ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಅವರ ಪತ್ನಿ ಪ್ರಚಾರ.

ಹೊಸಪೇಟೆ :

      ನಗರದ ಚಿತ್ರಕೇರಿ, ಬಾಣದಕೇರಿ, ಉಕ್ಕಡಕೇರಿ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರವಾಗಿ ಅವರ ಪತ್ನಿ ಡಾ.ಕೆ.ವಿ.ಮಂಜುಳಾರವರು ಭರ್ಜರಿ ಪ್ರಚಾರ ನಡೆಸಿದರು.

     ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನೊಳಗೊಂಡ ಕರ ಪತ್ರಗಳನ್ನು ಹಂಚಿದರು. ಅವರಿಗೆ ಕಾಂಗ್ರೆಸ್ ಯುವ ಮುಖಂಡ ಸಂದೀಪಸಿಂಗ್ ಸಾಥ್ ನೀಡಿದರು.ಈ ವೇಳೆ ಮಾತನಾಡಿದ ಸಂದೀಪಸಿಂಗ್, ಬಳ್ಳಾರಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ಉಗ್ರಪ್ಪನವರು ಅತ್ಯಧಿಕ ಮತಗಳಿಂದ ಜಯಗಳಿಸಲಿದ್ದಾರೆ.

     ಕಾಂಗ್ರೆಸ್ ಜೆಡಿಎಸ್ ಪಕ್ಷದ ಅನೇಕ ಜನಪರ ಕಾರ್ಯಕ್ರಮಗಳಾದ ರೈತರ ಸಾಲಮನ್ನಾ, ಬಡ್ಡಿರಹಿತ ಸಾಲ, ಅನ್ನಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ, ಬಡವರ ಬಂಧು, ಕಾಯಕ ಯೋಜನೆಗಳು ಪ್ರತಿಯೊಂದು ಮನೆಯನ್ನು ತಲುಪಿವೆ. ಹೀಗಾಗಿ ಪಕ್ಷದ ಅಭ್ಯರ್ಥಿ ಉಗ್ರಪ್ಪನವರ ಗೆಲುವು ಶತಸಿದ್ದ ಎಂದರು.

      ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ರೈತರ ಸಾಲಮನ್ನಾ ಮಾಡುತ್ತೇನೆಂದು ಘೋಷಿಸಿದ್ದಾರೆ. ಅದರಂತೆ ಪ್ರತಿಯೊಂದು ಬಡ ಕುಟುಂಬಗಳಿಗೆ ತಿಂಗಳಿಗೆ 6 ಸಾವಿರ ರೂ.ಗಳಂತೆ ವರ್ಷಕ್ಕೆ 72 ಸಾವಿರ ರೂ.ಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಹೀಗಾಗಿ ದೇಶದಲ್ಲಿ ರಾಹುಲ್ ಗಾಂಧಿಯವರ ಅಲೆ ಬೀಸುತ್ತಿದೆ.

     ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ ಎಂದು ಸಾಬೀತಾಗಿದೆ. ಹೀಗಾಗಿ ವಿಜಯನಗರ ಕ್ಷೇತ್ರದ ಮತಭಾಂಧವರು ಉಗ್ರಪ್ಪನವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಮುನ್ನಿಖಾಸಿಂ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link