ಹಗರಿಬೊಮ್ಮನಹಳ್ಳಿ:
ಹಣಬಲ ಹಾಗೂ ತೋಳ್ ಬಲದಿಂದ ಬಳ್ಳಾರಿಯ ಈ ಉಪಚುನಾವಣೆಯನ್ನು ಗೆಲ್ಲಬಲ್ಲೆನೆಂಬ ಭ್ರಮೆಯಲ್ಲಿರುವ ಕಾಂಗ್ರೆಸ್ಸಿಗರಿಗೆ ಇಲ್ಲಿಯ ಮತದಾರ ತಕ್ಕಪಾಠ ಕಲಿಸಲಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಪಟ್ಟಣದಲ್ಲಿ ನಡೆದ ಬಿಜೆಪಿಯ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರಕರ್ನಾಟಕದವರು ನನಗೆ ಓಟ್ ಹಾಕಿಲ್ಲವೆಂದು ಹೇಳಿ ಬಳ್ಳಾರಿ ಜಿಲ್ಲೆಗೆ ಈಬಾರಿಯ ಬಜೆಟ್‍ನಲ್ಲಿ ಒಂದು ಪೈಸೆ ಅನುದಾನವನ್ನುಸಹ ನೀಡಿಲ್ಲ ಹಾಗಾಗಿ ಬಳ್ಳಾರಿಯ ಜನತೆ ಸಮ್ಮಿಶ್ರ ಸರ್ಕಾರಕ್ಕೆ ಈ ಉಪಚುನಾವಣೆ ಮುಖಾಂತರ ಬುದ್ದಿ ಕಲಿಸಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜೆ.ಶಾಂತರವರು ಗೆಲ್ಲಬೇಕಿದ್ದರೆ ನಿಮ್ಮ ಒಂದು ಓಟು ವ್ಯರ್ಥವಾಗದಹಾಗೆ ಬಿಜೆಪಿ ಗುರುತಿಗೆಹಾಕಿ ಎಂದರು.
ದೇಶದ ಪ್ರಧಾನಿ ನರೇಂದ್ರಮೋದಿ ಬಗ್ಗೆ ಕೇವಲವಾಗಿ ಮಾತನಾಡುವ ಕಾಂಗ್ರೆಸ್‍ನವರಿಗೆ ನಾಚಿಕೆಯಾಗಬೇಕು. ವಿಶ್ವದ ಅಷ್ಟೂರಾಷ್ಟ್ರಗಳು ಮೋದಿಜೀಯನ್ನು ಒಪ್ಪಿಕೊಂಡಿವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಕನಕ ಪೀಠ ಕಾಗಿನೆಲೆಗೆ 40 ಕೋಟಿರೂಪಾಯಿ ನೀಡುವ ಮೂಲಕ ಅಭಿವೃದ್ಧಿ ಮಾಡಿದ್ದೆ ವಾಲ್ಮೀಕಿ ಜಯಂತಿ, ಕನಕ ಜಯಂತಿಯನ್ನು ಸರ್ಕಾರವೇ ಆಚರಿಸುವ ಮೂಲಕ ಆದಿನ ರಜೆಯನ್ನು ಘೋಷಿಸಿದ್ದು ನಮ್ಮ ಸರ್ಕಾರ. ಎಲ್ಲಾ ಜಾತಿ ಜನಾಂಗದವರಿಗೂ ಜಯಂತಿ ಆಚರಣೆಯನ್ನು ಜಾರಿಗೊಳಿಸಿದ ಈ ನಿಮ್ಮ ಯಡಿಯೂರಪ್ಪ ಹಾಗೂ ಶ್ರೀರಾಮುಲು ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಕಾಂಗ್ರೆಸ್‍ನವರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಎಲ್ಲಾ ಜನಾಂಗದವರು ಮತವನ್ನು ಹೇಗೆ ಹಾಕುತ್ತೀರಿ? ಒಂದು ಹೆಣ್ಣುಮಗು ಉಟ್ಟಿದರೆ ಅದು ಪ್ರಾಪ್ತ ವಯಸ್ಸಿಗೆ ಬರುವಷ್ಟೊತ್ತಿಗೆ 2 ಲಕ್ಷರೂಪಾಯಿ ಕೈಗೆ ಬರುವಂತೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ, ಅದೇರೀತಿ ಶಾಲಾಮಕ್ಕಳಿಗೆ ಸೈಕಲ್ ವಿತರಣೆ ಮಾಡಿದ್ದು ನಾವು, ರಾಜ್ಯದ ಉದ್ದಗಲಕ್ಕೆ ನೀರಾವರಿ ಯೋಜನೆಗಳನ್ನು ಮಾಡಿ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ನೀಡಿದ್ದು ನಮ್ಮ ಸರ್ಕಾರ.
ಆದರೆ ಈಗಿನ ರಾಜ್ಯ ಸರ್ಕಾರ ಏನುಮಾಡಿದೆ ಗಂಗಾಕಲ್ಯಾಣ, ಸುವರ್ಣಗ್ರಾಮ, ಸುವರ್ಣ ಭಾಗ್ಯ ಯೋಜನೆಗಳು ಈಗಾಗಲೇ ನಿಂತುಹೋಗಿವೆ. ಸಮ್ಮಿಶ್ರ ಸರ್ಕಾರದ ಸಾಲ ಮನ್ನಾದಿಂದ ಒಬ್ಬ ರೈತನ ಅಕೌಂಟ್‍ಗೂ ಒಂದು ಪೈಸೆ ಜಮಾ ಆಗಿಲ್ಲ ಆದ್ದರಿಂದ ಭ್ರಷ್ಟ, ಸ್ವಾರ್ಥ, ಕಾಂಗ್ರೆಸ್‍ನ್ನು ದೂರವಿಡಲು ಈ ಉಪಚುನಾವಣೆ ನಿಮಗೆ ಸುವರ್ಣ ಅವಕಾಶ ನೀಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರೈತ ವಿರೋಧಿ ನೀತಿಯಿಂದ ಜನ ಈಗಾಗಲೇ ಬೇಸತ್ತಿದ್ದಾರೆ. ಆದ್ದರಿಂದ ಬಳ್ಳಾರಿಯ ಬಿಜೆಪಿ ಅಭ್ಯರ್ಥಿ ಜೆ.ಶಾಂತಾರನ್ನು ಅಧಿಕ ಮತಗಳಿಂದ ಗೆಲ್ಲಿಸಿ ಎಂದರು.
ಮಾಜಿ ಶಾಸಕ ಕೆ.ನೇಮರಾಜ್‍ನಾಯ್ಕ ಮಾತನಾಡಿ ಮುಂದಿನ ಮುಖ್ಯಮಂತ್ರಿಯಾಗುವ ಬಿ.ಎಸ್.ಯಡಿಯೂರಪ್ಪನವರ ಕೈ ಬಲಪಡಿಸಲು ನಾವು ಈ ಉಪ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಿಂದ ಜೆ.ಶಾಂತರವರನ್ನು 25000ಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸುತ್ತೇವೆ. ಈ ಹಿಂದೆ ನಮ್ಮ ಅಧಿಕಾರ ಅವಧಿಯಲ್ಲಿ ಇಲ್ಲಿಯ 16 ಲಿಫ್ಟ್ ಇರಿಗೇಷನ್, ಡಣಾಯಕನಕೆರೆಗೆ ನೀರು ತುಂಬುವ ಯೋಜನೆ, 12 ಕೋಟಿ ವೆಚ್ಚದಲ್ಲಿ ಕ್ಯಾದಿಗಿಹಳ್ಳಿ ಸೇತುವೆ ನಿರ್ಮಾಣ ಈ ಎಲ್ಲಾ ಯೋಜನೆಗಳಿಗೂ ಬರಪೂರ ಅನುದಾನ ನೀಡಿದ್ದು ನಮ್ಮ ಯಡಿಯೂರಪ್ಪನವರು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಏನುಮಾಡುತ್ತಿದೆ. ನಮ್ಮ ಕಾರ್ಯಕರ್ತರಮೇಲೆಲ್ಲಾ ಜಾತಿ ನಿಂದನೆ ಕೇಸ್ ಹಾಕಿಸುತ್ತಾ ಮರಳುದಂಧೆ ಕೋರರಜೊತೆ ಕೈಜೋಡಿಸಿರುವ ಅಧಿಕಾರಿಗಳನ್ನು ಮಟ್ಟಹಾಕಲಾಗದ ಕಾಂಗ್ರೆಸ್ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದೆ. ಆದ್ದರಿಂದ ಈ ಲೋಕಸಭಾ ಉಪಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗುವುದರಿಂದ ನಾವು ಜೆ.ಶಾಂತಾರವರನ್ನು ಗೆಲ್ಲಿಸಲೇಬೇಕಾಗಿದೆ ಅದೇರೀತಿ ಅವರು ಪ್ರಚಂಡ ಬಹುಮತದಿಂದ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಂಗಳೂರು ಶಾಸಕ ಸಿ.ಟಿ. ರವಿ ಮಾತನಾಡಿ ರುಂಡ ಒಬ್ಬರದ್ದು ಮುಂಡ ಒಬ್ಬರದ್ದು ಎಂಬಂತಾಗಿರುವ ರಾಜ್ಯ ಸಮಿಶ್ರ ಸರ್ಕಾರವನ್ನು ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರುಂಡ ಮುಂಡಗಳನ್ನು ಚಂಡಾಡಬೇಕಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಹೇಳಿದ ಮಾತುಗಳನ್ನು ತಪ್ಪಿರುವ ಸಮಿಶ್ರ ಸರ್ಕಾರಕ್ಕೆ ಜನತೆ ಬುದ್ದಿ ಕಲಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಜೆ.ಶಾಂತರವರನ್ನು ಗೆಲ್ಲಿಸುವ ಮೂಲಕ ಉದುರಿ ಹೋಗುವ ಸಮ್ಮಿಶ್ರ ಸರ್ಕಾರ ಮುನ್ನುಡಿಯಾಡಬೇಕಿದೆ ಎಂದರು .
ಅಭ್ಯರ್ಥಿ ಜೆ. ಶಾಂತ ಮಾತನಾಡಿ ಬಿಜೆಪಿ ಅಧಿಕಾರದಲ್ಲಿದ್ದರೆ ಮಾತ್ರ ರಾಜ್ಯ ಅಭಿವೃದ್ಧಿ ಸಾಧ್ಯ 108 ಆಂಬ್ಯೂಲೆನ್ಸ್ ಹಾಗೂ ಬಡವರಿಗೆ ಅನುಕೂಲವಾಗಿರುವ ವಾಜಪೇಯಿ ಆರೋಗ್ಯ ಕಾರ್ಡ್ ಜಾರಿಗೆ ತಂದಿದ್ದು ಶ್ರೀರಾಮುಲುರವರು ಅದು ಯಡಿಯೂರಪ್ಪನವರ ಸರ್ಕಾರದಲ್ಲಿ ಇದು ಬಡವರಪಾಲಿನ ಸಂಜೀವಿನಿಯಾಗಿದೆ ಶ್ರೀರಾಮುಲು ನಿಮ್ಮ ಮನೆಯ ಮಗನಿದ್ದಹಾಗೆ ನನ್ನನ್ನು ನಿಮ್ಮ ಮನೆಯ ಮಗಳೆಂದುಕೊಂಡು ‘ಉಡಿಅಕ್ಕಿ’ ತುಂಬವ ಮೂಲಕ ಲೋಕಸಭೆಗೆ ಕಳುಹಿಸಿಕೊಡಿ ನಾವು ಕಡಿಮೆ ಓದಿರಬಹುದು ಆದರೆ ವೇದಿಕೆ ಮೇಲೆ ಕೂಡುವುದಕ್ಕಿಂತ ಜನಸಾಮಾನ್ಯರ ಮಧ್ಯದಲ್ಲಿ ಇದ್ದುಕೊಂಡು ಜನಸೇವೆ ಮಾಡತ್ತಾ ಬಂದಿದ್ದೇವೆ. ನಾನು ಎಂ.ಪಿ. ಆಗಿದ್ದಾಗ ಯಾವುದೇ ಧರ್ಪ ದೌರ್ಜನ್ಯ ಮಾಡಿಲ್ಲ ನಿಮ್ಮ ಯಾವುದೇ ಸಮಸ್ಯೆಬಗ್ಗೆ ಒಂದು ಪೋನ್‍ಕಾಲ್ ಮಾಡಿ ನಿಮ್ಮ ಮನೆಗೆ ಬಂದು ಕಟ್ಟೆಯಮೇಲೆ ಕುಳಿತು ಸಮಸ್ಯೆ ಬಗೆಹರಿಸುತ್ತೇನೆ. ನಮ್ಮ ಬಗ್ಗೆ ಕಾಂಗ್ರೆಸ್‍ನವರು ಏನೇ ಹೇಳಿದರು ಬಳ್ಳಾರಿ ಜಿಲ್ಲೆಯ ಮತದಾರರು ತಲೆಕೆಡಿಸಿಕೊಳ್ಳುವುದಿಲ್ಲ. ನಾಯಿಗಳ ಬೊಗಳಿಕೆಯನ್ನು ಅವರೆಂದೂ ಇಷ್ಟಪಡುವುದಿಲ್ಲ ನನ್ನನ್ನು ಗೆಲ್ಲಿಸುವುದರಿಂದ ನಿಮ್ಮ ಮನೆ ಮಗಳು ನಿಮ್ಮ ಮನೆಬಾಗಿಲು ಕಾಯುತ್ತಾಳೆ ಎಂಬ ಭರವಸೆಯನ್ನು ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಸದ ಕರಡಿಸಂಗಣ್ಣ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಶಾಸಕ ರಾಮಪ್ಪ ಲಮಾಣಿ, ಮಹಿಳಾ ಮೋರ್ಚಾದ ಶಶಿಕಲಾ, ವೀಣ, ಕ್ಷೇತ್ರಾಧ್ಯಕ್ಷ ನರೆಗಲ್ ಕೊಟ್ರೇಶ್, ಪ್ರಧಾನ ಕಾರ್ಯದರ್ಶಿ ಬಿ.ಜೆ.ಶರಣಪ್ಪ, ಡಾ|| ಅಜ್ಜಯ್ಯ, ಬಂಗಾರಿ ಮಂಜುನಾಥ, ಕಿನ್ನಾಳ ಸುಭಾಷ್, ಕೆ.ರೋಹಿತ್, ಚಿಮ್ನಳ್ಳಿ ಸಿದ್ದಪ್ಪ, ರಾಜುಪಾಟೀಲ್, ಚೋಳರಜ್, ಚಿತ್ವಾಡ್ಗಿ ಪ್ರಕಾಶ್, ಹುಳ್ಳಿ ಮಂಜುನಾಥ, ಸೂರ್ಯಬಾಬು, ಮೃತ್ಯುಂಜಯ ಬದಾಮಿ, ರಾಜಲಿಂಗಪ್ಪ, ಬಿ.ಶ್ರೀನಿವಾಸ್, ಬಸವರಾಜ ಬಡಿಗೇರ, ನಿಂಗಪ್ಪ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
