ಹಾವೇರಿ :
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಪದಾಧಿಕಾರಿಗಳು ಹಾವೇರಿ ನಗರದ ಜಿ.ಎಚ್. ಕಾಲೇಜು ಎದುರು ಪಿ.ಬಿ.ರೋಡ್‍ನಲ್ಲಿ ವಿದ್ಯಾರ್ಥಿನಿಯರ ಜೊತೆ ಮಂಗಳೂರು ಜಿಲ್ಲೆ ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಗಾಂಜಾ ನೀಡುವ ಮೂಲಕ ಕೆಲ ಪುಂಡ ವಿಕೃತ ಮನಸ್ಸಿನ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರ ವಿರುದ್ಧ ಉಗ್ರವಾಗಿ ಪ್ರತಿಭಟನೆ ನಡೆಸಿ ಅತ್ಯಾಚಾರ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾಡಲು ಸರ್ಕಾರಕ್ಕೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಬಸವರಾಜ ಟೀಕೆಹಳ್ಳಿ ಮಾತನಾಡಿ, ಮಂಗಳೂರು ಜಿಲ್ಲೆ ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಗಾಂಜಾ ನೀಡುವ ಮೂಲಕ ಕೆಲ ಪುಂಡ ವಿಕೃತ ಮನಸ್ಸಿನ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ವಿಡಿಯೋವನ್ನು ಮಾಡುವ ಮೂಲಕ ತಮ್ಮ ಕಾಮಕೃತ್ಯ ಅಟ್ಟಹಾಸ ಮೆರೆದಿದ್ದಾರೆ. ಇಂತಹ ವಿಕೃತ ಮನಸ್ಸಿನ ಕಾಮುಕರಿಗೆ ಕಾನೂನು ರೀತಿಯಲ್ಲಿ ಉಗ್ರವಾದ ಶಿಕ್ಷೆಯನ್ನು ನೀಡುವ ಮೂಲಕ ಆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಬೇಕು.
ಅಷ್ಟೇ ಅಲ್ಲದೇ ಅತ್ಯಾಚಾರದ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದವರ ವಿರುದ್ಧವೂ ಸರಿಯಾದ ಕಾನೂನು ಕ್ರಮ ಜರುಗಿಸಬೇಕು ಎಂದರು.ಈ ರೀತಿ ರಾಜ್ಯದ ಹಾಗೂ ದೇಶದ ಎಲ್ಲೆಡೆ ಹಲವಾರು ಅತ್ಯಾಚಾರಗಳು, ಬಲಾತ್ಕಾರಗಳು ನಡೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ಶಿಕ್ಷೆ ಜಾರಿ ಮಾಡದೇ ಚಿರನಿದ್ರೆಯಲ್ಲಿ ಜಾರತೊಡಗಿದ್ದಾರೆ. ಆದ ಕಾರಣ ಇಂತಹ ವಿಕೃತ ಮನಸ್ಸಿನ ಕಾಮುಕರು ಚಿಕ್ಕ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿನಿಯರು ಹಾಗೂ ವೃದ್ಧೆಯರೂ ಮೇಲೆ ಕೂಡ ತಮ್ಮ ಕಾಮ ಕೃತ್ಯ ಮೆರೆಯುತ್ತಿದ್ದಾರೆ. ಇಂತ ಕಾಮುಕರನ್ನು ಪೊಲೀಸ್ ಇಲಾಖೆಯವರು ಅರೆಸ್ಟ್ ಮಾಡಿ ಕಾನೂನಿಗೆ ಒಪ್ಪಿಸುತ್ತಾರೆ. ಸ್ವಲ್ಪ ದಿನಗಳ ಬಳಿಕೆ ಅವರು ಹೊರಗಡೆ ಬಂದು ತಮ್ಮ ಕಾಮಕೃತ್ಯ ಅಟ್ಟಹಾಸ ಮೆರೆಯುತ್ತಾರೆ. ಆದರೆ ಇಂತಹ ಕೃತ್ಯಗಳಿಗೆ ಕೊನೆಯೇ ಇಲ್ಲದಂತಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆದಷ್ಟು ಬೇಗನೆ ಚಿಕ್ಕಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ಅತ್ಯಾಚಾರ ಮಾಡುತ್ತಿರುವ ವಿಕೃತ ಮನಸ್ಸಿನ ಕಾಮುಕರಿಗೆ ಸರಿಯಾದ ಕಠಿಣ ಕಾನೂನು ಕ್ರಮ ಜಾರಿ ಮಾಡಿ ಈ ಕಾಮುಕರ ಅತ್ಯಾಚಾರಕ್ಕೆ ಬಲಿಯಾದಂತಹ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಸರಿಯಾದ ನ್ಯಾಯ ದೊರಕಿಸಿಕೊಡುವಲ್ಲಿ ಮುಂದಾಗಬೇಕು.ಅದರ ಜೊತೆಗೆ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಶಾಲಾ ಕಾಲ್ಭೆಜಿಗೆ ಕಳುಹಿಸಿ ಮಕ್ಕಳಿಗೆ ವಿದ್ಯಭ್ಯಾಸ ಕಲಿಸಿದರೆ ಸಾಲದು ಅದರ ಜೊತೆಗೆ ಸಂಸ್ಕ್ರತಿ ಸಂಸ್ಕಾರ ಸಮಾಜದ ಬಗ್ಗೆ ಅರಿವನ್ನು ಮೂಡಿಸಬೇಕು ತಮ್ಮ ಮಕ್ಕಳು ಶಾಲಾ ಕಾಲೆಜಿಗೆ ಯಾವಾಗ ಹೋಗುತ್ತಾರೆ ಯಾವಾಗ ಬರುತ್ತಾರೆ ಯಾರ್ಯಾರ ಜೊತೆ ಇರುತ್ತಾರೆ ಏನೆಲ್ಲಾ ಮಾಡುತ್ತಾರೆ ಎಂಬುದು ತಂದೆ ತಾಯಿಗಳು ಗಮನಹರಿಸಬೇಕು ಎಂದು ಸಮಿತಿಯ ರಾಜ್ಯಾಧ್ಯಕ್ಷ ಬಸವರಾಜ ಟೀಕೆಹಳ್ಳಿ ಎಚ್ಚರಿಸಿದ್ದರು.
ಈ ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಶಿವಶಂಕರ ಟೀಕಿಹಳ್ಳಿ, ರಾಜ್ಯ ಉಪಾಧ್ಯಕ್ಷ ಹರೀಶ ಇಂಗಳಗೊಂದಿ, ಮಹಿಳಾ ಜಿಲ್ಲಾಧ್ಯಕ್ಷೆ ಲಕ್ಷ್ಮಿ ಜಿಂಗಾಡೆ, ಜಿಲ್ಲಾ ಸಂಚಾಲಕ ಮಾಲತೇಶ ಗೌಡ ಪಾಟೀಲ, ವಿಷ್ಣು ಜಿಂಗಾಡೆ, ಶಿವರಾಜ ಮಾಳಗಿ, ಸಮಿತಿಯ ಪದಾಧಿಕಾರಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.