ಚಂಡಿಗಢ :
ಭಾರತದಲ್ಲಿ ಕೊರೋನಾ ವೈರಸ್‌ಗೆ ನಾಲ್ಕನೇ ಬಲಿಯಾಗಿದೆ. ಜರ್ಮನಿಯಿಂದ ಇಟಲಿ ಮೂಲಕ ಪಂಜಾಬ್‌ಗೆ ಬಂದಿದ್ದರು.
ಹದಿನೈದು ದಿನಗಳ ಹಿಂದೆ ಜರ್ಮನಿಯಿಂದ ಇಟಲಿ ಮೂಲಕ ಹಿಂದಿರುಗಿ ಪಂಜಾಬ್‌ನ ನವಾನ್‌ಶಹರ್ ಜಿಲ್ಲೆಯ ಆಸ್ಪತ್ರೆಯಲ್ಲಿ ತೀವ್ರ ಎದೆ ನೋವಿನಿಂದ ಸಾವನ್ನಪ್ಪಿದ 72 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿದ್ದ 72 ವರ್ಷದ ವೃದ್ಧ ಬುಧವಾರ ಬಂಗಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿಧನರಾಗಿದ್ದರು. ಅವರ ಗಂಟಲು ದ್ರವದ ಮಾದರಿಯ ಪರೀಕ್ಷೆ ನಡೆಸಲಾಗಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪಿಜಿಐಎಂಇಆರ್) ನಿರ್ದೇಶಕ ಜಗತ್ ರಾಮ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ