೆ ತಾಕಿತು ಮಾಡಿದ್ರು, ಈ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕನ್ನಗಳ್ಳರ ಸೆರೆ

           ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಡುತ್ತಿದ್ದ ಕುಖ್ಯಾತ ಕನ್ನಗಳ್ಳರನ್ನ ಎಚ್‍ಎಎಲ್ ಪೆಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಚ್‍ಎಎಲ್‍ನ ವೇಲು ಅಲಿಯಾಸ್ ಪ್ಲೇಗ್ ವೇಲು ಹಾಗೂ ಶಬ್ಬೀರ್ ಅಲಿಯಾಸ್ ಅಂಡಿ ಶಬ್ಬೀರ್ ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ ಹತ್ತು ಲಕ್ಷ ರೂ ಮೌಲ್ಯದ ಚಿನ್ನಾಭರಣ, ಟಿವಿ, ಕ್ಯಾಮೆರಾಗಳು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.ಇತ್ತೀಚೆಗೆ ಎಚ್‍ಎಎಲ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿದ್ದ ಮನೆ ಕಳ್ಳತನ ಪ್ರಕರಣಗಳು ಪತ್ತೆಗೆ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ ರಚನೆ  ಆರೋಪಿಗಳನ್ನ ಬಂಧಿಸಿದ್ದಾರೆ.ಆರೋಪಿಗಳ ಬಂಧನದಿಂದ ಒಟ್ಟು ಎಂಟು ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap