ಬೆಂಗಳೂರು
ಮಿನಿಸ್ಟರ್ ಆಫೀಸ್‍ನಲ್ಲಿ ಡ್ರೈವರ್ ಇರುತ್ತಾರೆ, ಪಿಎ, ಸಿಬ್ಬಂದಿ ಇರುತ್ತಾರೆ,ಅವರೆಲ್ಲ ಈ ರೀತಿ ಮಾಡಿದರೆ ಸಚಿವರಿಗೇನು ಸಂಬಂಧ ಎಂದು ವಿಧಾನಸೌಧ ವೆಸ್ಟ್ ಗೇಟ್ ಬಳಿ ಹಣ ಸಿಕ್ಕ ಪ್ರಕರಣದ ಬಗ್ಗೆ ಗೃಹ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿ ನಗರಲ್ಲಿಂದು ಮಾತನಾಡಿದ ಅವರು,ನಿನ್ನೆ ವಿಧಾನಸೌಧ ವೆಸ್ಟ್ ಗೇಟ್‍ನಲ್ಲಿ ಲಕ್ಷಾಂತರ ರೂ. ಹಣ ಜಪ್ತಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿ,ಆ ಬಗ್ಗೆ ಸಂಬಂಧಪಟ್ಟ ಸಚಿವರು ಹೇಳಿಕೆ ಕೊಡುತ್ತಾರೆ. ಅಲ್ಲದೆ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ ಎಂದರು.
ಇದೇ ಚಡಚಣ ನಕಲಿ ಎನ್‍ಕೌಂಟರ್ ಕೇಸ್ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಆ ಪ್ರಕರಣ ಸಂಬಂಧ ಎರಡು ಚಾರ್ಜ್‍ಸೀಟ್ ಸಲ್ಲಿಕೆಯಾಗಿವೆ. ಅಲ್ಲದೆ ಇನ್ನೊಂದು ಹೆಚ್ಚುವರಿ ಚಾರ್ಜ್ ಸೀಟ್ ಸಲ್ಲಿಕೆ ತಯಾರಿ ನಡೆದಿದೆ. ನಮ್ಮ ಸಿಐಡಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಕೇಸ್‍ನಲ್ಲಿಯೂ ನಮ್ಮ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಅದು ಅಂತಿಮ ಘಟ್ಟದಲ್ಲಿದೆ ಎಂದು ತಿಳಿಸಿದರು.
ನನಗೆ ಝಿರೋ ಟ್ರಾಫಿಕ್ ಬೇಡ ಅಂತ ಈಗಾಗಲೇ ಆರ್ಡರ್ ಮಾಡಿಸಿದ್ದೇನೆ.ಮೊನ್ನೆಯೇನೋ ಕೆಲ ಅಧಿಕಾರಿ ಸಿಂಗಲ್ ಲೈನ್ ಇದ್ದಾಗ ಟ್ರಾಫಿಕ್ ಕ್ಲೀಯರ್ ಮಾಡಿದ್ದಾರೆ.ಅವರಿಗೆ ಗೊತ್ತಾಗಿಲ್ಲ,ನಾನು ಕಮೀಷನರ್‍ಗೆ ಹೇಳಿದ್ದೇನೆ. ವಾನಿರ್ಂಗ್ ಕೊಟ್ಟು ಬಿಡೋಕೆ ಹೇಳುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
