ಉಪಚುನಾವಣೆಗೆ ಅಖೈರುಗೊಂಡ ಕಾಂಗ್ರೆಸ್ ಅಭ್ಯರ್ಥಿಗಳು

ಬೆಂಗಳೂರು

    ನಿರೀಕ್ಷೆಯಂತೆ ಶಿರಾ ಉಪಚುನಾವಣೆಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಆರ್.ಆರ್.ನಗರ ಕ್ಷೇತ್ರಕ್ಕೆ ಕುಸುಮಾ ಹನುಮಂತಪ್ಪ ಹೆಸರುಗಳನ್ನು ಎಐಸಿಸಿ ಅಖೈರುಗೊಳಿಸಿ ಪ್ರಕಟಿಸಿದೆ. ಆ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ,ಎಐಸಿಸಿ ಅಧ್ಯಕ್ಷರಿಗೆಶಿರಾ ಟಿಬಿ ಜಯಚಂದ್ರ, ಆರ್ ಆರ್ ನಗರಕ್ಕೆ ಹನುಮಂತ ರಾಯಪ್ಪ ಮಗಳು, ಡಿಕೆ ರವಿ ಪತ್ನಿ ಕುಸುಮಾ ಹೆಸರನ್ನು ಸೂಚಿಸಲಾಗಿತ್ತು.ಆ ಹೆಸರುಗಳಿಗೆ ಮುದ್ರೆ ಒತ್ತಿ ಕಾಂಗ್ರೆಸ್ ವರಿಷ್ಠರು ಹೆಸರನ್ನು ನನಗೆ ಕಳಿಸಿಕೊಟ್ಟಿದ್ದಾರೆ. ಒಳ್ಳೆಯ ದಿನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.

   ಸಿಬಿಐ ಮುಂದೆ ಇಟ್ಟುಕೊಂಡು ಮಾಡುವ ಚುನಾವಣೆ ಅಲ್ಲ.ಬಿಜೆಪಿ ದಾಳಿಗೆ ತಂತ್ರನೂ ಇಲ್ಲ , ಪ್ರತಿತಂತ್ರವೂ ಇಲ್ಲ.ಈ ಸರ್ಕಾರಗಳ ಜನವಿರೋಧಿ ಆಡಳಿತ ಬಗ್ಗೆ ಜನರಿಗೆ ಒಂದು ಸಂದೇಶ ಹೋಗಬೇಕು.ಜನರು ಈ ಸರ್ಕಾರಗಳಿಂದ ಕಷ್ಟ ಅನುಭವಿಸುತ್ತಿದ್ದಾರೆ.ರಾಜ್ಯದ ಜನ ಮೋದಿ, ಯಡಿಯೂರಪ್ಪ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಷ್ಟೆ ಎಂದರು.ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಆರ್.ಆರ್.ನಗರಕ್ಕೆ ಕುಸುಮಾ,ಶಿರಾಗೆ ಮಾಜಿ ಸಚಿವ ಜಯಚಂದ್ರರಿಗೆ ಎಐಸಿಸಿ ಅಧಿಕೃತ ಟಿಕೆಟ್ ಘೋಷಣೆ ಮಾಡಿದೆ.
ಕುಸುಮಾ ಬಹಳ ಉತ್ತಮ ಅಭ್ಯರ್ಥಿಯಾಗಿದ್ದು,ಸುಶಿಕ್ಷಿತರಾಗಿದ್ದಾರೆ.ಜಯಚಂದ್ರ ಕೂಡ ಪ್ರಬಲ ಸ್ಪರ್ಧಿಯೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಡಿಕೆಶಿ ಮೇಲೆ ಸಿಬಿಐ ದಾಳಿಯಾಗಿದೆ.ಇದನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ.ಬಿಜೆಪಿ,ಜೆಡಿಎಸ್ ಇಲ್ಲಿಯವರೆಗೂ ಕ್ಯಾಂಡಿಡೇಟ್ ಹಾಕಿಲ್ಲ.ಶಿರಾದಲ್ಲೂ ಅವರಿಗೆ ಅಭ್ಯರ್ಥಿಗಳು ಸಿಕ್ಕಿಲ್ಲ. ಸಿಬಿಐ ವಿಚಾರವನ್ನೇ ಜನರ ಮುಂದೆ ಇಟ್ಟು ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸಿ ಚುನಾವಣೆ ಎದುರಿಸುವುದಾಗಿ ಹೇಳಿದರು.

    ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ.ಆರ್.ಆರ್.ನಗರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.ಟ್ವೀಟ್ ಮೂಲಕ ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಟಿಕೆಟ್ ನೀಡಿದ ವರಿಷ್ಠರಿಗೆ ಧನ್ಯವಾದ ಸಲ್ಲಿಸಿದ್ದಾರೆ.

     ಕಾಂಗ್ರೆಸ್ ಪಕ್ಷಕ್ಕೆ ತಂದೆ ಹನುಮಂತರಾಯಪ್ಪ ಮಾಡಿರುವ ಸೇವೆ ಗುರುತಿಸಿ ನನಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ , ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ,ಸಂಸದ ಡಿ.ಕೆ ಸುರೇಶ್ ಹಾಗೂ ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲಾ ನಾಯಕರುಗಳಿಗೂ ಆಭಾರಿಯಾಗಿದ್ದೇನೆ . ಕ್ಷೇತ್ರದ ಎಲ್ಲಾ ಮುಖಂಡರುಗಳ ಹಾಗೂ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ವಿಜಯ ಪತಾಕೆ ಹಾರುವಂತೆ ಮಾಡುವ ಜವಾಬ್ದಾರಿ ನನ್ನದು . ನನ್ನ ದೊಡ್ಡಪ್ಪನವರು ಕೋವಿಡ್ -19 ನಿಂದಾಗಿ ಮೃತಪಟ್ಟಿರುವ ಕಾರಣ ಈ ಕ್ಷಣದಲ್ಲಿ ಪತ್ರಕರ್ತ ಮಿತ್ರರಿಗೆ ಪ್ರತಿಕ್ರಿಸುವುದಕ್ಕಾಗಲೀ , ಕಾರ್ಯಕರ್ತರೊಂದಿಗೆ ಸಂಭ್ರಮಿಸಲಾಗಲೀ ಆಗುತ್ತಿಲ್ಲ . ಕ್ಷಮೆ ಇರಲಿ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link