ಸೆ. 12 ರಂದು ರಾಜ್ಯಾದ್ಯಂತ ಧರಣಿ : ಕಾಂಗ್ರೆಸ್

ಬೆಂಗಳೂರು

    ರಾಜ್ಯದ ನೆರೆ ಮತ್ತು ಬರ ಸಮಸ್ಯೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಕಾರಣ ನೀಡಿ ಸೆ. 12 ರಂದು ರಾಜ್ಯಾದ್ಯಂತ ಧರಣಿ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.ಈ ಸಂಬಂಧಕರ್ನಾಟಕ ಪ್ರದೇಶಕಾಂಗ್ರೆಸ್ ಸಮಿತಿಯಿಂದ ವಿಶೇಷ ಆದೇಶ ಹೊರಡಿಸಲಾಗಿದೆ. ಅಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆಎಲ್ಲಜಿಲ್ಲಾ ಮತ್ತುತಾಲೂಕು ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡುರಾಜ್ಯ ಮತ್ತುಕೇಂದ್ರ ಸರ್ಕಾರದಕಣ್ಣುತೆರೆಸಲು ಹೋರಾಟ ನಡೆಸುವಂತೆಕರೆಕೊಡಲಾಗಿದೆ.

   ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿತನದಿಂದಾಗಿರಾಜ್ಯದ ಬರ- ನೆರೆ ಸಮಸ್ಯೆಗೆಸಿಗಬೇಕಾದ ಅನುದಾನ ಸಿಗುತ್ತಿಲ್ಲ. ಇದರಿಂದಾಗಿಜನ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವಅಮಿತ್ ಶಾ ಸೇರಿದಂತೆಕೇಂದ್ರ ಸಚಿವ ಸಂಪುಟದ ಹಲವು ಸದಸ್ಯರುರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆದರೆಇದುವರೆಗೂ ಬಿಡಿಗಾಸುಅನುದಾನ ಬಿಡುಗಡೆ ಮಾಡಿಲ್ಲ.

    ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯದುರಂತಎಂದು ಘೋಷಿಸಿಲ್ಲ. ಹಣಕಾಸು ಪರಿಹಾರ ಒದಗಿಸದೇ ತಾರತಮ್ಯ ತೋರಿಸುತ್ತಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿರಾಜ್ಯದಜನರ ಸಂಕಷ್ಟ ಕೇಂದ್ರ ಮಟ್ಟದಲ್ಲಿ ಗಮನ ಸೆಳೆಯು ವಂತಹ ಕಾರ್ಯ ಮಾಡಬೇಕಾಗಿದೆ. ಜನ – ಜಾನುವಾರುಗಳ ಸಾವು ದೊಡ್ಡ ಮಟ್ಟದಲ್ಲಿ ಸಂಭವಿಸಿದೆ. ಜೊತೆ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಮನೆ-ಮಠಗಳು ಕುಸಿದಿವೆ. ಹೊಲ, ಗದ್ದೆಗಳಿಗೆ ನೀರು ನುಗ್ಗಿ ಬೆಳೆದ ಬೆಳೆ ನಷ್ಟವಾಗಿದೆ. ಇಷ್ಟೊಂದುದೊಡ್ಡ ಮಟ್ಟದ ಸಮಸ್ಯೆಯಾದರೂರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಕಾರಕ್ಕೆ ಮುಂದಾಗಿಲ್ಲ. ಈ ಧೋರಣೆ ಖಂಡಿಸಿ ಈಗಾಗಲೇ ಹಲವು ಹೋರಾಟಗಳನ್ನು ನಡೆಸುತ್ತಿದ್ದು, ಈ ಧರಣಿ ಸತ್ಯಾಗ್ರಹದ ಮೂಲಕ ಇನ್ನೊಮ್ಮೆ ಸರ್ಕಾರಗಳ ಕಣ್ಣುತೆರೆಸುವ ಪ್ರಯತ್ನ ಮಾಡಬೇಕಿದೆಎಂದುಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap