ತುರುವೇಕೆರೆ
ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದ್ದು, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಮಾರು ಹೋಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವುದಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ರಮೆಶ್‍ಬಾಬು ತಿಳಿಸಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರದ ನಿಮಿತ್ತ ಪಟ್ಟಣದ ಉದಯಭಾರತಿ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಅಂತ್ಯದ ವೇಳೆಗೆ ಚುನಾವಣೆ ಬರುವ ನಿರೀಕ್ಷೆಯಿದ್ದು ಚುನಾವಣಾ ಪೂರ್ವ ತಯಾರಿ ಕೈಗೊಂಡಿರುವುದಾಗಿ ತಿಳಿಸಿದರು.
ದೇಶದಲ್ಲಿ ಕಾಂಗ್ರೆಸ್ ಎಲ್ಲಾ ಪಕ್ಷಗಳಿಗೂ ಮಾತೃ ಪಕ್ಷವಾಗಿದ್ದು, ಇಂದಿಗೂ ತನ್ನದೇ ಆದ ಸ್ವಂತಿಕೆ ಹಾಗೂ ತತ್ವ ಸಿದ್ದಾಂತಗಳಡಿ ದೇಶದಲ್ಲಿ ಭದ್ರ ಬುನಾದಿ ಹಾಕಿದು,್ದ ದೇಶದ ಅಭಿವೃದ್ದಿಗೆ ತನ್ನದೇ ಆದ ಕೊಡುಗೆ ನೀಡಿದೆ. ಸೈದಾಂತಿಕ ನೆಲೆಗಟ್ಟಿನಲ್ಲಿ ಬೆಳೆದ ನನಗೆ ಕಾಂಗ್ರೆಸ್ ಉತ್ತಮ ಆಯ್ಕೆಯೆಂದು ಭಾವಿಸಿ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದಲೇ ಸ್ಪರ್ಧಿಸಲಿದ್ದು, ಪಕ್ಷವು ಟಿಕೆಟ್ ನೀಡುವ ಭರವಸೆಯಿದೆ. ಕಳೆದ ಬಾರಿ ನನ್ನ ಗೆಲುವಿಗೆ ಮತ ನೀಡಿದ ಶಿಕ್ಷಕರುಗಳು ಈ ಭಾರಿಯೂ ನನ್ನನ್ನು ಬೆಂಬಲಿಸುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಜೆಡಿಎಸ್‍ನ ರಾಷ್ಟ್ರಾಧ್ಯಕ್ಷರಾದ ಹಾಗೂ ಮಾಜಿ ಫ್ರದಾನ ಮಂತ್ರಿಯವರಾದ ದೇವೇಗೌಡರ ಬಗ್ಗೆ ನನಗೆ ಇಂದಿಗೂ ಅಪಾರ ಗೌರವವಿದೆ. ಆದರೆ ಜೆಡಿಎಸ್‍ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದ ನಿಷ್ಟಾವಂತರಿಗೆ ಬೆಲೆಯಿಲ್ಲದ ಕಾರಣ ಪಕ್ಷ ತೊರೆಯುವ ಸನ್ನಿವೇಶ ಒದಗಿ ಬಂತು. ನಾನು ಯಾರನ್ನೂ ದೂಷಿಸುವುದಿಲ್ಲ. ಕಾಂಗ್ರೆಸ್ ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಷ್ಟೆಯಿಂದ ನಿಭಾಯಿಸಲು ಸಿದ್ದನಿದ್ದೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ