ತಿಪಟೂರು :
ಶಿಸ್ತಿನ ಮತ್ತು ಸಂಘಟನಾತ್ಮಕ ಕ್ರಿಯೆಯಿಂದ ಜನರನ್ನು ಒಂದುಗೂಡಿಸಿ ಪ್ರತಿ ವಿಶ್ವಾಸಗಳನ್ಮ್ನಗಳಿಸಿ, ಜನನಾಯಕರಾಗಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಜಾಗೃತಿಯನ್ನು ಮೂಡಿಸಿ ಸೋಲಿಲ್ಲದ ಸರದಾರೆನಿಸಿಕೊಂಡಿದ್ದ ಕೇಂದ್ರ ಸಚಿವ ಅನಂತ್‍ಕುಮಾರ್‍ರವರ ಅಕಾಲಿಕ ನಿಧನದ ವಾರ್ತೆ ದೇಶದ ಜನರಲ್ಲಿ ದಿಗ್ಪ್ಬ್ರಮೆಯನ್ನುಂಟುಮಾಡಿದೆ ಎಂದು ಎಸ್.ವಿ.ಪಿ ಹಾಗೂ ಸುಮತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಎಸ್.ಕೆ.ರಾಜಶೇಖರ್ ತಿಳಿಸಿದರು.
ನಗರದ ಎಸ್.ವಿ.ಪಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಅನಂತಕುಮಾರ್‍ರವರ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅನಂತ್‍ಕುಮಾರ್ ತಮಮ್ಮ ವಿದ್ಯಾರ್ಥಿದಿಸೆಯಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಮತ್ತು ರಾಷ್ಟ್ರೀಯ ಸ್ವಯಂ ಸಂಘಗಳ ಸಖ್ಯದಲ್ಲಿ ಸೇರಿ ರಾಷ್ಟ್ರೀತೆಯ ಹಾಗೂ ಶಿಸ್ತನ್ನು ಕಲಿಸುವ ಚುಟುವಟಿಕೆಗಳಲ್ಲಿ ಸಕ್ರೀಯರಾಗಿದ್ದರು. ಆನರನ್ನು ಸಂಘಟಿಸುವ ಹಾಗೂ ರಾಷ್ಟ್ರದ ಬಗ್ಗೆ ಅಭಿಮಾನವನ್ನು ಮೂಡಿಸುವ ಮೌಲ್ಯಗಳನ್ನು ಸಂಚಯಿಸಿಕೊಂಡು ಉತ್ತಮನಾಯಕತ್ವದ ಗುಣಗಳನ್ನು ಬೆಳೆಸಿಕೊಂಡರು.
ಸಾಮಾಜಿಕ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರವನ್ನು ಕಂಡುಹಿಡಿಯುತ್ತಾ ಮುನ್ನಡೆಯುವಾಗ ಜನರ ಪ್ರೀತಿ-ವಿಶ್ವಾಸಗಳಿಗೆ ಪಾತ್ರರಾದರು. ಇದರ ದೆಸೆಯಿಂದಲೇ ಪ್ರಪ್ರಥಮವಾಗಿ 1996ರಲ್ಲಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಲು ಅವಕಾಶ ದೊರಕಿತು. ಸಂಸದರಾದ ಮೇಲೆ ಇವರ ಕಾರ್ಯದಕ್ಷತೆ, ಕ್ರಿಯಾಶೀಲತೆ ಮತ್ತು ಚಟುವಟಿಕೆಗಳನ್ನು ಗಮನಿಸಿದ ಬಿ.ಜೆ.ಪಿ ಪಕ್ಷ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಿತು. ದಿನೇದಿನೇ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಸತತವಾಗಿ 6 ಬಾರಿ ಸಂಸದರಾರಿ, 3 ಬಾರಿ ಸಚಿವರಾಗಿ ಸೋಲಿಲ್ಲದ ಸರದಾರನೆಂಬ ಖ್ಯಾತಿಗೆ ಪಾತ್ರರಾದರು.
ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿ ಅತ್ಯುತ್ಮ ಹೆಸರುಗಳಿಸಿದ ಮುಖಂಡರ ಪ್ರಶಂಸೆಗೆ ಒಳಗಾಗಿ ಹಲವಾರು ಸಂಘಸಂಸ್ಥೆಗಳ ಪಕ್ಷದ ಹುದ್ದೆಗಳಲ್ಲಿ ಕೆಲಸಮಾಡುವ ಅವಕಾಶವನ್ನು ಪಡೆದುಕೊಂಡರು. ಪ್ರಸ್ತುತ ರಾಸಾಯನಿಕ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದು ದಕ್ಷತೆ ಮತ್ತು ಪ್ರಾಮಾಣಿಕತೆಗೂ ಹೆಸರಾಗಿದ್ದರು. ರಾಜಕೀಯ ನಿಪುಣತೆ ಮತ್ತು ತಂತ್ರಗಾರಿಕೆ ಬಲ್ಲವರಾಗಿದ್ದ ಇವರ ಅಕಾಲಿಕ ಮರಣ ನಿಜಕ್ಕೂ ದೇಶದ ಜನರಿಗೆ ತುಂಬಾ ದುಃಖವನ್ನುಂಟುಮಾಡಿದೆ ಎಂದರು.
ಸಮತಿ ಸಂಸ್ಥೆಯ ಅದ್ಯಕ್ಷ ಕೆ.ಆರ್.ದೇವರಾಜು ಮಾತನಾಡಿ ಅನಂತಕುಮಾರ್ ಕೇವಲ ಒಬ್ಬ ರಾಜಕಾರಣಿಯಾಗಿರದೆ ಹೃದಯವಂತರೂ ಆಗಿದ್ದರು. ಕೇಂದ್ರ ಮತ್ತು ರಾಜ್ಯಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವ ಸೇತುವೆಯಾಗಿದ್ದರು. ಭ್ರಷ್ಠಾಚಾರದಂತಹ ಅಪವಾದಗಳಿಂದ ದೂರವಿದ್ದು ಸಕ್ರೀಯರಾಜಕಾರಣದಲ್ಲಿ ತೊಡಗಿಸಿಕೊಂಡದ್ದರು. ಅವರ ಮರಣ ನಮಗೆಲ್ಲ ನೋವನ್ನುಂಟುಮಾಡಿದೆ. ಆದ್ದುದರಿಂದ ಅವರ ಸಾಧನೆ ತತ್ವ, ಆದರ್ಶ ಮೌಲ್ಯಗಳನ್ನು ನಾವೆಲ್ಲ ಮೈಗೂಡಿಸಿಕೊಂಡು ಮುನ್ನಡೆದರೆ ನಿಜಕ್ಕೂ ಸಾರ್ಥಕವೆಂದರು.
ಈ ಸಂದರ್ಭದಲ್ಲಿ ಎಸ್.ವಿ.ಪಿ ಮತ್ತು ಸುಮತಿ ಶಿಕ್ಷಣ ಸಂಸ್ಥೆಗಳ ನೌಕರವರ್ಗದವರೆಲ್ಲರೂ ಉಪಸ್ಥಿತರಿದ್ದರು. ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ