ಅಮಿತ್ ಶಾ, ಬಿಎಸ್‌ವೈ ರಾಜೀನಾಮೆಗೆ ಆಗ್ರಹ

ದಾವಣಗೆರೆ

      ಅನರ್ಹ ಶಾಸಕರ ಪರವಾಗಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಡಿಯೊದಿಂದಾಗಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆದು ಮೈತ್ರಿ ಸರ್ಕಾರ ಕೆಡವಿರುವುದು ಜಗಜ್ಜಾಹೀರು ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಆಗ್ರಹಿಸಿದರು.

     ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನರ್ಹ ಶಾಸಕರ ಪರವಾಗಿ ಮಾತನಾಡಿರುವುದಲ್ಲದೇ, ಅಮಿತ್ ಶಾ ಅವರ ಅಣತಿಯಂತೆ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಅವರ ಕ್ಷೇತ್ರಗಳ ಮತದಾರರು, ಕುಟುಂಬದ ಸದಸ್ಯರಿಂದ ದೂರ ಮಾಡಿ ಹೋಟೆಲ್‌ನಲ್ಲಿ ಇಟ್ಟದ್ದು ಸೇರಿದಂತೆ ಹಲವು ಪ್ರಮುಖ ಅಂಶಗಳು ಬಿಎಸ್‌ವೈ ಆಡಿಯೊ ಸೋರಿಕೆಯಿಂದ ಗೊತ್ತಾಗಿದೆ. ಆದ್ದರಿಂದ ನೈತಿಕ ಹೊಣೆಹೊತ್ತು ಬಿ.ಎಸ್.ಯಡಿಯೂರಪ್ಪ ಮತ್ತು ಅಮಿತ್ ಶಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ಜನರ ಮತ್ತು ಸುಪ್ರೀಂ ಕೋರ್ಟ್ನ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.

    ಬಿಜೆಪಿ ಯಾವ ರೀತಿಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕತ್ತು ಹಿಚುಕಿ, ವಾಮಮಾರ್ಗದ ಮೂಲಕ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ ಎಂಬುದು ಯಡಿಯೂರಪ್ಪನವರ ಆಡಿಯೊ ಸೋರಿಕೆಯಿಂದ ಜಗಜ್ಜಾಹೀರಾಗಿದೆ. ಅಲ್ಲದೇ, ಈ ಆಡಿಯೋ ಅನ್ನು ಸುಪ್ರೀಂ ಕೋರ್ಟ್ ಸಾಕ್ಷಿಯಾಗಿ ಪರಿಗಣಿಸುವುದಾಗಿ ಹೇಳಿರುವುದು ಕಾಂಗ್ರೆಸ್‌ಗೆ ಮೊದಲ ಹಂತದಲ್ಲಿ ಸಿಕ್ಕ ಜಯವಾಗಿದೆ ಎಂದು ಹೇಳಿದರು.

ಕಟೀಲ್-ಸವದಿ ಪ್ಲಾನ್:

     ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂಬ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹಾಗೂ ಉಪ ಮುಖ್ಯಮಂತ್ರಿ ಸವದಿ ಇಬ್ಬರು ಪ್ಲಾನ್ ಮಾಡಿ ಬಿಎಸ್‌ವೈ ಆಡಿಯೊ ಲೀಕ್ ಮಾಡಿರುವ ಸಾಧ್ಯತೆ ಇದ್ದು, ಈಗ ಪಕ್ಷದಲ್ಲಿ ಆಂತರಿಕ ತನಿಖೆ ಮಾಡಿಸುವುದಾಗಿ ಹೇಳುತ್ತಿರುವ ಕಟೀಲ್ ನಿಲುವು ಅಪರಾಧಿಯೊಬ್ಬ ಅಪರಾಧದ ಬಗ್ಗೆ ತನಿಖೆ ಏರ್ಪಾಡು ಮಾಡುವಂತಿದೆ ಎಂದು ಮಾರ್ಮಿಕವಾಗಿ ನುಡಿದರು.

ನಿದ್ರಿಸಲು ಬಿಡದ ಕಟೀಲ್:

     ಬಿಎಸ್‌ವೈ ಮುಖ್ಯಮಂತ್ರಿಯಾಗುತ್ತಿದ್ದAತೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ನಳೀನ್‌ಕುಮಾರ್ ಕಟೀಲ್ ಆರಂಭದಿAದಲೂ ಯಡಿಯೂರಪ್ಪನವರನ್ನು ನಿದ್ದೆ ಮಾಡಲು ಹಾಗೂ ಆಡಳಿತ ನಡೆಸಲು ಬಿಡುತ್ತಿಲ್ಲ. ಇದಕ್ಕೆ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಸಲಹೆಯನ್ನೇ ಧಿಕ್ಕರಿಸಿರುವುದು ಮತ್ತು ಬಿಜೆಪಿ ಕಚೇರಿಯಲ್ಲಿದ್ದ ಯಡಿಯೂರಪ್ಪನವರ ಆಪ್ತರನ್ನು ಹೊರ ಹಾಕಿದ್ದೆ ಉತ್ತಮ ಉದಾಹರಣೆಯಾಗಿದೆ ಎಂದರು.

ಪ್ರಧಾನಿ ಮೌನ ಮುರಿಯಲಿ:

      ಅನರ್ಹ ಶಾಸಕರ ಪೈಕಿ ಕೆಲವರು ಕೋಟ್ಯಂತರ ರೂ.ಗಳಿಗೆ ಮಾರಾಟವಾಗಿದ್ದರೆ, ಇನ್ನೂ ಕೆಲವರು ಐಟಿ, ಇಡಿ, ಸಿಬಿಐ ದಾಳಿಗೆ ಹೆದರಿ ಹೋಗಿದ್ದಾರೆ. ಸಂಚಿಹೊನ್ನಮ್ಮರ ಬಗ್ಗೆ ಮನ್‌ಕೀ ಬಾತ್‌ನಲ್ಲಿಮ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಆಡಿಯೊ ಬಗ್ಗೆಯೂ ಮೌನ ಮುರಿಯಬೇಕೆಂದು ಮನವಿ ಮಾಡಿದರು.

ಬಿಎಸ್‌ವೈ ಆಡಳಿತ ವಿಫಲ:

      ಯಡಿಯೂರಪ್ಪನವರ ನೂರು ದಿನದ ಆಡಳಿತವು ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಕಪಾಳ ಮೋಕ್ಷ ಆದಂತದಾಗಿದೆ. ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲ್ಲಾವಲಿ ಗಾಜಿ ಖಾನ್, ಅಶ್ರಫ್ ಅಲಿ, ಗಿರಿಧರ್, ಅಬು ಸಲೇಹಾ, ವಿನಯ್ ಜೋಗಪ್ಪನವರ್, ಮನೋಜ್, ಡಿ.ಶಿವಕುಮಾರ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link