ಶಿಗ್ಗಾವಿ :
ಬಹು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ ಅವರು ಬೆಂಗಳೂರಿನ ಶಂಕರ್ ಆಸ್ಪತ್ರೆಯಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಮಾಜಿ ಸಂಸದರು ಹಾಗೂ ಪಟ್ಟಣದ ಬಿಜೆಪಿ ಮುಖಂಡರಾದ ಮಂಜುನಾಥ ಕುನ್ನೂರ ತೀರ್ವ ಸಂತಾಪ ಸೂಚಿಸಿದ್ದಾರೆ.
ಸೊಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯ ರಾಜ್ಯ ಮಟ್ಟದ ಅದ್ಯಕ್ಷರಿದ್ದಾಗ ನನಗೆ ಎಂಪಿ ಟಿಕೆಟ್ ನೀಡಿದ್ದರು ಮತ್ತು ನಾನು ಅವರ ಜೊತೆ ಎಂಪಿ ಆಗಿ ಕೆಲಸ ಮಾಡಿದ್ದೇನೆ, ಅವರು ರೈತರ ಸಮಸ್ಯೆಯನ್ನು ತಿಳಿಯಲು ಬಹಳ ಆಸಕ್ತಿ ಉಳ್ಳವಾರಾಗಿದ್ದರು, ನನ್ನ ಜೊತೆಗೆ ರಾಷ್ಟ್ರ ಮಟ್ಟದ ರೈತ ಸಂಘದ ಮುಖಂಡರಾದ ಕೆಂಗಲ್ ರೆಡ್ಡಿಯವರ ಜೊತೆ ರೈತರ ಸಮಸ್ಯೆ ಅರಿತು ಪಾರ್ಲಿಮೆಂಟಿನಲ್ಲಿ ಮಾತನಾಡಿದ್ದ ಅವರು ಅಂದು ಸಮಸ್ಯೆಗೆ ಸ್ಪಂದಿಸುವ ಮೂಲಕ ರೈತರಿಗೆ ನೆರವಾದವರಾಗಿದ್ದರು, ಇನ್ನು ನಮ್ಮ ಕಡೆಯ ರೊಟ್ಟಿ ಮತ್ತು ಚಟ್ನಿಯ ಬಗ್ಗೆ ಬಹಳ ಪ್ರೀತಿ ಉಳ್ಳವರಾಗಿದ್ದ
ಅನಂತಕುಮಾರ ಅವರು ಪಾರ್ಲಿಮೆಂಟಿಗೆ ತೆರಳುವ ಪೂರ್ವದಲ್ಲಿ ನಮ್ಮ ಮನೆಗೆ ಬಂದು ರೊಟ್ಟಿ, ಚಟ್ನಿಯನ್ನು ತೆಗೆದುಕೊಂಡು ಹೋಗಿ ಊಟ ಮಾಡಿದ್ದನ್ನು ಸ್ಮರಿಸಿದ ಕುನ್ನೂರರು ಅನಂತಕುಮಾರ ಅವರು ಬಹಳ ಸರಳ, ಸಜ್ಜನಿಕೆಯ ವ್ಯಕ್ತಿ, ರಾಷ್ಟ್ರ ಮಟ್ಟದ ಸಮಸ್ಯೆಗಳನ್ನು ಅರಿತು ಸ್ಪಂದಿಸುವ ವ್ಯಕ್ತಿಯಾಗಿದ್ದರು ಅವರನ್ನು ಕಳೆದುಕೊಂಡ ನಮಗೆ ಇಂದು ತೀರ್ವ ದುಖ:ವಾಗಿದೆ ಎಂದು ಭಾವುಕರಾದರು.