ಹುಳಿಯಾರು:
ಕೊರೊನಾ ವಿಷಯ ಸುಗ್ಗಿಯಾಗಿ ಮಾಡಿಕೊಂಡ ಸರ್ಕಾರ, ಪಿಪಿ ಕಿಟ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಆಕ್ಸಿಜನ್ ಸಿಲಿಂಡರ್, ಮಾಸ್ಕ್, ಗ್ಲೌಸ್ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಮಾಡಿರುವ ಅನುಮಾನ ಮೂಡಿದ್ದು ಇದು ಸಮಗ್ರ ತನಿಖೆಯಾಗಬೇಕು ಎಂದು ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಒತ್ತಾಯಿಸಿದರು.ಬ್ಲಾಕ್ ಕಾಂಗ್ರೆಸ್ ವತಿಯಿಂದ ಹುಳಿಯಾರಿನಲ್ಲಿ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅರಸು ಜಾರಿಗೊಳಿಸಿದ್ದ ಉಳುವವನೇ ಭೂಮಿ ಒಡೆಯ ಕಾಯ್ದೆ ತಿದ್ದುಪಡಿ ಮಾಡಿ ಧನಿಕರು ಮಾತ್ರ ಭೂಮಿ ಒಡೆಯರಾಗುವಂತೆ ಬಿಜೆಪಿ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂದರಲ್ಲದೆ ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆಗೂ ತಿದ್ದುಪಡಿ ತಂದು ಶೋಷಣೆ ಮಾಡಲಾಗುತ್ತಿದ್ದು ತಿದ್ದುಪಡಿ ತಕ್ಷಣೆ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಶಾಂಕ್ ನಿರ್ದೇಶಕ ಕೆ.ಸಿ.ಶಿವಕುಮಾರ್, ಪ.ಪಂ.ಮಾಜಿ ಸದಸ್ಶರುಗಳಾದ ಎಲ್ˌಆರ್.ಚಂದ್ರಶೇಖರ್, ಧನುಷ್ ರಂಗನಾಥ್, ಎಸ್ ಆರ್ ಎಸ್ ದಯಾನಂದ್, ದೇವಾನಂದ್, ಬಡಗಿರಾಮಣ್ಣ, ರಾಮಚಂದ್ರಯ್ಶ, ಮಧು, ಪಟೇಲ್ ರಾಜ್ ಕುಮಾರ್, ರಹಮತ್, ಜಾಫರ್ ಸಾಧಿಕ್, ತೇಜಸ್, ಸಕ್ಲೈನ್, ಪಂಕಜ್, ತಿಪ್ಪೇಶ್, ಲೋಕೇಶ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ