ಕಾಂಗ್ರೇಸ್ ಪ್ರಚಾರ ಸಭೆ

ಹಾವೇರಿ :

      ಜನರ ಬದುಕಿನ ಬಗ್ಗೆ ಸಮಸ್ಯೆಗಳ ಬಗ್ಗೆ ನೈಜ ಅನುಭವ ಹೊಂದಿರುವ ಡಿ.ಆರ್.ಪಾಟೀಲರು ನನಗಿಂತಲೂ ನೂರು ಪಟ್ಟು ಉತ್ತಮ ಅಭ್ಯರ್ಥಿ ಡಿ.ಆರ್ ಪಾಟೀಲ ಆಯ್ಕೆ ಮಾಡುವ ಮೂಲಕ ಹಾವೇರಿ ಲೋಕಸಭಾಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿ ಮಾಡಲು ಅವರಿಗೆ ಮತದಾರರು ಆರ್ಶಿವಾದ ಮಾಡುವಂತೆ ಮಾಜಿ ಸಚಿವ ಬಸವರಾಜ ಶಿವಣ್ಣನವರ ಹೇಳಿದರು.

       ತಾಲೂಕಿನ ಅಗಡಿ, ಶಿಬಾರ, ಹಾವನೂರ, ನೆಗಳೂರು ಹಾಗೂ ಹೊಸರಿತ್ತಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಲೋಕಸಭೆಗ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿದೆ. ಪಕ್ಷದ ವರಿಷ್ಠರು ನನಗಿಂತಲೂ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. 1987ರಿಂದ ಜಿಲ್ಲಾ ಪರಿಷತ್ ಸದಸ್ಯನಾದಾಗಿನಿಂದಲೂ ಇದುವರೆಗೂ ಅವರ ಜೊತೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದೇನೆ. ಕೇವಲ ಹಾವೇರಿಕ್ಷೇತದಲ್ಲ್ರಿ ಅಷ್ಟೇ ಅಲ್ಲ ಒಟ್ಟಾರೆ ಅಭಿವೃದ್ಧಿಗೆ ದೇಶದಲ್ಲೇ ಮಾದರಿ ಕ್ಷೇತ್ರವನ್ನು ಮಾಡಲು ಪಾಟೀಲರು ಲೋಕಸಭೆಗೆ ಆಯ್ಕೆಯಾದರೆ ಮಾತ್ರ ಸಾಧ್ಯ.

      ಕಳೆದ ಹತ್ತು ವರ್ಷಗಳಿಂದ ಸಂಸದರಾಗಿರುವ ಉದಾಸಿಯವರ ಬಗ್ಗೆ ಕ್ಷೇತ್ರದ ಜನತೆ ಅಸಮಾಧಾನ ಹೊಂದಿದೆ. ಅವರ ಸಾಧನೆ ಎಂದರೆಯಾರ ಕೈಗೂ ಸಿಗದೆ ಯಾವುದೇ ಕೆಲಸ ಮಾಡದೆ ಇರುವುದು ಅವರದೊಡ್ಡ ಸಾಧನೆ. ಜನಸಾಮಾನ್ಯರ, ರೈತರ, ಬಡವರ ಬಗ್ಗೆ ಕಾಳಜಿ ಇರುವ ಡಿ.ಆರ್.ಪಾಟೀಲರು ಸಂಸದರಾದರೆ ಈ ಕ್ಷೇತ್ರದ ಸುದೈವ. ಎಂದು ಹೇಳಿದರು.

      ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಮಾತನಾಡಿ ಕಾಂಗ್ರೇಸ್ ಪಕ್ಷ ಎಲ್ಲ ವರ್ಗದ ಜನರ ಪರವಾಗಿ ಕೆಲಸ ಮಾಡಲು ಬದ್ದವಾಗಿದ್ದು ತಮ್ಮ ಆರ್ಶಿವಾದದಿಂದ ಗೆಲ್ಲಲು ಹಾಗೂ ಈ ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ನೀಡುವಂತೆ ಮತದಾರರಲ್ಲಿ ವಿನಂತಿಸಿಕೊಂಡರು.

        ಈ ಸಂದರ್ಭದಲ್ಲಿ ಮಾಜಿ ಶಾಸಕ ರುದ್ರಪ್ಪ ಲಮಾಣಿ,ಎಂ.ಎಂ.ಹಿರೇಮಠ,ಎಂ.ಎಂ.ಮೈದೂರ, ಕೊಟ್ರೇಶಪ್ಪ, ಯಲ್ಲಪ್ಪ ಮಣ್ಣೂರ, ಬಸಪ್ಪಕುರವತ್ತಿ, ದತ್ತ ಹಾವನೂರ, ನಿಂಗಪ್ಪ ಬಣಕಾರ, ಬಸಪ್ಪ ಕಂಬಳಿ, ಸುಜಾತಪ್ಪ ನೆಗಳೂರ, ರಮೇಶಚವಡಿ, ನಾಗರಾಜಕಮ್ಮಾರ, ಸುಭಾನಿ ಚುಡಿಗಾರ, ಕಲೀಲಹಮ್ಮದ ಪಟ್ವೇಗಾರ, ಎ.ಜಿ.ಪಾಟೀಲ, ಜಯಶ್ರೀ ಹುಣಸಿಮರದ, ಶಂಕರ ಬಾಲಕ್ಕನವರ, ನಾಗನಗೌಡ ಪಾಟೀಲ, ಈರಣ್ಣ ಮೆಣಸಿನಕಾಯಿ ಹಾಗೂ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link