ಹುಳಿಯಾರು:
ಹುಳಿಯರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಸೇರಿದಂತೆ 4 ಮಂದಿ ಪ್ರಾಚಾರ್ಯರನ್ನು ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರುಗಳನ್ನಾಗಿ ನಾಮನಿರ್ದೇಶನ ಮಾಡಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ-2000 ರ ಪ್ರಕರಣ 28 (1) ರ ಅನ್ವಯ ಸರದಿ ಮತ್ತು ಜ್ಯೇಷ್ಠತೆಯ ಆಧಾರದ ಮೇಲೆ ಸಂಯೋಜಿನ ಕಾಲೇಜುಗಳ ನಾಲ್ಕು ಜನ ಪ್ರಾಂಶುಪಾಲರುಗಳನ್ನು ಸಿಂಡಿಕೇಟ್ ಸದಸ್ಯರುಗಳನ್ನಾಗಿ ದಿನಾಂಕ 09-04-2019 ರಿಂದ 08-04-2021 ರವರೆವಿಗೆ ಕುಲಪತಿಯವರ ಅನುಮೋದನೆ ಮೇರೆಗೆ ಸಿಂಡಿಕೇಟ್ ಸದಸ್ಯರುಗಳನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
ತಿಪಟೂರು ತಾಲೂಕಿನ ನೊಣವಿನಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎನ್.ಎಚ್.ಜಗದೀಶ್, ತುರುವೇಗೆರೆ ತಾಲೂಕಿನ ದಂಡಿನಶಿವರದ ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಪಿ.ಶಿವಾನಂದಯ್ಯ ಹಾಗೂ ತುಮಕೂರು ಶ್ರೀ ಸಿದ್ಧಗಂಗಾ ಕಲಾ ಕಾಲೇಜಿನ ಡಾ.ಆನಂದಕುಮಾರಿ ಅವರು ನಾಮನಿರ್ದೇಶನಗೊಂಡ ಪ್ರಾಚಾರ್ಯರುಗಳಾಗಿದ್ದಾರೆ.