ದಾವಣಗೆರೆ :
ಕಾಂಗ್ರೆಸ್ ಪಕ್ಷದಿಂದ ಮಾತ್ರ ರೈತರ ಹಿತ ಕಾಪಾಡಲು ಸಾಧ್ಯವೆಂದು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಾವಣಗೆರೆ ತಾಲ್ಲೂಕಿನ ಬೇತೂರು, ರಾಂಪುರ, ನಾಗರಕಟ್ಟೆ, ಮಲ್ಲಾಪುರ, ಕಾಡಜ್ಜಿ, ಪುಟಗನಾಳ್, ಮಾಗನಹಳ್ಳಿ, ಹಿರಿಯೂರು ಕ್ಯಾಂಪ್, ಬಿ.ಚಿತ್ತಾನಹಳ್ಳಿ, ಬಿ.ಕಲ್ಪನಹಳ್ಳಿ, ಚಿಕ್ಕಬೂದಿಹಾಳು, ದೇವರಹಟ್ಟಿ, ಬೂಸವ್ವನಹಳ್ಳಿ, ಕಡ್ಲೇಬಾಳು, ಹೊಸ ಕಡ್ಲೇಬಾಳು, ದೊಡ್ಡ ಓಬಜ್ಜಿಹಳ್ಳಿ/ಬದಿಯನಾಯ್ಕನತಾಂಡ, ಅರಸಾಪುರ, ಕಕ್ಕರಗೊಳ್ಳ, ಅವರಗೊಳ್ಳ, ದೊಡ್ಡಬಾತಿ, ನೀಲಾನಹಳ್ಳಿ, ಹಳೇಬಾತಿ ಗ್ರಾಮಗಳಲ್ಲಿ ಲೋಕಸಭಾ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ದೇಶದಲ್ಲಿ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಅನೇಕ ಡ್ಯಾಂಗಳನ್ನು, ನೀರಾವರಿ ಯೋಜನೆಗಳನ್ನು ರೂಪಿಸಿದೆ. ನಾವು ಸಹ ದಾವಣಗೆರೆ ಕೊನೆ ಭಾಗಕ್ಕೆ ನೀರು ತಲುಪಿಸಬೇಕೆಂಬ ಹಿನ್ನೆಲೆಯಲ್ಲಿ ಕೊನೆಭಾಗದ 5 ಕೆರೆಗಳಿಗೆ ನದಿಯಿಂದ ನೀರು ತಲುಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಮುಂದುವರೆಯಲು ಸಂಸದರ ಸಹಕಾರ ಅಗತ್ಯವಾಗಿದ್ದು, ನಮ್ಮ ಪಕ್ಷದ ಸಂಸದರಾದರೆ ಅನುಕೂಲವಾಗಲಿದೆ. ಆದ ಕಾರಣ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಹೆಚ್.ಬಿ.ಮಂಜಪ್ಪನವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದರು.
ಲೋಕಸಭಾ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಮಾತನಾಡಿ, ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಜಿಲ್ಲೆಯ ಎಲ್ಲಾ ಮುಖಂಡರುಗಳ ಶಿಫಾರಸ್ಸಿನಿಂದ ಇಂದು ನಾನು ಲೋಕಸಭಾ ಅಭ್ಯರ್ಥಿಯಾಗಿದ್ದು, ಅವರ ಸಹಕಾರದಿಂದ ಗೆಲುವು ನಿಶ್ಚಿತ. ಸಂಸದರಾದ ನಂತರ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತೇನೆಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಗನಹಳ್ಳಿ ಪರಶುರಾಮ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ರೇಣುಕಮ್ಮ ಕರಿಬಸಪ್ಪ, ಕಕ್ಕರಗೊಳ್ಳ ಬಸವನಗೌಡ್ರು, ರಾಘವೇಂದ್ರ ನಾಯ್ಕ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ನಂದಿಬಸಣ್ಣ, ಪತ್ರಿ ಬಸಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆ.ಆರ್.ಷಣ್ಮುಖಪ್ಪ, ಕೋಡಿಹಳ್ಳಿ ಜಯಣ್ಣ, ಮೇಕಾ ಮುರುಳಿಕೃಷ್ಣ, ಬಾತಿ ಉಮೇಶ್, ಡಾ|| ನಾಗಭೂಷಣ್, ರತ್ನಮ್ಮ ಪರುಶುರಾಮ್, ಎಪಿಎಂಸಿ ಸದಸ್ಯ ರೇವಣಸಿದ್ದಪ್ಪ, ಎಪಿಎಂಸಿ ಸದಸ್ಯ ಕೆ.ಜಿ.ಶಾಂತರಾಜ್, ಹಳ್ಳಿಕೇರಿ ಬಸಪ್ಪ, ಎಂ.ನಾಗಪ್ಪ, ಅಂಜಿಬಾಬು, ಎ.ಎಂ.ಬಸವರಾಜಪ್ಪ, ದೇವರಹಟ್ಟಿ ಶಮೀವುಲ್ಲಾ, ಶ್ರೀಮತಿ ಆಶಾ ಮುರುಳಿ, ಕಾಡಜ್ಜಿ ಚಂದ್ರಪ್ಪ, ಕಾಡಜ್ಜಿ ಮುರುಳಿ, ನಾಗರಕಟ್ಟೆ ಮಂಜಾನಾಯ್ಕ, ಕಾಡಜ್ಜಿ ಶಬೀರ್, ಎ.ಬಿ.ಪ್ರಭಾಕರ, ರುದ್ರಮುನಿ, ಕಲಪನಹಳ್ಳಿ ಸೋಮಣ್ಣ, ಬೂದಾಳ್ ಬಾಬು, ಮಲ್ಲಾಪುರ ತಿಪ್ಪೇಶ್, ತೋಟದ ರಾಜಣ್ಣ, ವಡ್ನಾಳ್ ರಾಜಣ್ಣ, ವಾಸಣ್ಣ ಕಕ್ಕರಗೊಳ್ಳ, ಆವರಗೊಳ್ಳ ವಿರೇಶ್, ಬಾತಿ ರಾಮು, ಹಳೇಬಾತಿ ಅಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ