ಬೆಂಗಳೂರು
ಕಳೆದ ಆರು ತಿಂಗಳ ಹಿಂದೆ ಕಾಣೆಯಾಗಿದ್ದ ಕಂಪ್ಯೂಟರ್ ಶಿಕ್ಷಕಿ ನಗರದ ಹೊರವಲಯದ ಮಾಚೋಹಳ್ಳಿ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿರುವ ದುರ್ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾಚೋಹಳ್ಳಿ ಫಾರೆಸ್ಟ್ ಗೇಟ್ನ ಮೂಕಾಂಬಿಕಾ ನಗರದ ಕಾವ್ಯ ಎಂದು ಕೊಲೆಯಾದ ಮಹಿಳೆಯನ್ನು ಗುರುತಿಸಲಾಗಿದೆ .6ತಿಂಗಳ ಹಿಂದೆ ಮನೆಯಿ<ದ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ಕಾವ್ಯರ ಮೂಳೆ, ತಲೆ ಬುರುಡೆ ಇನ್ನಿತರ ಅವಶೇಷಗಳು ಮಾಚೋಹಳ್ಳಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಕೊಲೆಯಾದ ಮಹಿಳೆ ಎಂಟು ವರ್ಷದ ಹಿಂದೆ ಸತೀಶ್ ಎಂಬುವರನ್ನು ಮದುವೆಯಾಗಿದ್ದರು. ಪತ್ನಿ ಕಾಣೆಯಾಗಿರುವ ಕುರಿತು ಸತೀಶ್ ಮಾದನಾಯಕನಹಳ್ಳಿ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಕಳೆದ ಐದು ತಿಂಗಳಿಂದ ಎಲ್ಲಿಯೂ ಪತ್ತೆಯಾಗದ ಕಾವ್ಯ, ಕೊನೆಗೆ ಮಾಚೋಹಳ್ಳಿ ಫಾರೆಸ್ಟ್ನಲ್ಲಿ ತಲೆ ಬುರುಡೆ ಮತ್ತು ಮೂಳೆ ಪತ್ತೆಯಾಗಿದೆ. ತಲೆ ಬುರುಡೆ ಸಿಕ್ಕಿರುವ ಸ್ಥಳದಲ್ಲಿಯೇ ಆಕೆ ಧರಿಸಿದ ಬಟ್ಟೆ, ವಾಚ್, ಟಿಫನ್ ಬಾಕ್ಸ್, ಆಕೆಗೆ ಸಂಬಂಧಿಸಿದ ವಸ್ತುಗಳು ಕೂಡ ಸಿಕ್ಕಿದೆ.
ಕಾವ್ಯಗೆ ಮದುವೆಯಾಗಿ ಎಂಟು ವರ್ಷಗಳಾಗಿದ್ದರೂ ಮಕ್ಕಳಾಗಿರಲ್ಲಿಲ್ಲ.ನಿವೇಶನದ ವಿಚಾರಕ್ಕೆ ಕಾವ್ಯ ಮತ್ತು ಆಕೆಯ ಗಂಡನ ಕಡೆಯವರಿಗೆ ಜಗಳವಾಗಿತ್ತು. ಹಾಗಾಗಿ ಮಹಿಳೆಯನ್ನು ಯಾರೋ ಕೊಲೆ ಮಾಡಿ ಶವವನ್ನು ಅರಣ್ಯದಲ್ಲಿ ಬಿಸಾಡಿ ಹೋಗಿದ್ದಾರೆ.
ಕಾವ್ಯಳನ್ನು ಆಕೆಯ ಗಂಡ ಸತೀಶ್ ಹಾಗೂ ಆತನ ಸಂಬಂಧಿಗಳಾದ ಶಿವಲಿಂಗಮ್ಮ, ಅಪ್ಪಾಜಿಗೌಡ, ನಾಗರತ್ನರವರೇ ಕೊಲೆ ಮಾಡಿದ್ದಾರೆಂದು ಮೃತಳ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೆÇಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








