ಹರಪನಹಳ್ಳಿ,
ಹರಪನಹಳ್ಳಿ ತಾಲೂಕಿಗೆ ಹೈದ್ರಾಬಾದ್ ಕರ್ನಾಟಕದ 371 ಜೆ ಸೌಲಭ್ಯ ಕಲ್ಪಿಸಿದ ಕಾಂಗ್ರೆಸ್ ಪಕ್ಷಕ್ಕೆ ತಾಲೂಕಿನ ಜನತೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ ಲತಾಮಲ್ಲಿಕಾರ್ಜುನ ಮತದಾರರಿಗೆ ಕೋರಿದ್ದಾರೆ.
ಅವರು ಪಟ್ಟಣದ ಹಡಗಲಿ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭಾ ಪೂರ್ವ ಬಾವಿ ಸಭೆಯಲ್ಲಿ ಪಾಲ್ಗೊಂಡು ಬುಧವಾರ ಮಾತನಾಡಿದರು. ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು 371 ಜೆ ಸೌಲಭ್ಯ ಆಗುವುದಿಲ್ಲ, ಎಂದು ಹೇಳಿದ್ದರು, ಮತ ಕೇಳಲು ಬಂದಾಗ ಅವರನ್ನು ಪ್ರಶ್ನಿಸಿ ಎಂದು ಅವರು ತಿಳಿಸಿದರು.
371 ಜೆ ಸೌಲಭ್ಯ ದೊರೆತ ನಂತರ ತಾಲೂಕಿಗೆ ಈಗಾಗಲೇ 37 ಕೋಟಿ ರು. ಅನುದಾನ ಪಡೆದಿದ್ದೇವೆ ಎಂದ ಅವರು ತಮ್ಮ ತಮ್ಮ ಹಳ್ಳಿಗಳಲ್ಲಿ ಮನೆ ಮನೆಗೆ ಈ ಕುರಿತು ಪ್ರಚಾರ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಎಚ್ .ಬಿ. ಮಂಜಪ್ಪ ಅವರ ಗೆಲುವಿಗೆ ಶ್ರಮಿಸಿ ಎಂದು ಅವರು ಕಾರ್ಯಕರ್ತರಿಗೆ ಹೇಳಿದರು.
ಒಂದೊಂದು ಮತಗಟ್ಟೆಗೆ 20 ಜರನ್ನು ಎಂ.ಪಿ.ರವೀಂದ್ರ ಯುವ ಶಕ್ತಿ ಪಡೆಗೆ ಸೇರಿಸಿದ್ದೇವೆ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದ ಅವರು ಹಿತ ಶತ್ರುಗಳ ಮಾತು ಕೇಳಬೇಡಿ ಎಂದು ಅವರು ತಿಳಿಸಿದರು.
ಜಿ.ಪಂ ಸದಸ್ಯ ಎಚ್ .ಬಿ. ಪರಶುರಾಮಪ್ಪ ಅವರು ಬೇರೆ ಪಕ್ಷಗಳಿಂದ ಕಾಂಗ್ರೆಸ್ ಪಕ್ಷ ಎಂದೂ ಸೋತಿಲ್ಲ, ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ ನವರೇ ಕಾರಣರಾಗುತ್ತಾರೆ, ಎಂದ ಅವರು ಇಡೀ ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗೆ 371 ಜೆ ಸೌಲಭ್ಯ ಸಿಗಲು ಯುಪಿಎ ಸರ್ಕಾರ ಕಾರಣ ಎಂದರು.
ಸಣ್ಣ ಪುಟ್ಟ ವ್ಯತ್ಯಾಸ ಸರಿ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಎಚ್ .ಬಿ. ಮಂಜಪ್ಪ ಅವರನ್ನು ಗೆಲ್ಸಿಸಬೇಕು ಎಂದು ಅವರು ಕೋರಿದರು.ಜಿ.ಪಂ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ಚಿದಾನಂದಪ್ಪ ಅವರು ಸೈರ್ಜಿಕಲ್ ಸ್ಟ್ರೈಕ್ ಹಿಂದಿನ ಯುಪಿಎ ಸರ್ಕಾರದಲ್ಲಿ ಮೂರು ಬಾರಿ ನಡೆದಿತ್ತು, ಆದರೆ ಅದು ಬಹಿರಂಗ ಮಾಡಿರಲಿಲ್ಲ, ಆದರೆ ಮೋದಿಯವರು ಚುನಾವಣೆಗಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.ರಾಮಮಂದಿರ ಬಿಟ್ಟು ಈಗ ಹಿಂದುತ್ವ ಹಿಡಿದಿದ್ದಾರೆ, ಇಂತಹ ಗಿಮಿಕ್ ಗಳಿಗೆ ಕಿವಿಗೊಡದೆ ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಎಂದು ಅವರು ಕೋರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ವಕೀಲ ಪ್ರಕಾಶ ಪಾಟೀಲ, ಕಿತ್ತೂರುಕೊಟ್ರಪ್ಪ, ಉದಯ ಶಂಕರ, ಜಾವೇದ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಮುಖಂಡರಾದ ಅಬ್ದುಲ್ ರಹಿಮಾನ,,ವಕೀಲ ವೆಂಕಟೇಶ, ನೀಲಗುಂದ ವಾಗೀಶ, ಹುಲ್ಲಿಕಟ್ಟಿ ಚಂದ್ರಪ್ಪ, ಕಟ್ಟಿ ಆನಂದಪ್ಪ, ಮೈದೂರು ರಾಮಣ್ಣ, ಅರುಣಪೂಜಾರ, ಜಾಕೀರ್ , ಜಯಲಕ್ಷ್ಮಿ, ಕುಲುಮಿ ಅಬ್ದುಲ್ಲಾ, ಶಮಿವುಲ್ಲಾ, ಹಾಲಮ್ಮ, ಚಿಕ್ಕೇರಿ ಬಸಪ್ಪ, ಬಾಗಳಿ ಹೊಸೂರಪ್ಪ, ಎಚ್ .ವಸಂತಪ್ಪ, ಅಶೋಕ, ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








