ಇರಾನ್, ಇರಾಕ್ ಗೆ ಭಾರತದಿಂದ ವಿಮಾನ ಹಾರಾಟ ಸ್ಥಗಿತ!!

ನವದೆಹಲಿ: 

     ಇರಾನ್, ಇರಾಕ್ ಮತ್ತು ಕೊಲ್ಲಿಯ ವಾಯು ಪ್ರದೇಶಕ್ಕೆ ವಿಮಾನಗಳ ಹಾರಾಟ ಸ್ಥಗಿತಗೊಳಿಸುವಂತೆ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ ಎನ್ನಲಾಗಿದೆ.

     ಅಮೆರಿಕ ಇರಾಕ್ ನಡುವಿನ ಸಂಘರ್ಷ ಮುಂದುವರೆದಿದ್ದು, ಇರಾಕ್ ನಲ್ಲಿ ಪ್ರಸಕ್ತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಆದೇಶದ ತನಕ ಅನಿವಾರ್ಯವಿಲ್ಲದೆ ಇರಾಕ್ ಗೆ ಪ್ರಯಾಣ ಮಾಡಬೇಡಿ ಎಂದು ಭಾರತೀಯ ಪ್ರಜೆಗಳಿಗೆ ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ ಎನ್ನಲಾಗಿದೆ.

      ಈ ಕುರಿತು ವಿಮಾನಯಾನ ಸಂಸ್ಥೆಗಳೊಂದಿಗೆ ಸಭೆ ನಡೆಸಿರುವ ವಿದೇಶಾಂಗ ಸಚಿವಾಲಯ, ಇರಾಕ್ ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಎಚ್ಚರವಾಗಿರಲು ಸೂಚಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ